Breaking News

ಅವಾಚ್ಯ ಪದ ಬಳಕೆ ಆರೋಪ ಪ್ರಕರಣ : ಲಕ್ಷ್ಮೀ ಹೆಬ್ಬಾಳ್ಕರ್​ಗೆ ಹೈಕೋರ್ಟ್ ಹ್ಯಾಂಡ್​ ಸಮನ್ಸ್​

Spread the love

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ ಸಂಬಂಧ ದಾಖಲಾಗಿರುವ ಪ್ರಕರಣ ರದ್ದು ಕೋರಿರುವ ಬಿಜೆಪಿ ಎಂಎಲ್​ಸಿ ಸಿ.ಟಿ. ರವಿ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ​ ಹ್ಯಾಂಡ್​ ಸಮನ್ಸ್​ ಜಾರಿ ಮಾಡಿ ಆದೇಶಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದು ಕೋರಿ ಸಿ.ಟಿ.ರವಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ನೋಟಿಸ್​ ಜಾರಿ ಮಾಡಿ ವಿಚಾರಣೆಯನ್ನು ಪೆಬ್ರುವರಿ 20ಕ್ಕೆ ಮುಂದೂಡಿತು.

HAND SUMMONS TO LAKSHMI HEBBALKAR

ವಿಚಾರಣೆ ವೇಳೆ ಸಿ.ಟಿ. ರವಿ ಪರ ವಕೀಲರು, ”ಶಾಸನಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಮಾತುಕತೆಗೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಾಗಿದೆ. ಇದು ಶಾಸಕರ ವಿಶೇಷಾಧಿಕಾರವನ್ನು ಮೊಟಕುಗೊಳಿಸಿದಂತಾಗಿದೆ. ಈ ಸಂಬಂಧ ಸಭಾಪತಿ ನೋಟಿಸ್​ ಜಾರಿ ಮಾಡಿ ರೂಲಿಂಗ್​ ನೀಡಿದ್ದಾರೆ. ಈ ಅಂಶವನ್ನು ನ್ಯಾಯಾಲಯ ಪರಿಗಣಿಸಬೇಕು” ಎಂದು ಮನವಿ ಮಾಡಿದರು.

”ಅಲ್ಲದೆ, ಸಭಾಪತಿ ಪೀಠದಲ್ಲಿ ಇಲ್ಲದ ಸಂದರ್ಭದಲ್ಲಿ ನಡೆದಿದೆ. ಸದನದಲ್ಲಿ ಸದಸ್ಯರು ನೀಡಿದ ಹೇಳಿಕೆ ಸಂಬಂಧ ವಿಚಾರಣೆ ನ್ಯಾಯಾಲಯದ ಮುಂದಿದೆ. ಸಭಾಪತಿ ನಿರ್ಧಾರ ಪ್ರಕಟಿಸಿದ ಬಳಿಕ ಸಿಐಡಿ ಪೊಲೀಸರು ತನಿಖೆ ನಡೆಸುವುದಕ್ಕೆ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ” ಎಂದು ಪೀಠಕ್ಕೆ ವಿವರಿಸಿದರು.

ಈ ವೇಳೆ ಪೀಠ, ”ಸಭೆ ನಡೆಯುತ್ತಿರಲಿ. ಇಲ್ಲದಿರಲಿ ಶಾಸಕರಿಗೆ ವಿನಾಯ್ತಿ ಇದೆ. ಸರಿ ಆದರೆ, ಅದು ಅರ್ಹವಾದ ವಿನಾಯ್ತಿ ಇರಬೇಕಾಗುತ್ತದೆ. ಸಂಪೂರ್ಣ ವಿನಾಯ್ತಿ ಅಲ್ಲ. ಸದನದಲ್ಲಿ ಚರ್ಚೆ ಮಾಡುವ ವಿಚಾರಗಳಲ್ಲಿ ಸದಸ್ಯರಿಗೆ ವಿನಾಯತಿ ಇರಲಿದೆ. ಈ ರೀತಿಯ ಹೇಳಿಕೆಗಳನ್ನು ಸದಸ್ಯರು ಹೇಗೆ ನೀಡುವುದಕ್ಕೆ ಸಾಧ್ಯ” ಎಂದು ಪ್ರಶ್ನೆ ಮಾಡಿತು.

ವಾದ ಮುಂದುವರೆಸಿದ ವಕೀಲರು, ”ಸದನದಲ್ಲಿ ಸದಸ್ಯರು ಬಾಯಿಗೆ ಬಂದದ್ದು ಮಾತನಾಡಿದರೆ ಸಭಾಪತಿ ಅವರನ್ನು ಸದನದಿಂದ ಹೊರಹಾಕಬಹುದು. ಇಲ್ಲಿ ಅರ್ಹವಾದ ರಕ್ಷಣೆ ಇದೆ. ಆಕ್ಷೇಪಾರ್ಹ, ಅಪರಾಧವಾಗುವ ಮಾತುಗಳನ್ನು ಸದಸ್ಯರು ಆಡಿದರೂ ಇದರ ಸಂಜ್ಞೆಯನ್ನು ಸದನ ಪರಿಗಣಿಸಲಿದೆ” ಎಂದರು.


Spread the love

About Laxminews 24x7

Check Also

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂ ಗಳ ಸೇರ್ಪಡೆ ವಿವಾದ – ನಿರ್ಧಾರ ಕೈಬಿಡುವಂತೆ ಸಿಎಂಗೆ ಹೆಚ್‌ಡಿಕೆ ಪತ್ರ

Spread the loveಮಂಡ್ಯ: ಜಿಲ್ಲೆಯ ಮದ್ದೂರು  ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನ ಸ್ಥಳೀಯರ ಆಶಯಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ