ಬೆಳಗಾವಿ : ನಿಶ್ಚಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮ ಹತ್ಯಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಂತೆ ಬೀದಿಯ ಸೋಮಪ್ಪ ಡೊಂಗರಗಾವಿ(28) ಮೃತ ದುರ್ದೈವಿಯಾಗಿದ್ದು ಮದುವೆಗೆ ಹುಡುಕಿದ್ದ ಮದುವೆ ಸಂಬಂಧಗಳೆಲ್ಲವೂ ರದ್ದಾದ ಹಿನ್ನೆಲೆ ಮನನೊಂದು ಯುವಕ ಆತ್ಮ*ಹತ್ಯೆಗೆ ಶರಣಾಗಿದ್ದಾನೆ.ಹೊಲದಲ್ಲಿನ ಬೇವಿನ ಗಿಡದ ತೊಂಗೆಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.ಹಿರೇಬಾಗೆವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.