Breaking News

ಸಣ್ಣ ಮಾತು ಬೆಳೆದು ಜಗಳವಾಯ್ತು ಕೊನೆಗೆ ಬಡಪಾಯಿ ಜೀವ ಬಲಿಯಾತ್ತು

Spread the love

ಸಣ್ಣ ಮಾತು ಬೆಳೆದು ಜಗಳವಾಯ್ತು ಕೊನೆಗೆ ಬಡಪಾಯಿ ಜೀವ ಬಲಿಯಾತ್ತು

ಇದು ಮಾನ್ವಿ ತಾಲೂಕಿನ ಮಲ್ಲಿನಮಡುಗು ಗ್ರಾಮದಲ್ಲಿ ನಡೆದ ಘಟನೆ ಇದು

ಗ್ರಾಮದ ಒಂದೇ ಸಮುದಾಯ ಜನರ ನಡುವೇ ಈ ಘಟನೆ ನಡೆದಿದೆ

ದಾರಿಯ ವಿಚಾರವಾಗಿ ಜಗಳ ಇಡೀ ಊರೇ ಆಯ್ತು ರಣರಂಗ

15 ಕ್ಕು ಹೆಚ್ಚು ಜನರಿಗೆ ಗಾಯ, ಮಾನ್ವಿ ಆಸ್ಪತ್ರೆಯಲ್ಲಿ ದಾಖಲು

ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಊರಿನ ಹಿರಿಯರ ಸಮ್ಮುಖದಲ್ಲಿ ಬಗೆಹರಿಯ ಬೇಕಾದ ಸಣ್ಣ ಪುಟ್ಟ ಸಮಸ್ಯೆಗಳು ಇಂದು ತಿಳುವಳಿಕೆ, ತಾಳ್ಮೆಯ ಕೊರತೆಯಿಂದಾಗಿ
ಭೀಮಣ್ಣನ ಎಂಬ ಅಮಾಯಕನ ಕೊಲೆ ಕಾರಣ ವಾಗಿದೆ

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಮಲ್ಲಿನಮಡಗು ಎಂಬ ಪುಟ್ಟಗ್ರಾಮದಲ್ಲಿ ಇಂತದೊಂದು
ಅಹಿತಕರ ಘಟನೆ ನಡೆದು ಒಬ್ಬರ ಪ್ರಾಣ ತೆಗೆಯುವ ಮಟ್ಟಕ್ಕೆ ಹೋಗಿದೆ

ಪರಸ್ಪರ ಕೂಡಿ ಬದುಕಬೇಕಾದ ಊರಿನ ಜನರು ಕ್ಷುಲಕ ಕಾರಣಕ್ಕೆ ಒಡಿ ಬಡಿ ಮಾಡಿಕೊಂಡವರು
ಭೀಮಣ್ಣನ ಪತ್ನಿಯೇ ಹೇಳುವಂತೆ
ಜಗಳ ಬಿಡಿಸಲು ಹೋದ ಭೀಮಣ್ಣನನ್ನೇ ಕೊಂಡುಹಾಕಿದ್ದಾರೆ

ಮಲ್ಲಿನಮಡುಗು ಗ್ರಾಮದಲ್ಲಿ ಸುಮಾರು ನಿನ್ನೆ ರಾತ್ರಿ 9 ಗಂಟೆಯ ಸಮಯ ಸಣ್ಣ ದಾರಿಯ ವಿಚಾರ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತೆರಳಿ ಈ ಘಟನೆಯಲ್ಲಿ ಒಬ್ಬನ ಪ್ರಾಣ ಪಕ್ಷಿಹಾರಿಹೋಗಿರುವುದು ಮಾತ್ರವಲ್ಲ
ಒಂದೇ ಸಮಾಜದ 15ಕ್ಕೂ ಹೆಚ್ಚು ಜನರು ಸಾವು ಬದುಕಿನ ನಡುವೆ ಹೋರಾಟದಲ್ಲಿಮಾನ್ವಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಘಟನೆ ಮಾಹಿತಿ ತಿಳಿದು ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

 


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ