Breaking News

ಅಲ್ಲು ಅರ್ಜುನ್​ ಮನೆ ಮೇಲೆ ಕಲ್ಲೂ ತೂರಾಟ : ಪುಷ್ಪ ಹೀರೋಗೆ ಇದೆಂತಾ ಸಂಕಷ್ಟ !

Spread the love

ಹೈದರಾಬಾದ್ : ಪುಷ್ಪ 2 ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಘಟನೆ ಭಾರೀ ನೂಕುನುಗ್ಗಲಿಗೆ ತಿರುಗಿದ್ದು ಗೊತ್ತೇ ಇದೆ. ಆದರೆ ಈ ಘಟನೆ ಈಗಾಗಲೇ ರಾಜಕೀಯ ತಿರುವು ಪಡೆದುಕೊಂಡಿದೆ ಎನ್ನಬಹುದು. ಆದರೆ ಇಂದು ಒಂದಷ್ಟು ಜನ ಅಲ್ಲು ಅರ್ಜುನ್​ ಮನೆ ಮೇಲೆ ಕಲ್ಲೂತೂರಾಟ ನಡೆಸಿದ್ದು. ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಅಲ್ಲು ಅರ್ಜುನ್ ಕೂಡ ರಾತ್ರಿ ಪ್ರೆಸ್ ಮೀಟ್ ನಡೆಸಿ ತಮ್ಮದೇ ಶೈಲಿಯಲ್ಲಿ ವಿವರಣೆ ನೀಡಿದ್ದಾರೆ. ತೆಲಂಗಾಣ ಡಿಜಿಪಿ ಕೂಡ ಅಲ್ಲು ಅರ್ಜುನ್ ಮೇಲೆ ನಮಗೆ ಯಾವುದೇ ಕೋಪವಿಲ್ಲ, ಅವರು ಅವರನ್ನು ಎಲ್ಲರಂತೆ ನಡೆಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಅದಲ್ಲದೆ ಸೆಲೆಬ್ರಿಟಿಗಳಿಗೆ ಒಂದು ಕಾನೂನು, ಸಾಮಾನ್ಯರಿಗೆ ಇನ್ನೊಂದು ಕಾನೂನು ಎಂಬುದಿಲ್ಲ ಎಲ್ಲರು ಸಮಾನರೆ ಎಂದು ಹೇಳಿದ್ದಾರೆ.ಮತ್ತೊಂದೆಡೆ ಕಾಂಗ್ರೆಸ್ ಸಚಿವರು, ಮುಖಂಡರು ಕೂಡ ಅಲ್ಲು ಅರ್ಜುನ್ ಸಿಎಂ ರೇವಂತ್ ರೆಡ್ಡಿ ಅವರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇಂದು ಅಪರಿಚಿತರು ಏಕಾಏಕಿ ಅಲ್ಲು ಅರ್ಜುನ್​ರ ಜುಬಲಿ ಹಿಲ್ಸ್​ ಮನೆಯ ಮೇಲೆ ಕಲ್ಲೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.


Spread the love

About Laxminews 24x7

Check Also

ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ – ಕೊಲೆ ಶಂಕೆ

Spread the love ಬೆಂಗಳೂರು: ಭಾನುವಾರ ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರಿನ ಮಣಿಪಾಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ