Breaking News

ಕೇಂದ್ರ ಏರಿಕೆ ಮಾಡಿದ್ರೇ ರಾಜ್ಯ ಬೆಲೆ ಏರಿಕೆ ಮಾಡುವುದು ಅನಿವಾರ್ಯ…: ಗೃಹ ಸಚಿವ ಪರಮೇಶ್ವರ

Spread the love

ಕೇಂದ್ರ ಏರಿಕೆ ಮಾಡಿದ್ರೇ ರಾಜ್ಯ ಬೆಲೆ ಏರಿಕೆ ಮಾಡುವುದು ಅನಿವಾರ್ಯ…
ಪ್ರತಿಭಟನೆ ಕೈಗೊಂಡ ಬಿಜೆಪಿಗರಿಗೆ ಚಾಟಿ ಬೀಸಿದ ಗೃಹ ಸಚಿವ ಪರಮೇಶ್ವರ
ಕೇಂದ್ರ ಸರ್ಕಾರ ರಾಜ್ಯ ಕೊಡಬೇಕಾದ ಪಾಲು ನೀಡುತ್ತಿಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದ್ರೇ, ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎನ್ನುವ ಮೂಲಕ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುತ್ತಿರುವ ಬಿಜೆಪಿಗರಿಗೆ ಗೃಹ ಸಚಿವ ಜಿ. ಪರಮೇಶ್ವರ ಚಾಟಿ ಬೀಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಬೆಲೆ ಏರಿಕೆಗಳು ಪಾಲಿಸಿಗಳ ಆಧಾರದ ಮೇಲಾಗುತ್ತದೆ. ಕೇಂದ್ರ ಸರ್ಕಾರ ತೆರಿಗೆಯನ್ನು ಹೆಚ್ಚಿಸಿದರೇ, ರಾಜ್ಯ ಸರ್ಕಾರವು ತೆರಿಗೆಯನ್ನು ಹೆಚ್ಚಿಸುತ್ತದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದು, ಬರುತ್ತಿಲ್ಲ.
ಕೇಂದ್ರ ಸರ್ಕಾರ ನಮ್ಮ ಪಾಲುಕೊಡದಿದ್ದಾಗ,ನಮ್ಮ ಆದಾಯದ ಮೂಲಗಳನ್ನು ಹೆಚ್ಚಿಗೆ ಮಾಡಿಕೊಳ್ಳುವುದು ಅನಿವಾರ್ಯ. ರಾಜ್ಯ ನಡೆಸುವುದಕ್ಕೆ ಆದಾಯದ ಮೂಲ ಅವಶ್ಯಕ ಎನ್ನುವ ಮೂಲಕ ಬಿಜೆಪಿ ಪ್ರತಿಭಟನೆ ಕುರಿತಂತೆ ಗೃಹ ಸಚಿವರು ಪ್ರತಿಕ್ರಿಯಿಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ