Breaking News

ಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್​ಗೆ 5 ನಿಮಿಷದ ಕೆಲಸ: ಬೊಮ್ಮಾಯಿ

Spread the love

ಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್​ಗೆ 5 ನಿಮಿಷದ ಕೆಲಸ: ಬೊಮ್ಮಾಯಿ

ಹಾವೇರಿ: “ಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಐದು ನಿಮಿಷದ ಕೆಲಸ. ಆದರೆ ಅದನ್ನು ಜಾರಿ ಮಾಡುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ” ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ತಮಿಳುನಾಡಿನಲ್ಲಿ ಇವರದೇ ಮಿತ್ರ ಪಕ್ಷ ಡಿಎಂಕೆ ಅಡಳಿತದಲ್ಲಿದೆ. ಇವರು ಮನಸ್ಸು ಮಾಡಿದರೆ ಐದೇ ಐದು ನಿಮಿಷದಲ್ಲಿ ಮೇಕೆದಾಟು ಯೋಜನೆ ಜಾರಿ ಸಮಸ್ಯೆ ಬಗೆಹರಿಸಬಹುದು” ಎಂದರು.ನಾವು ಮೇಕೆದಾಟು ಯೋಜನೆಗೆ ಒಪ್ಪಿಗೆ ಪಡೆಯುತ್ತೇವೆ. ಬಿಜೆಪಿಯವರು ಎತ್ತಿನಹೊಳೆ ಯೋಜನೆಗೆ ಒಪ್ಪಿಗೆ ನೀಡುತ್ತಾರಾ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಸವಾಲಿಗೆ ಉತ್ತರಿಸಿದ ಅವರು, “ಈಗಾಗಲೇ ಕಳಸಾ ಬಂಡೂರಿ ನಾಲೆ ಯೋಜನೆಗೆ ಒಪ್ಪಿಗೆ ನೀಡಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಪರಿಸರ ಇಲಾಖೆ ಸಹ ಒಪ್ಪಿಗೆ ನೀಡಲಿದೆ. ಎತ್ತಿನಹೊಳೆ ಯೋಜನೆಗೆ ಅಂತಾರಾಜ್ಯ ವ್ಯಾಜ್ಯಕ್ಕೆ ಬರುವುದೇ ಇಲ್ಲ” ಎಂದು ತಿಳಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ