Breaking News

ಅರ್ಬನ್ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮದ ಕಟೌಟ್ನಲ್ಲಿ ಸಿಎಂ ಫೋಟೋ ಮಾಯ..

Spread the love

ಅರ್ಬನ್ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮದ ಕಟೌಟ್ನಲ್ಲಿ ಸಿಎಂ ಫೋಟೋ ಮಾಯ..
ಜಮಖಂಡಿಯಲ್ಲಿಯೂ ಶುರುವಾಯಿತಾ ಸಿದ್ದು- ಡಿಕೆಶಿ ಕಟೌಟ್ ಪೊಲಿಟಿಕ್ಸ್
ಜಮಖಂಡಿಯಲ್ಲೂ ಶುರುವಾಯಿತಾ ಡಿಕೆಶಿ ಮತ್ತು ಸಿದ್ದು ಬಣದ ನಡುವೆ ಕಟೌಟ್ ಪಾಲಿಟಿಕ್ಸ್ ಎಂಬುದು ನಿನ್ನೆ ನಡೆದ ಜಮಖಂಡಿ ಅರ್ಬನ್ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮದ ಕಟೌಟ್ನಲ್ಲಿ ಸಿಎಂ ಫೋಟೋ ಮಾಯವಾಗಿದ್ದು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ
ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಕ್ಕಾಗಿ ನಗರದಲ್ಲಿ ಹಾಕಲಾಗಿದ್ದ ಕಟೌಟ್ಗಳಲ್ಲಿ ಸಿಎಂ ಫೋಟೋ ಮಾಯವಾಗಿತ್ತು ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ್ ಕಲೂತಿ ಡಿಕೆಶಿ ಅವರ ಕಟ್ಟಾ ಶಿಷ್ಯ ಹೀಗಾಗಿ ಕಟೌಟ್ಗಳಲ್ಲಿ ಸಿಎಂ ಫೋಟೋವನ್ನು ಉದ್ದೇಶಪೂರ್ವಕವಾಗಿಯೇ ಕೈ ಬಿಡಲಾಗಿತ್ತಾ ಎಂಬ ಅನುಮಾನ ಮೂಡಿತ್ತು ಡಿಕೆಶಿ ಮನ ಗೆಲ್ಲಲು ಜಮಖಂಡಿಯಲ್ಲಿ ಬೆಂಬಲಿಗರು ಈ ಕಟೌಟ್ ಪ್ಲಾನ್ ಮಾಡಿದ್ದಾರಾ ಎಂಬ ಚರ್ಚೆ ಕೂಡ ನಡೆದಿದೆ.
ಇನ್ನು ಮುರುಗೇಶ ನಿರಾಣಿ ಅವರ ಜೊತೆಗೆ ಡಿಕೆಶಿ ಅವರು 15 ನಿಮಿಷಗಳ ಕಾಲ ದೀರ್ಘ ಮಾತುಕತೆ ನಡೆಸಿದ್ದರು ವೇದಿಕೆಯಲ್ಲಿ ನಿರಂತರ ಸಮಾಲೋಚನೆಯಲ್ಲಿ ಅವರು ತೊಡಗಿದ್ದರು.
ದೆಹಲಿಯಲ್ಲಿ ಇಂದು ಸಂಸದ ಗೋವಿಂದ ಕಾರಜೋಳ ಡಿಕೆಶಿ ಅವರೊಂದಿಗೆ ಚರ್ಚೆ ಮಾಡಿದ್ದಾರೆ ಎರಡು ವಿಷಯಗಳು ರಾಜಕೀಯ ಪಡಸಾಲೆಯಲ್ಲಿ ವಿಭಿನ್ನವಾದ ಚರ್ಚೆಗೆ ಆಸ್ಪದ ನೀಡಿದೆ

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ