Breaking News

38° ಸೆಲ್ಸಿಯಸ್ ತಾಪಮಾನಕ್ಕೆ ತತ್ತರಿಸಿದ ಗಣಿನಾಡಿನ ಮಂದಿ

Spread the love

ಬಳ್ಳಾರಿ, ಫೆಬ್ರವರಿ 24: ಗಣಿನಾಡು ಬಳ್ಳಾರಿ ಜಿಲ್ಲೆಯ ಬಿಸಿಲಿಗೆ (heatstroke) ತವರ ಮನೆ ಇದ್ದಂತೆ. ಕರ್ನಾಟಕದಲ್ಲಿ ಎಲ್ಲಾದರೂ ಒಂದು ಕಡೆ ಬಿಸಿಲು ಕಡಿಮೆ ಇರಬಹುದು ಆದರೆ ಇಲ್ಲಿ ಮಾತ್ರ ನೋ ಚಾನ್ಸ್. ವರ್ಷದ 12 ತಿಂಗಳು ಇಲ್ಲಿ ಬಿರು ಬೇಸಿಗೆ ಬಿಸಿಲು ಕಂಡು ಬರುತ್ತೆ. ಅದರಲ್ಲೂ ಈ ವರ್ಷವಂತು ಅದೆಷ್ಟು ಸೆಕೆ, ತಾಪಮಾನ, ಬಿಸಿಲ ಧಗೆ ತಾಳಲಾರದ ಜನರು ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ.

38° ಸೆಲ್ಸಿಯಸ್ ತಾಪಮಾನಕ್ಕೆ ತತ್ತರಿಸಿದ ಗಣಿನಾಡಿನ ಮಂದಿ

ಬಳ್ಳಾರಿಯಲ್ಲಿ ಕಳೆದ ಎರಡು ವರ್ಷಗಳಿಗಿಂತ ಈ ವರ್ಷ ಅತೀ ಹೆಚ್ಚು ತಾಪಮಾನ ಅದು ಬೇಸಿಗೆ ಆರಂಭಕ್ಕೂ ಮುನ್ನವೇ ಕಂಡು ಬರುತ್ತಿದೆ. ಈಗಾಗಲೇ ಎರಡು ಮೂರು ದಿನಗಳಿಂದ ಬಳ್ಳಾರಿಯಲ್ಲಿ 37°, 38°, 39° ಡಿಗ್ರಿ ಸೆಲ್ಸಿಯಸ್ ವರಗೆ ತಾಪಮಾನ ದಾಖಲಾಗಿದೆ. ಹೀಗಾಗಿ ಬಿಸಿಲಿನ ಧಗೆಗೆ ಗಣಿನಾಡಿನ ಮಂದಿ ಬೆಂಡಾಗಿದ್ದಾರೆ. ಈಗಾಗಲೇ ಹವಾಮಾನ ಇಲಾಖೆ ಕೂಡ ಜಿಲ್ಲೆಯ ಜನರಿಗೆ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗುವ ಬಗ್ಗೆ ಸೂಚನೆ ನೀಡಿದೆ.ವಾತಾವರಣದಲ್ಲಿ ಅತೀ ಹೆಚ್ಚು ಬಿಸಿ ಗಾಳಿ ಸಾಧ್ಯತೆ ಇದ್ದು, ಜನ ಜಾಗೃತಿಯಿಂದಿರಲು ಸೂಚನೆ ನೀಡಲಾಗಿದೆ.

ಇನ್ನು ಸೆಕೆ ತಾಳಲಾರದೆ ಜನ ತಂಪುನೀಯಗಳ ಮೊರೆ ಹೋಗುತ್ತಿದ್ದಾರೆ. ಕಲ್ಲಂಗಡಿ, ಎಳೆನೀರು, ಜ್ಯೂಸ್ ನಂತಹ ತಂಪು ಪಾನೀಯಗಳನ್ನ ಸೇವಿಸಿ ಬಿಸಿಲ ಧಗೆಗೆ ತಮ್ಮನ್ನ ತಾವು ಕಾಪಾಡಿಕೊಳ್ಳುತ್ತಿದ್ದಾರೆ. ಇನ್ನು ಬಿಸಿಲಿನ ಶಾಕಕ್ಕೆ ಡೀಹೈಡ್ರೇಷನ್‌, ಬೆವರು ಸಾಲಿ, ಕಣ್ಣು ಉರಿ, ಆಯಾಸ, ತಲೆ ನೋವು ಮುಂತಾದ ಕಾರಣಗಳಿಗೆ ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಹೀಗಾಗಿ ಜನ ಮನೆ ಬಿಟ್ಟು ಹೊರ ಬರಲು ಹೆದರುವ ಪರಿಸ್ಥಿತಿ ಬಂದಿದೆ. ಬಳ್ಳಾರಿ ಜನರು ಕೂಡ ಬೇಸಿಗೆ ಆರಂಭಕ್ಕೂ ಮುನ್ನ ಈ ವರ್ಷವೇ ಅತೀ ಹೆಚ್ಚು ಬಿಸಿಲು ಕಂಡು ಬರುತ್ತಿದೆ. ಇನ್ನು ಬೇಸಿಗೆಯಲ್ಲ ನಮ್ಮನ್ನ ದೇವರೆ ಕಾಪಾಡಬೇಕು, ಊಟ ಬಿಟ್ಟು ಕೇವಲ ತಂಪುಪಾನೀಯಗಳ ಮೇಲೆ ಜೀವನ ಮಾಡುತ್ತಿದ್ದೆವೆ ಎನ್ನುತ್ತಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ