Breaking News

ರವಿವಾರ ದಿನಾಂಕ 23 ರಂದು ಬೆಳಿಗ್ಗೆ 9 ಸಂಜೆ 4: ಘಂಟೆ ವರೆಗೆ ಬೃಹತ್ ಉದ್ಯೋಗ ಮೇಳ

Spread the love

ಬೆಳಗಾವಿಯ ಕೌಶಲ್ಯ ಅಭಿವೃದ್ಧಿ ಉದ್ದಿಮೆ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಇನ್ನುಳಿದ ಸಂಘ ಸಂಸ್ಥೆಗಳ ಸಹಕಾರದಿಂದ ರವಿವಾರ ದಿನಾಂಕ 23 ರಂದು ಬೆಳಿಗ್ಗೆ 9 ಸಂಜೆ 4: ಘಂಟೆ ವರೆಗೆ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಇದರ ಲಾಭ ತೆಗೆದು ಕೊಳ್ಳಬೇಕೆ ಎಂದು ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಸಂಯೋಜಕ ಸಂತೋಷ ನಾವಲಗಿ ಕರೆ ನೀಡಿದರು.
ಗುರುವಾರ ರಂದು ಕಾಗವಾಡದ ಶಿವಾನಂದ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳ ಯಶಸ್ವಿಯಾಗಿ ಅಯೋಜಿಸಲು ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಬೆಳಗಾವಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಬೆಳಗಾವಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಬೆಳಗಾವಿ,ಮಲ್ಲಿಕಾರ್ಜುನ ವಿದ್ಯಾಪೀಠ ಬೆಳಗಾವಿ, ಶಿವಾನಂದ ಮಹಾ ವಿದ್ಯಾಲಯ ಕಾಗವಾಡ ಇವರ ಸಹಯೋಗದಿಂದ ಉದ್ಯೋಗ ಮೇಳ ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಳಗಾವಿಯ ಮಲ್ಲಿಕಾರ್ಜುನ ವಿದ್ಯಾಪೀಠದ ಅಧ್ಯಕ್ಷ ಗುರು ಗೌಡ ಪಾಟೀಲ ಉದ್ಯೋಗ ಮೇಳ ಗಡಿ ಭಾಗದಲ್ಲಿ ಇದೇ ಪ್ರಥಮ ಬಾರಿಗೆ ಆಯೋಜಿಸಲಾಗಿದೆ ಇಲ್ಲಿಯ ನಿರುದ್ಯೋಗಿಗಳಿಗೆ ಒಳ್ಳೆ ಅವಕಾಶ ಒದಗಿ ಬಂದಿದೆ, ಉದ್ಯೋಗ ಮೇಳದಲ್ಲಿ ಎಕಸ್, ನವ ಭಾರತ ಆಗ್ರೋ ಇಂಡಸ್ಟ್ರೀಸ್, ಮೇಡ್ ಪ್ಲಸ, ಪೇಟಿಎಂ, ಇಂತಹ ಅನೇಕ ಹೆಸರಾಂತ ಕಂಪನಿಗಳ ಅಧಿಕಾರಿಗಳು ಉದ್ಯೋಗ ಮೇಳದಲ್ಲಿ ಪಾಲಗೊಳ್ಳಲಿದ್ದಾರೆ.
ಎಸ್ ಎಸ್ ಎಲ್ ಸಿ ದಿಂದ ಪದವಿ ವರೆಗೆ ಓದಿರುವ ಮತ್ತು ಐಟಿಐ, ಡಿಪ್ಲೋಮಾ, ಬಿಇ,ಎಂಬಿಎ, ಎಂಕಾಂ, ಎಂ ಎ ಪದವೀಧರರು ಉದ್ಯೋಗ ಮೇಳದಲ್ಲಿ ತಮ್ಮ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಈ ಮೇಳದ ಸದುಪಯೋಗ ಪಡೆದುಕೊಳ್ಳಿರಿ ಎಂದು ಹೇಳಿದರು.
ಪ್ರಾಚಾರ್ಯ ಡಾ. ಎಸ್ ಎ. ಕರ್ಕಿ ಮಾತನಾಡಿ ಶಿವಾನಂದ ಮಹಾವಿದ್ಯಾಲಯದಲ್ಲಿ ಬಿಎ ಮತ್ತು ಬಿಕಾಂ ವರೆಗೆ ಓದಿರುವ ಅನೇಕ ಯುವಕರು ಅಲ್ಲದೆ ತಾಲೂಕಿನ ಬೇರೆ ಬೇರೆ ಮಹಾವಿದ್ಯಾಲಯಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಹೆಚ್ಚಿನ ಮಾಹಿತಿಗಾಗಿ 9341696034, 9483150645 ಸಂಪರ್ಕಿಸಿರಿ ಎಂದು ಆಹ್ವಾನಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಗುರುಗೌಡ ಪಾಟೀಲ,ಬಿ ಎ, ಪಾಟೀಲ, ಜೆ. ಕೆ. ಪಾಟೀಲ ಡಾ.ಎ. ಎಂ. ಜಕ್ಕನವರ, ಅಶೋಕ ಪಾಟೀಲ ಸೇರಿದಂತೆ ಅನೇಕರು ಇದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ