ಡಿಸೆಂಬರ್ 28: ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ. ಅಲ್ಲಿನ ಬಡಾವಣೆಯ ಮಣ್ಣಿನಲ್ಲಿ ಪೊಲೀಸರು ಇಂಚಿಂಚೂ ಶೋಧ ನಡೆಸುತ್ತಿದ್ದರೆ,
ಇತ್ತ ಕೆರೆ ನೀರು ಏರಿ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಲ್ಲಿ ಎಲ್ಲಾ ಕಡೆ ಹುಡುಕಾಡಿದ ಪೊಲೀಸರಿಗೆ ಚೀಲದ ಮೂಟೆಯೊಂದು ಸಿಕ್ಕಿದೆ.

ಮೂಟೆಯಲ್ಲಿ ಏನಿದೆ ಅಂತ ಕುತೂಹಲದಿಂದ ನೋಡಿದವರಿಗೆ ಕಾಣಿಸಿದ್ದು ಎರಡು ತಿಂಗಳ ಹಿಂದದೆ ಕೊಳೆತು ಅರೆ ಬರೆ ಬೆಂದಿರುವ ಮೃತದೇಹದ ಅಂಗಾಂಗಗಳು! ಈ ರೀತಿ ಕ್ರೂರವಾಗಿ ಕೊಲೆಯಾಗಿರುವವರ ಹೆಸರು ದೇವರಾಜ್.ಜೊತೆಯಲ್ಲೇ ಊಟ ಮಾಡಿ, ಕಷ್ಟ ಬಂದಾಗ ಕೇಳಿದಾಗಲೆಲ್ಲ ಲಕ್ಷ ಲಕ್ಷ ರೂಪಾಯಿ ಹಣ ಕೊಟ್ಟಿದ್ದ ಸ್ನೇಹಿತನನ್ನೇ ಸಿನಿಮೀಯ ರೀತಿಯಲ್ಲಿ ಹತ್ಯೆ ಮಾಡಿರುವವನ್ನು ಕೊನೆಗೂ ಪೊಲೀಸರು ಬಲೆಗೆ ಕೆಡವಿದ್ದಾರೆ.
ರಾಜ್ ಕುಮಾರ್ ಮತ್ತು ಅನಿಲ್ ಎಂಬವರನ್ನು ಬಂಧಿಸಿದ್ದಾರೆ
Laxmi News 24×7