Breaking News

ಬಿಎಸ್​ವೈ ಕುಟುಂಬ ರಾಜ್ಯಾಧ್ಯಕ್ಷರ ಸ್ಥಾನದಲ್ಲಿ ಇರುವವರೆಗೂ ಬಿಜೆಪಿಗೆ ಬರಲ್ಲ : ಯತ್ನಾಳ್

Spread the love

ಬೆಂಗಳೂರು : ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತವಾಗುವ ತನಕ ನಾನು ಬಿಜೆಪಿಗೆ ವಾಪಸ್ ಬರುವುದಿಲ್ಲ ಎಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರರನ್ನ ಇಟ್ಟುಕೊಂಡು ಯತ್ನಾಳ್ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದರು.

ಮಗನ ರಕ್ಷಣೆಗೋಸ್ಕರ ಪ್ರತಿಭಟನೆ : ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಯಡಿಯೂರಪ್ಪ ತನ್ನ ಮಗನ ರಕ್ಷಣೆಗೋಸ್ಕರ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಅಷ್ಟೇ. ತಾವು ಸಾಯುವುದಕ್ಕೂ ಮುನ್ನ ವಿಜಯೇಂದ್ರರನ್ನು ಮುಖ್ಯಮಂತ್ರಿಯಾಗಿ ನೋಡಬೇಕು. ಇನ್ನಷ್ಟು ಲೂಟಿ ಮಾಡಬೇಕು ಅನ್ನುವ ಆಸೆ ಯಡಿಯೂರಪ್ಪನವರದ್ದು. ಈಗಾಗಲೇ ಮಾರಿಷಸ್, ದುಬೈನಲ್ಲಿ ಇವರ ಆಸ್ತಿ ಇದೆ.
ಇನ್ನೂ ಜಗತ್ತಿನ ಎಲ್ಲಾ ಕಡೆ ಆಸ್ತಿ ಮಾಡಬೇಕು ಅನ್ನೋದು ಅವರ ಆಸೆ. ಇದಕ್ಕಾಗಿ ಇಷ್ಟು ವಯಸ್ಸಾದರು ಮನೆಯಲ್ಲಿ ಕೂರದೇ ಹೊರಗಡೆ ಬಂದು ಹೋರಾಟಕ್ಕೆ ಇಳಿದಿದ್ದಾರೆ. ಅಷ್ಟೇ ಹೊರತು ಬಡವರ ಪರವಾಗಲಿ, ರೈತರ ಪರವಾಗಲಿ ಅಲ್ಲ ಎಂದು ಬಿಎಸ್​ವೈ ವಿರುದ್ಧ ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ