Breaking News

ಜಮೀನಿನಲ್ಲಿ ಎರಡು ‌ನಾಡಬಾಂಬ್ ಪತ್ತೆ

Spread the love

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದಲ್ಲಿ ಎರಡು ‌ನಾಡಬಾಂಬ್ ಪತ್ತೆಯಾಗಿದೆ.ಒಂದು ನಾಡಬಾಂಬ್ ಅನ್ನು ಕಚ್ಚಿ ಶ್ವಾನ ಸಾವನ್ನಪ್ಪಿದೆ. ಪ್ರಾಣಿಗಳನ್ನು ಬೇಟೆಯಾಡಲು ಬೇಟೆಗಾರರು ನಾಡಬಾಂಬ್ ಇಟ್ಟಿರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮಲ್ಲಿಕಾರ್ಜುನ ಗೌಡ ಎಂಬವರ ಜಮೀನಿನಲ್ಲಿ ನಾಡಬಾಂಬ್​ಗಳು ಪತ್ತೆಯಾಗಿವೆ.

ನಾಡಬಾಂಬ್​ಗಳಿಗೆ ಪ್ರಾಣಿಯ ಕೊಬ್ಬು ಸವರಿದ್ದರಿಂದ ನಾಯಿ ಕಚ್ಚಿದೆ ಎನ್ನಲಾಗುತ್ತಿದೆ. ಸ್ಫೋಟಕ ಅಧಿನಿಯಮದ ಅಡಿಯಲ್ಲಿ ವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ