Breaking News

ಪರ ಸ್ತ್ರೀಯೊಂದಿಗೆ ಸಲುಗೆ: ಸುಫಾರಿ ನೀಡಿ ಗಂಡನ ಕಾಲು ಮುರಿಸಿದ ಪತ್ನಿ ಜೈಲಿಗೆ

Spread the love

ಕಲಬುರಗಿ: ಬ್ರಹ್ಮಪುರ ಪೊಲೀಸ್​​ ಠಾಣಾ ವ್ಯಾಪ್ತಿಯ ಅತ್ತರ ಕಾಂಪೌಂಡ್​​ ಬಳಿ ದರೋಡೆ ವೇಳೆ ಕಾಲು ಮುರಿದಿದೆ ಎಂದು ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದೆ. ದರೋಡೆಕೋರರಲ್ಲ.. ಕೈಹಿಡಿದ ಧರ್ಮಪತ್ನಿಯೇ ತನ್ನ ಗಂಡನ ಕಾಲು ಮುರಿಯಲು ಸುಪಾರಿ ನೀಡಿ ಕಾಲು ಮುರಿಸಿದ್ದಾಳೆ ಅನ್ನುವ ವಿಚಾರ ಪೊಲೀಸರು ಬಯಲಿಗೆಳೆದಿದ್ದಾಳೆ.

ಪತ್ನಿ ನೀಡಿದ ಸುಪಾರಿಯಿಂದ ಎರಡು ಕಾಲು ಮುರಿದುಕೊಂಡು ಪತಿ ವೆಂಕಟೇಶ್​ ಬೆಡ್​ ರೆಸ್ಟ್​​ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಪಾರಿ ಕೊಟ್ಟ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಪತ್ನಿ ಉಮಾದೇವಿ ಹಾಗೂ ಸುಪಾರಿ ಪಡೆದು ಕಾಲು ಮುರಿದ ಆರಿಫ್, ಮನೋಹರ, ಸುನೀಲ್ ಬಂಧಿತರು ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್‌.ಡಿ. ಅವರು ತಿಳಿಸಿದ್ದಾರೆ.

ಕೆಲ ದಿನಗಳಿಂದ ವೆಂಕಟೇಶ್​ ಪರ ಸ್ತ್ರಿಯೊಂದಿಗೆ ಸಲುಗೆಯಿಂದ ಇರುತ್ತಿದ್ದನಂತೆ, ಇದನ್ನು ಗಮನಿಸಿದ ಪತ್ನಿ ಉಮಾದೇವಿ ಕೋಪಗೊಂಡು ಮಹಿಳೆ ಜೊತೆಗಿನ ಸ್ನೇಹ ಬಿಡುವಂತೆ ಒತ್ತಾಯಿಸಿದ್ದಾಳೆ. ಆದರೂ ವೆಂಕಟೇಶ್ ತನ್ನ ಸಲುಗೆ ಮುಂದುವರಿಸಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಹಲವುಬಾರಿ ಗಲಾಟೆ ಕೂಡಾ ಆಗಿದೆ. ಆದರೂ ವೆಂಕಟೇಶ್​ ಮಹಿಳೆಯೊಂದಿಗೆ ಸಲುಗೆ ಮುಂದುವರೆಸಿದಾಗ ಕೆರಳಿದ ಪತ್ನಿ ಉಮಾದೇವಿ, ಕಾಲು ಮುರಿದರೆ ಮನೆಯಲ್ಲಿ ಇರುತ್ತಾನೆಂದು ಗಂಡನ ಎರಡೂ ಕಾಲುಗಳನ್ನು ಮುರಿಯುವಂತೆ ಯುವಕರಿಗೆ 5 ಲಕ್ಷ ರೂ. ಸುಪಾರಿ ನೀಡಿದ್ದಳು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ