Breaking News

ಪರ ಪುರಷನೊಂದಿಗೆ ಓಡಿಹೋಗಿದ್ದ ಹೆಂಡ್ತಿಯ ಶಿರಚ್ಛೇದ ಮಾಡಿದ ಪತಿ

Spread the love

ಮೈಸೂರು, (ಜನವರಿ 15): ಪರಪುರಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ನಡೆದಿದೆ. ತೇಜು (26) ಪತಿಯಿಂದಲೇ ಕೊಲೆಯಾದ ಪತ್ನಿ. ಕಳೆದ ಏಳು ವರ್ಷಗಳ ಹಿಂದೆ ದೇವರಾಜ್ ಎನ್ನುವಾತ ಸಂಬಂಧಿಯಾಗಿದ್ದ ತೇಜಳನ್ನು ಮದುವೆಯಾಗಿದ್ದ. ಇಬ್ಬರಿಗೆ ಎರಡು ಮಕ್ಕಳು ಸಹ ಇವೆ. ಆದರೂ ತೇಜ ಪರಪುರಷನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು.

ಸಾಲದಕ್ಕೆ ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಮನೆ ಬಿಟ್ಟು ಓಡಿಹೋಗಿದ್ದಳು. ಬಳಿಕ ರಾಜೀ ಸಂದಾನ ಮಾಡಿ ವಾರದ ಹಿಂದೆ ಅಷ್ಟೇ ಪತಿ ದೇವರಾಜ್ ಪತ್ನಿಯನ್ನು ಮನೆ ಸೇರಿಸಿಕೊಂಡಿದ್ದ. ಆದರೂ ದೇವರಾಜ್​ಗೆ ಊರಿನಲ್ಲಿ ತಲೆ ಎತ್ತಿ ಓಡಾಡದಂತಾಗಿದ್ದು, ಇದೇ ಕೋಪದಲ್ಲಿ ಹೆಂಡ್ತಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.26 ವರ್ಷದ ತೇಜು ಹಾಗೂ ದೇವರಾಜ್​ ಸಂಬಂಧಿಗಳಾಗಿದ್ದು, ಏಳು ವರ್ಷದ ಹಿಂದೆ ಅಷ್ಟೇ ಮದುವೆಯಾಗಿದ್ದರು. ದೇವರಾಜು ತೇಜು ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು. ಆದ್ರೆ,

ತೇಜು ಬೇರೆ ವ್ಯಕ್ತಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದು, ಬಳಿಕ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದಳು. ಇದರಿಂದ ಪತಿ ದೇವರಾಜ್​ಗೆ ಊರಿನಲ್ಲಿ ಒಂದು ತರ ಮರ್ಯಾದೆ ಹೋದಂತಾಗಿತ್ತು.ಬಳಿಕ ರಾಜೀ ಪಂಚಾಯಿತಿ ಮಾಡಿ ಕಳೆದ ವಾರದ ಹಿಂದೆ ಅಷ್ಟೇ ದೇವರಾಜ್, ಪತ್ನಿ ತೇಜಳನ್ನು ಮನೆ ಸೇರಿಸಿಕೊಂಡಿದ್ದ.

ಆದರೂ ಪತ್ನಿ ಮಾಡಿದ ಕೆಲಸದಿಂದ ದೇವರಾಜ್​ಗೆ ಕುದಿಯುತ್ತಿತ್ತು. ಊರಿನಲ್ಲಿ ಮರ್ಯಾದೆ ಕಳೆದುಬಿಟ್ಟಳು ಎಂಬ ಸಿಟ್ಟಿನಲ್ಲಿದ್ದ. ಅದೇ ವಿಚಾರದಲ್ಲಿ ಇಂದು (ಜನವರಿ 15) ಮಧ್ಯಾಹ್ನ ಇಬ್ಬರ ನಡುವೆ ಗಲಾಟೆಯಾಗಿದೆ. ಮೊದಲೇ ಕೋಪದಲ್ಲಿದ್ದ ದೇವರಾಜ್​, ಮಚ್ಚಿನಿಂದ ತೇಜಳ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ