ಆಬಾ ಸ್ಫೋರ್ಟ್ಸ್ ಕ್ಲಬ್’ನ ವತಿಯಿಂದ ಆಯೋಜಿಸಿದ್ದ ದಿವ್ಯಾಂಗ ಈಜು ಸ್ಪರ್ಧೆಯ ಸಮಾರೋಪ
ಮಾರ್ಚ್ 3 ರಿಂದ 18 ರ ವರೆಗೆ ಬೆಳಗಾವಿಯ ಆಬಾ ಸ್ಫೋರ್ಟ್ಸ್ ಕ್ಲಬ್’ನ ವತಿಯಿಂದ ಬೆಳಗಾವಿಯ ಮಹಾನಗರ ಪಾಲಿಕೆ ಈಜುಕೊಳದಲ್ಲಿ ದಿವ್ಯಾಂಗ ಈಜು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಯಲ್ಲಿ ದಿವ್ಯಾಂಗ ಹಾಗೂ ಬಡ ಮಕ್ಕಳು ಹೀಗೆ 50 ಕ್ಕೂ ಹೆಚ್ಚೂ ಮಕ್ಕಳು ಭಾಗಿಯಾಗಿದ್ಧರು. ವಿಜೇತರಿಗೆ ಮಹಾಪೌರ ಮಂಗೇಶ ಪವಾರ್ ಮತ್ತು ನಗರಸೇವಕ ನಿತೀನ್ ಜಾಧವ್ ಅವರು ಪಾರಿತೋಷಕವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಆಬಾ ಕ್ಲಬ್’ನ ಶೀತಲ್ ಹುಲಬತ್ತೆ, ಅಮರ ಹೊನಗೇಕರ, ಶುಭಾಂಗಿ ಮಂಗಳೂರಕರ, ಜ್ಯೋತಿ ಪವಾರ, ಮಹಾದೇವ ಕೇಸರಕರ, ಸತೀಶ ಪಾಟೀಲ್, ರಾಜು ಪಾಟೀಲ್, ಹರೀಶ್ ವಾಚ್ಛಾಂನಿ, ಉಮೇಶ ಕಾಂಬಳೆ, ವಿನಾಯಕ ಅರ್ಕಸಾಲಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
Laxmi News 24×7