ಹಾವೇರಿ: ಹಾವೇರಿ ಹಾಲು ಉತ್ಪಾದಕರ ಆಕ್ರೋಶಕ್ಕೆ ಮಣಿದ ಹಾವೆಮುಲ್ ಒಕ್ಕೂಟ ಹಾಲಿನ ದರವನ್ನು 2.50 ರೂ.ಗೆ ಏರಿಸಿ ಏಪ್ರಿಲ್ 1 ರಿಂದ ಜಾರಿಗೊಳಿಸಿದೆ. ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿರುವ ಹಾವೆಮುಲ್ನ ಅಧ್ಯಕ್ಷ ಮಂಜನಗೌಡ ಪಾಟೀಲ್ ಹಾಲಿನ ದರ ಏರಿಕೆ ಬಗ್ಗೆ ವಿವರಿಸಿದ್ದಾರೆ.
“ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘ ಒಕ್ಕೂಟ 28/03/25ರ ಹಾಲಿನ ದರ ಪರಿಷ್ಕರಣೆ ಆದೇಶವನ್ನು ಹಿಂಪಡೆದು ದಿನಾಂಕ 1/04/25 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ 34.05 ಪೈಸೆ ರೂ. ನಂತೆ ದರವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಒಟ್ಟು ಎರಡೂವರೆ ರೂಪಾಯಿ ಹೆಚ್ಚಳ ಮಾಡಲಾಗಿದೆ. ಮೊದಲು ಲೀಟರ್ಗೆ 31 ರೂ. ದರವಿತ್ತು”.
“ಈಗಾಗಲೇ ಒಕ್ಕೂಟ ನಷ್ಟದಲ್ಲಿ ಇದೆ. ಮುಂದೇನೂ ಹೀಗೆ ನಷ್ಟವಾಗುತ್ತಾ ಹೋದರೆ ಒಕ್ಕೂಟ ನಡೆಯುವುದಾದರೂ ಹೇಗೆ. ಇದರಿಂದ ರೈತರಿಗೂ ತೊಂದರೆಯಾಗಬಾರರು, ಪೇಮೆಂಟ್ ಸಮಸ್ಯೆಯಾಗಬಾರದು ಎಂಬ ದೃಷ್ಟಿಯಿಂದ ಎಲ್ಲರೂ ಚರ್ಚೆ ಮಾಡಿ ಈ ನಿರ್ಧಾರಕ್ಕೆ ಬರಲಾಗಿದೆ. ನಾವು ವ್ಯಾಪಾರ ಮಾಡಿಯೇ ಇದನ್ನೂ ಸರಿದೂಗಿಸಬೇಕಷ್ಟೆ. ಬೇರೆನೂ ಮಾರ್ಗವಿಲ್ಲ. ಸರಕಾರದಿಂದ ಸಹಾಯಧನ ಕೇಳುವ ಪ್ರಯತ್ನವೂ ಮಾಡುತ್ತೇವೆ. ಒಟ್ಟಾರೆ ಒಕ್ಕೂಟ ಹಾಗೂ ರೈತರ ಹಿತದೃಷ್ಟಿ ಕಾಯುವುದು ನಮ್ಮ ಮುಖ್ಯ ಉದ್ದೇಶ”.
“2,83, 500ರೂ. ಒಂದು ದಿನಕ್ಕೆ ನಮಗೆ ನಷ್ಟವಾಗುತ್ತಿದೆ. ತಿಂಗಳಿಗೆ 86 ಲಕ್ಷ 25 ಸಾವಿರ, ವರ್ಷಕ್ಕೆ 10 ಕೋಟಿ 35 ಲಕ್ಷ ರೂ. ನಷ್ಟವಾಗುತ್ತಿದೆ. ಹೀಗಾಗಿ ಗರಿಷ್ಠ 2.50 ರೂಪಾಯಿಗೆ ಏರಿಸಿದ್ದೇವೆ. ಸಚಿವ ಶಿವಾನಂದ ಪಾಟೀಲ್ರು ಬಾಂಬೆ, ಹುಬ್ಬಳ್ಳಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುತ್ತೇನೆ. ಹಾಗೇ, ಬೆಂಗಳೂರು ಕೆಎಂಎಫ್ಗೆ ವಹಿಸಿಕೊಡುವ ಎಂದು ಭರವಸೆ ನೀಡಿದ್ದಾರೆ. ಅದರ ಜತೆ ಸರಕಾರದಿಂದ ಏನು ಸವಲತ್ತು ನೀಡಲು ಸಾಧ್ಯ ಅದನ್ನು ಮಾಡಿಕೊಡುತ್ತೇನೆ ಎಂದು ತಿಳಿಸಿದ್ದಾರೆ. ನಮಗೆ ಬೇರೆ ಮಾರುಕಟ್ಟೆ ದೊರಕಿತೆಂದರೆ ನಷ್ಟವಾಗಲ್ಲ. ಇಂತಹ ನಷ್ಟಕ್ಕೆ ಸಹಾಯಧನ ಕೊಟ್ಟಿರುವಂತಹ ಉದಾಹರಣೆ ಎಲ್ಲಿಯೂ ಇಲ್ಲ. ನನಗೆ ಕೊಟ್ಟದ್ದೂ ಗೊತ್ತಿಲ್ಲ. ಆದರೆ ಸರಕಾರ ಷೇರು ಕೊಡಬಹುದು” ಎಂದು ಹಾವೆಮುಲ್ನ ಅಧ್ಯಕ್ಷ ತಿಳಿಸಿದ್ದಾರೆ.
Laxmi News 24×7