Breaking News

ಮುಡಾ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸಿಬಿಐಗೆ ನೀಡುವಂತೆ ನಾವು ಅರ್ಜಿಯನ್ನು ಹಾಕಿಕೊಂಡಿದ್ವಿ.

Spread the love

ಮುಡಾ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸಿಬಿಐಗೆ ನೀಡುವಂತೆ ನಾವು ಅರ್ಜಿಯನ್ನು ಹಾಕಿಕೊಂಡಿದ್ವಿ. ಅದರ ಅರ್ಜಿ ವಿಚಾರಣೆಯನ್ನು ಗೌರವಾನ್ವಿತ ಹೈಕೋರ್ಟ್ ನ್ಯಾಯಾಧೀಶರು ಆಲಿಸಿ ಇಂದು ತೀರ್ಪುಗೆ ಕಾಯ್ದಿರಿಸಿದ್ದರು.‌
ಇಂದು ನಮ್ಮ ಅರ್ಜಿ ವಜಾ ಮಾಡಿ ಹೈ ಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದು, ಅದೇಶ ಪ್ರತಿ ಪಡೆದು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಸ್ನೇಹಮಯಿ ಕೃಷ್ಣ ಪರ ನ್ಯಾಯವಾದಿಗಳಾದ ಲಕ್ಷ್ಮಣ ಕುಲಕರ್ಣಿ ಹೇಳಿದರು.
ಧಾರವಾಡ ಹೈಕೋರ್ಟ್ ತೀರ್ಪಿನ‌ ಬಳಿಕ ಧಾರವಾಡದಲ್ಲಿ‌ಮಾಧ್ಯಮಕ್ಕೆ ಪ್ರತಿಕ್ರೆಯಿಸಿದ ಅವರು, ಮುಡಾ ಪ್ರಕರಣದ ತನಿಖೆಯು ನಿಷ್ಪಕ್ಷಪಾತವಾಗಿ ನಡೆದು ಸತ್ಯಾಸತ್ಯತೆ ಹೊರ ಬರಲು ಈ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸಿಬಿಐಗೆ ನೀಡುವಂತೆ ನಮ್ಮ ಕಕ್ಷಿದಾರರು ಅರ್ಜಿ ಹಾಕಿದ್ದರು.
ಅರ್ಜಿ ವಿಚಾರಣೆ ವೇಳೆ ನಮ್ಮ ಕಕ್ಷಿದಾರರ ಪರ ಲೀಗಲ್ ‌ಟೀಂ ವಾದ ಮಂಡನೆ‌ ಮಾಡಿತ್ತು. ನಮ್ಮ ಸಿಬಿಐಗೆ ನೀಡಿ ಅದೇಶ ಬರೋ ವಿಶ್ವಾಸವಿತ್ತು. ಆದರೆ ಈಗ ಗೌರವಾನ್ವಿತ ನ್ಯಾಯಾಧೀಶರು ನಮ್ಮ ಅರ್ಜಿ‌ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.‌
ಆದೇಶ ಸಂಪೂರ್ಣ ಪ್ರತಿ ಪಡೆದುಕೊಂಡು ನಮ್ಮ ಲೀಗಲ್ ಟೀಂ ಸಲಹೆಗಳನ್ನು‌ ಪಡೆದುಕೊಂಡು ನಂತರ ಕಾನೂನು ಹೋರಾಟ ಮಾಡಲಾಗುವುದು. ಈ ಆದೇಶ ಪ್ರಶ್ನೆ ‌ಮಾಡಿ‌ ಸುಪ್ರೀಂ ‌ಕೋರ್ಟಗೆ ಅರ್ಜಿ‌ಸಲಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ