Breaking News

ಎಣ್ಣೆ ಆಯ್ತು, ಇಂಧನ ಆಯ್ತು ಈಗ ಬಸ್​ ದರ, ನಾವ್​ ಏನ್​ ಮಾಡೋಣ ನೀವೇ ಹೇಳಿ’

Spread the love

ಎಣ್ಣೆ ಆಯ್ತು, ಇಂಧನ ಆಯ್ತು ಈಗ ಬಸ್​ ದರ, ನಾವ್​ ಏನ್​ ಮಾಡೋಣ ನೀವೇ ಹೇಳಿ’: ವಡಗಾವ ನಿವಾಸಿ ಸಂಜಯ ಜಯಗೌಡ ಅವರು ಮಾತನಾಡಿ, ”ರಾಜ್ಯ ಸರ್ಕಾರ ಇಷ್ಟು ದಿನ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿತ್ತು. ಆದರೆ, ಈಗ ಬಸ್ ದರ ಏರಿಸಿ ಪುರುಷರ ಹಣವನ್ನು ಮಹಿಳೆಯರಿಗೆ ಕೊಡುತ್ತಿರುವುದು ಸರಿಯಲ್ಲ.

ದುಡಿಯುವ ಕೈಗಳಿಗೆ ಕೆಲಸ ಕೊಡಿ. ಅವರೇ ನಿಮಗೆ ತೆರಿಗೆ ರೂಪದಲ್ಲಿ ಹಣ ಪಾವತಿಸುತ್ತಾರೆ. ಅದನ್ನು ಬಿಟ್ಟು ಒಂದು ಕಡೆ ಕೊಟ್ಟು, ಒಂದು ಕಡೆ ಕಿತ್ತುಕೊಳ್ಳುವುದು ಸರಿ ಅಲ್ಲ. ಕೂಡಲೇ ಪುಕ್ಕಟೆ ಯೋಜನೆಗಳನ್ನು ನಿಲ್ಲಿಸಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು” ಎಂದು ಒತ್ತಾಯಿಸಿದರು.

ಗ್ಯಾರಂಟಿಯೇನೋ ಲಾಭ ತಂದಿದೆ, ಬಸ್​ ದರ ಏರಿಕೆ ದುಡಿಯುವ ವರ್ಗಕ್ಕೆ ಬರೆ ಹಾಕಿದೆ‘; ”ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ತುಂಬ ಅನುಕೂಲವಾಗಿದೆ. ಹೊಲಿಗೆ ಯಂತ್ರ, ದಿನನಿತ್ಯ ಉಪಯೋಗಕ್ಕೆ ಮನೆ ವಸ್ತುಗಳನ್ನು ಖರೀದಿಸಿದ್ದೇವೆ.

ಆದರೆ, ಈಗ ಏಕಾಏಕಿ ಬಸ್ ದರ ಹೆಚ್ಚಳ ಮಾಡುವುದರಿಂದ ದಿನನಿತ್ಯ ದುಡಿಯುವ ವರ್ಗದವರಿಗೆ ತುಂಬಾ ತೊಂದರೆ ಆಗುತ್ತದೆ. ಹಾಗಾಗಿ, ಮೊದಲಿನ ದರವನ್ನೆ ಮುಂದುವರಿಸಲಿ” ಎಂದು ಸತ್ತಿಗೇರಿ ಗ್ರಾಮದ ಮಹಾದೇವ ಅವರು ಆಗ್ರಹಿಸಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ