Breaking News

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಆಟವಾಡುತ್ತಿದ್ದ ಮಗು ಮೇಲೆ ಹರಿದ ಜೆಸಿಬಿ

Spread the love

ಬೆಂಗಳೂರು, ಫೆಬ್ರವರಿ 19: ಜೆಸಿಬಿ ಹರಿದು ಆಟವಾಡುತ್ತಿದ್ದ 2 ವರ್ಷದ ಮಗು ದುರ್ಮರಣ (death) ಹೊಂದಿರುವಂತಹ ಘಟನೆ ಬೆಂಗಳೂರಿನ ಕಾಡುಗೋಡಿ ಬಳಿಯ ಸಿಟಿ ಲೇಔಟ್​ನಲ್ಲಿ ನಡೆದಿದೆ. ಥನವ್ ರೆಡ್ಡಿ ಮೃತ ಮಗು. ಜೆಸಿಬಿ ಚಾಲಕನ ಅತಿವೇಗ, ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ. ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಜೆಸಿಬಿ ಚಾಲಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಮನೆ ಮುಂದೆ ಥನವ್ ರೆಡ್ಡಿ ಆಟವಾಡುತ್ತಿದ್ದ. ಈ ವೇಳೆ ಆತನ ಮೇಲೆ ಜೆಸಿಬಿ ಹರಿದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮಗುವನ್ನು ವೈದೇಹಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದು, ಆದರೆ ಮಾರ್ಗಮಧ್ಯೆಯೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದೇಹಿ ಆಸ್ಪತ್ರೆಯಲ್ಲಿ ಥನವ್ ರೆಡ್ಡಿ(2) ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

ಆಂಧ್ರದ ಮದನಪಲ್ಲಿ ಮೂಲದ ದಂಪತಿಯ ಪುತ್ರ ಥವನ್. ಮದುವೆಯಾಗಿ 4 ವರ್ಷದ ನಂತರ ಹುಟ್ಟಿದ್ದ. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಥವನ್ ತಂದೆ, ಎರಡು ವರ್ಷದಿಂದ ಬಾಲಾಜಿ ಲೇಔಟ್​ನಲ್ಲಿ ವಾಸವಿದ್ದರು. ಇದೇ ಲೇಔಟ್​ನಲ್ಲಿ ಹೊಸ ಮನೆ ಕೂಡ ಕಟ್ಟಿಸುತ್ತಿದ್ದರು. ನಿನ್ನೆ ಸಂಜೆ ಮನೆ ಪಕ್ಕದಲ್ಲೇ ಜೆಸಿಬಿ ಕೆಲಸ ಮಾಡುತ್ತಿತ್ತು. ಕೆಲಸ ಮುಗಿದ ಬಳಿಕ ವೇಗವಾಗಿ ಚಾಲಕ ಜೆಸಿಬಿ ಚಲಾಯಿಸಿದ್ದ. ಈ ವೇಳೆ‌ ಮನೆ ಮುಂದೆ ಇದ್ದ ಮಗು ಜೆಸಿಬಿಗೆ ಸಿಲುಕಿದೆ. ಇನ್ನು ಮಗು ಸಿಲುಕಿರೋದೇ ಜೆಸಿಬಿ ಚಾಲಕನಿಗೆ ಗೊತ್ತೇ ಆಗಿಲ್ಲ. ಮಗು ಬಿದ್ದಿರೋದನ್ನ‌ ನೋಡಿ ಪೋಷಕರು ಕಿರುಚಿಕೊಂಡಿದ್ದಾರೆ. ಬಳಿಕ ಜೆಸಿಬಿ ಚಾಲಕನಿಗೆ ವಿಚಾರ ಗೊತ್ತಾಗಿ ಎಸ್ಕೇಪ್ ಆಗಿದ್ದಾನೆ.

 


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ