Breaking News

ಸ್ಯಾಂಡಲ್‌ವುಡ್ ಸ್ಟಾರ್ಸ್ ಶೂಟಿಂಗ್ ಗೆ ಬ್ರೇಕ್ ಹಾಕಿ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಇಳಿಯೋ ಸಮಯ ಮತ್ತೆ ಬಂದಿದೆ.

Spread the love

ಸ್ಯಾಂಡಲ್‌ವುಡ್ ಸ್ಟಾರ್ಸ್ ಶೂಟಿಂಗ್ ಗೆ ಬ್ರೇಕ್ ಹಾಕಿ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಇಳಿಯೋ ಸಮಯ ಮತ್ತೆ ಬಂದಿದೆ. ಸಿಸಿಎಲ್ 11ನೇ ಸೀಸನ್‌ಗೆ ದಿನಗಣನೆ ಶುರುವಾಗಿದ್ದು, ಇದೇ ಫೆಬ್ರವರಿ 8ರಿಂದ ಸಿಸಿಎಲ್ 11ನೇ ಸೀಸನ್ ರಂಗೇರುತ್ತಿದೆ. ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುನ್ನಡೆಸಲಿದ್ದು, ತಂಡದ ಮಾಲೀಕರಾಗಿ ಅಶೋಕ್ ಖೇಣಿ ಸಾಥ್ ಕೊಡುತ್ತಿದ್ದಾರೆ. ಕಳೆದ ಬಾರಿ ರನ್ನರ್ ಅಪ್ ಆಗಿ ಹೊರಗಹೊಮ್ಮಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಕಪ್ ಗೆಲ್ಲುವ ತವಕದಲ್ಲಿದ್ದಾರೆ. ಈ ಬಾರಿಯ ವಿಶೇಷ ಅಂದ್ರೆ ಕಳೆದ ಬಾರಿ ಮಿಸ್ ಆಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ತಂಡ ಸೇರ್ಪಡೆಯಾಗಿದ್ದಾರೆ. ಸಿಸಿಎಲ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ನಿನ್ನೆ ಸುದ್ದಿ ಗೋಷ್ಟಿ ಆಯೋಜಿಸಲಾಗಿತ್ತು. ಈ ವೇಳೆ ಕಿಚ್ಚ ಸುದೀಪ್, ಸಿಸಿಎಲ್ ಆಯೋಜಕರಾದ ವಿಷ್ಣು ಇಂದೋರಿ ಹಾಗೂ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಅಶೋಕ್ ಖೇಣಿ ಉಪಸ್ಥಿತರಿದ್ದರು.

ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಸುದೀಪ್ ಮಾತನಾಡಿ, ಸಿಸಿಎಲ್ ನಡೆಸುವುದೇ ಬಹಳ ಕಷ್ಟ. ನಾಲ್ಕು ಟೀಂ ಒಟ್ಟಿಗೆ ಶುರುವಾದ ಜರ್ನಿ ಇದು. ಇದೇ‌ ಮೈದಾನದಲ್ಲಿ ಮುಂಬೈ ಮೇಲೆ ಮೊದಲ ಮ್ಯಾಚ್ ಆಡಿದ್ದೇವು. ಅದ್ಭುತ ವಾತಾವರಣ ಆ ದಿನ ಇತ್ತು. ನಾವೆಲ್ಲಾ ಚಿಕ್ಕ ಚಿಕ್ಕ ಗ್ರೌಂಡ್ ನಲ್ಲಿ ಆಟವಾಡುತ್ತಿದ್ದರು. ಅವತ್ತಿಗೆ ಗ್ರೌಂಡ್ ಫುಲ್ ಆಗುತ್ತದೆ. ಇಷ್ಟು ಜನಗಳ ಮಧ್ಯೆ ಆಡುವುದು. ಭಯ ಎಂದರೇನು ಅನ್ನುವುದು ಅವತ್ತು ಗೊತ್ತಾಯ್ತು. ನಮಗೆ ಅದು ಕೊಟ್ಟ ಅದ್ಭುತ ಗಿಫ್ಟ್…ಚಿತ್ರರಂಗದ ಬೇರೆ ಬೇರೆ ಭಾಷೆಗಳ ಜೊತೆ ನಮಗೆ ಒಡನಾಟ ಇರಲಿಲ್ಲ. ಸೇತುವೆ ಇರಲಿಲ್ಲ. ಆದರೆ ಸಿಸಿಎಲ್ ನಿಂದ ಸಂಪರ್ಕವಾಯಿತು ಎಂದು ತಿಳಿಸಿದರು.

ಅಶೋಕ್ ಖೇಣಿ ಮಾತನಾಡಿ, ಮ್ಯಾಕ್ಸ್ ಸಿನಿಮಾದ ಸಕ್ಸಸ್ ಗೆ ಶುಭಾಶಯ. ಕರ್ನಾಟಕ ಬುಲ್ಡೋಜರ್ಸ್ ನಾಲ್ಕು ಬಾರಿ ಕಪ್ ಗೆದ್ದಿದೆ. ಈ ಬಾರಿ ಕಪ್ ಗೆಲ್ಲುತ್ತೇವೆ ಎಂಬ ಭರವಸೆ ಇದೆ ಎಂದರು.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ