Breaking News

ಒಂದೇ ರಾತ್ರಿಯಲ್ಲಿ ಮಾಯಾ ಬಜಾರ್ ಥರ ಅಭಿವೃದ್ಧಿ ಮಾಡಲು ಆಗಲ್ಲ.:ಕೆ.ಎನ್ ರಾಜಣ್ಣ

Spread the love

ಹಾವೇರಿ: “ಒಂದೇ ರಾತ್ರಿಯಲ್ಲಿ ಮಾಯಾ ಬಜಾರ್ ಥರ ಅಭಿವೃದ್ಧಿ ಮಾಡಲು ಆಗಲ್ಲ. ಇದು ಹಂತ ಹಂತವಾಗಿ ಹಣಕಾಸಿನ ಲಭ್ಯತೆ ಆಧರಿಸಿ ಮಾಡಬೇಕಾಗುತ್ತದೆ. ಎಲ್ಲ ಸಮಾಜಗಳನ್ನು ಸಮತೋಲನ ಮಾಡುವ ಬಜೆಟ್ ಇದು. ಯಾವುದೇ ಭಾಗಕ್ಕೆ ಅನ್ಯಾಯವಾಗದಂತೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ” ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಕೆಳಸ್ಥರದ ಸಮಾಜಗಳಿಗೆ ಒತ್ತು ನೀಡಿದ್ದಾರೆ. ಎಸ್‌ಸಿಪಿ, ಟಿಎಸ್‌ಪಿ ಕಾಯಿದೆ ನಮ್ಮದೇ, ದೇಶದಲ್ಲಿ ಅದನ್ನ ಜಾರಿ ಮಾಡಿದವರಲ್ಲಿ ನಾವು ಎರಡನೇಯವರು. ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ. ಆ ಸಮುದಾಯಗಳಿಗೆ ಅಲೋಕೇಶನ್ ಮಾಡಿರೋದು ಬೇರೆ ಕಾರಣಕ್ಕೆ ಉಪಯೋಗ ಮಾಡಲ್ಲ. ಎಸ್‌ಸಿ, ಎಸ್‌ಟಿ ಸಮಾಜಗಳಿಗೆ ಇಟ್ಟ ಹಣ ನಾವು ಬೇರೆ ಕಡೆ ಕೊಟ್ಟಿಲ್ಲ” ಎಂದು ಸ್ಪಷ್ಟಪಡಿಸಿದರು.ಬಜೆಟ್​ ಬಗ್ಗೆ ಬಿಜೆಪಿ ನಾಯಕರ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, “ಬಿಜೆಪಿಯವರು ರಾಜಕಾರಣಕ್ಕೋಸ್ಕರ ಟೀಕೆ ಮಾಡುತ್ತಿದ್ದಾರೆ. ನ್ಯೂನ್ಯತೆ ಬಗ್ಗೆ ಪ್ರಸ್ತಾಪ ಮಾಡೋದು ಅವರ ಹಕ್ಕು, ಅವರು ಅದನ್ನು ಮಾಡಿದ್ದಾರೆ. ಆದರೆ ಸಾಬರ ಬಜೆಟ್ ಅಂತ ಕೆಳ ಮಟ್ಟದ ಟೀಕೆಯನ್ನು ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ, ಯಾವ ಆಧಾರದಲ್ಲಿ ಅನ್ಯಾಯ ಆಗಿದೆ?. ಟೀಕೆನೇ ಮಾಡಬೇಕು ಅನ್ನೋರಿಗೆ ಏನು ಉತ್ತರ ಕೊಡೋಕೆ ಆಗುತ್ತೆ” ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ