ಬಾಗಲಕೋಟೆ : ಇಳಕಲ್ ನಲ್ಲಿ ಹಾಡಹಗಲೇ ಮನೆ ಬೀಗ ಮುರಿದು ಕಳ್ಳತನ ಮಾಡಿ ಬಂಗಾರ, ಬೆಳ್ಳಿ ನಗದು ದೋಚಿ ಪರಾರಿಯಾದ ಕಳ್ಳರು
ಬಾಗಲಕೋಟೆ ಜಿಲ್ಲೆ ಇಳಕಲ್ಲ ನಗರದಲ್ಲಿ ಹಾಡಹಗಲೇ ಕಳ್ಳತನ ಮಾಡಿ ಪರಾರಿಯಾಗಿದ್ದು ಕಳ್ಳರ ಹಾವಳಿ ಹೆಚ್ಚಾಗಿದ್ದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ
ಕಳೆದ ಒಂದು ವರ್ಷದಿಂದ ನಗರದಲ್ಲಿ ಅಲ್ಲಲ್ಲಿ ಮನೆಗಳ್ಳತನಗಳು ನಡೆಯುತ್ತಲೇ ಇವೆ. ಬುಧವಾರ ಹಾಡ ಹಗಲೇ ಯಾರೂ ಇಲ್ಲದ ವೇಳೆ ಹೂಂಚು ಹಾಕಿದ ಖದೀಮರು ಬಸವ ನಗರದ ಸಾಯಿ ಬಡಾವಣೆಯಲ್ಲಿರುವ
ಮಲ್ಲಿಕಾರ್ಜುನ ಕುಂಬಾರ ಎಂಬುವವರ ಮನೆಯ ಬಾಗಿಲು ಮುರಿದು ಒಳ ನುಗ್ಗಿ ಟ್ರೇಜರಿ ಬಾಗಿಲು ಮುರಿದು 40 ಗ್ರಾಮ ಬಂಗಾರ 70 ಗ್ರಾಂ ಬೆಳ್ಳಿ 8000 ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಮನೆಗೆ ಬೀಗ ಹಾಕಿಕೊಂಡು
ಈ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಿದ್ದರು. ಬಂದು ನೋಡಿದಾಗ ಕಳ್ಳತನವಾಗಿದ್ದು ಆಘಾತವಾಗಿ ಮನೆ ಕಳ್ಳತನದ ಬಗ್ಗೆ ಮನೆ ಒಡತಿ ಕಣ್ಣೀರಿಟ್ಟಿದ್ದಾರೆ.
ಕಳ್ಳರ ಹಾವಳಿಯನ್ನು ನಿಯಂತ್ರಣಕ್ಕೆ ತರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Laxmi News 24×7