ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿದ ಶಾಸಕ ವಿಠ್ಠಲ ಹಲಗೇಕರ
ಖಾನಾಪೂರ ತಾಲೂಕಿನ ಶೇಕಡಾ 75 ಕ್ಕಿಂತ ಹೆಚ್ಚು ದೈಹಿಕವಾಗಿ ಅಂಗವಿಕಲರು ಮತ್ತು ದೈಹಿಕ ಅಶಕ್ತ ನಾಗರೀಕರಿಗೆ 2023-24 ನೇ ಸಾಲಿನ ಸರ್ಕಾರಿ ಯೋಜನೆಯಡಿ ಅನುಮೋದಿಸಲಾದ 20 ದ್ವಿಚಕ್ರ ವಾಹನಗಳನ್ನು ಖಾನಾಪೂರ ತಾಲೂಕಾ ಪಂಚಾಯತ್ ಆವರಣದಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ವಿತರಣೆ ಮಾಡಿದರು.
ಈ ಯೋಜನೆಯ ಫಲಾನುಭವಿಗಳಾದ ಬಾಹುಬಲಿ ಮುತಗಿ (ಹಿರೇಹಟ್ಟಿಹೋಳಿ), ಮಹಾಂತೇಶ ಹಲಸಗಿ (ಬೀಡಿ), ತಾನಾಜಿ ಠೋಂಬ್ರೆ(ನಾಗೂರ್ಡಾ),ವಿಜಯ ಪಾಟೀಲ್ (ಹುಲಿಕೋತಲ್), ಮಲ್ಲಿಕಾರ್ಜುನ ತುಳಜಿ (ಹುಲಿಕೋತಲ್), ಮಂಜುನಾಥ್ ಪಾಟೀಲ್ (ಚಿಕ್ಕ ಮುನವಳ್ಳಿ),ನಂದ ಭಾರತಿ ಬವನ್ನವರ (ಗೋಲಿಹಳ್ಳಿ), ಕೃಷ್ಣ ಗುರವ (ಜೈನಕೊಪ್ಪ), ಜ್ಯೋತಿಬಾ ಪಾಟೀಲ್ (ಹೊಂಕಲ್),ಸಾದೀಕ ಶಿಂದೋಳ್ಳಿ(ನಂದಗಡ), ಪಾಂಡುರಂಗ ಗಾವಡೆ (ಹತ್ತರವಾಡ), ಮಹೇಶ್ ಪಾಟೀಲ್ (ವಡ್ಡೆಬೈಲ್), ವಿರಭಂದ್ರ ಗಂಗನಾಯಕ (ಇಟಗಿ), ನಾರಾಯಣ ಹಲಗೇಕರ (ಟೋಪ್ಪಿನಕಟ್ಟಿ),ಮದ್ವಾಲ್ಯ ಹುದ್ದಾರ್ (ಗಂದಿಗವಾಡ),ಅವೋಲ್ ಪಾಟೀಲ್ (ಶಿವೋಲಿ), ವಿಠ್ಠಲ ಘಂಟಿ (ಇಟಗಿ), ಸಂಭಾಜಿ ಪಾಟೀಲ್ (ಬೇಕವಾಡ), ಸಂತೋಷ್ ಬನೋಶಿ (ಮುಗಳಿಹಾಳ) ಹೀಗೆ 19
ಸಾಮಾನ್ಯ ವರ್ಗದ ದೈಹಿಕ ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ಶಾಸಕ ವಿಠ್ಠಲ ಹಲಗೇಕರ ಅವರು ವಿವರಿಸಿದರು ಇನ್ನೂ ಎಸ್ ಸಿಪಿ ಯೋಜನೆ 1ರ ಅಡಿಯಲ್ಲಿ ದೈಹಿಕ ವಿಕಲಚೇತನರಿಗೆ ರೂಪಾಲಿ ಕೋಲಕಾರ (ಗರ್ಲಗುಂಜಿ), ಪರಶುರಾಮ ಜಾಧವ್ (ಬೀಡಿ), ಸಿದ್ದಪ್ಪ ಕಗಂಕರ್ (ಬೈಲೂರು) ಈ ಎರಡು ಹೆಸರುಗಳನ್ನು ಇ ಯೋಜನೆಯಡಿ ಕಾಯ್ದಿರಿಸಲಾಗಿದೆ ಎಂದು ಉಪಸ್ಥಿತರಿದ್ದ ಅಧಿಕಾರಿಗಳು ಮಾಹಿತಿ ನೀಡಿದರು.
Laxmi News 24×7