Breaking News

ಬೆಂಕಿ ತಗುಲಿ ಐದು ಬಣವಿ ನಾಲ್ಕು ಮನೆಗಳು ಸುಟ್ಟು ಕರಕಲು

Spread the love

ಹಾವೇರಿ: ಆಕಸ್ಮಿಕ ಬೆಂಕಿ ತಗುಲಿ ಐದು ಬಣವೆ ನಾಲ್ಕು ಮನೆಗಳು ಸುಟ್ಟು ಕರಕಲಾದ ಘಟನೆ ಹಾವೇರಿ ತಾಲೂಕು ಯಲಗಚ್ಚ ಗ್ರಾಮದಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗಿಗೆ ಬಣವಿಗಳು ಸಿಲುಕಿದ್ದು ಬೆಂಕಿಯ ಹೋಗೆ ಮುಗಿಲೆತ್ತರಕ್ಕೆ ವ್ಯಾಪಿಸಿ ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.

ಬೆಂಕಿಯ ಕೆನ್ನಾಲಿಗೆಗೆ ಐದು ಮೇವಿನ ಬಣವೆಗಳು, ನಾಲ್ಕು ಮನೆ ಹಾಗೂ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.

ಮೊದಲು ಮೇವಿನ ಬಣವೆಗಳಿಗೆ ಹತ್ತಿದ ಬೆಂಕಿ ನಂತರ ಬಣವೆ ಪಕ್ಕದಲ್ಲೇ ಇದ್ದ ರೈತರ ಮನೆಗಳಿಗೂ ವ್ಯಾಪಿಸಿದೆ. ಮೆಕ್ಕೆಜೋಳದ ತೆನೆಗಳ ರಾಶಿಗೂ ಬೆಂಕಿ ಬಿದ್ದು ತೆನೆಗಳು ಸುಟ್ಟು ಕರಕಲಾಗಿವೆ.ಗ್ರಾಮದ ನಾಗಪ್ಪ ಮಣ್ಣೂರು, ಪುಟ್ಟಪ್ಪ , ನಿಂಗಪ್ಪ ಮತ್ತು ಮುತ್ತಣ್ಣ ಎಂಬ ರೈತರಿಗೆ ಸೇರಿದ ಮೇವಿನ ಬಣವೆಗಳು ಸುಟ್ಟಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಅಗ್ನಿಶಾಮಕದಳದ ಸತತ ಪ್ರಯತ್ನದಿಂದ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಬೆಂಕಿ ಹತ್ತಲು ಕಾರಣ ತಿಳಿದು ಬಂದಿಲ್ಲ

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ