Breaking News

ನನ್ನ ಜೀವಕ್ಕೆ ಅಪಾಯವಿದೆ, ಕೊಲೆಗೂ ಸಂಚು ನಡೆಸಲಾಗುತ್ತಿದೆ” ಎಂದು ವಿಧಾನಪರಿಷತ್​ ಸದಸ್ಯ ಸಿ.ಟಿ.ರವಿ

Spread the love

ಬೆಳಗಾವಿ: ”ನಾನು ಕೊಟ್ಟ ದೂರನ್ನು ಸ್ವೀಕಾರ ಮಾಡದೇ, ನನ್ನನ್ನು ಬೇರೆ ಕಡೆ ಕರೆದೊಯ್ಯಲು ಯತ್ನಿಸಲಾಗುತ್ತಿದೆ. ನನ್ನ ಜೀವಕ್ಕೆ ಅಪಾಯವಿದೆ, ಕೊಲೆಗೂ ಸಂಚು ನಡೆಸಲಾಗುತ್ತಿದೆ” ಎಂದು ವಿಧಾನಪರಿಷತ್​ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್​ನಲ್ಲಿ ಅಶ್ಲೀಲ ಪದ ಬಳಸಿದ ಆರೋಪದಡಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಗುರುವಾರ ಸಂಜೆ ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಖಾನಾಪುರ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಸಿ.ಟಿ.ರವಿ ವಿಡಿಯೋ ಮೂಲಕ ಆರೋಪಗಳನ್ನು ಮಾಡಿದ್ದಾರೆ.ಕಾಂಗ್ರೆಸ್​ ಸರ್ಕಾರವೇ ಜವಾಬ್ದಾರಿ: ”ಸುಮಾರು 8 ಗಂಟೆಗೆ ನಮ್ಮನ್ನು ಖಾನಾಪುರ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ನನ್ನ ಮೇಲೆ ಯಾವ ಮೊಕದ್ದಮೆ ದಾಖಲಾಗಿದೆ ಎಂಬುದನ್ನು ಹೇಳಿಲ್ಲ. ನಾನು ಕೊಟ್ಟ ದೂರಿಗೆ ಎಫ್​ಐಆರ್​ ದಾಖಲಿಸಿಲ್ಲ. ನನ್ನ ಜೀವಕ್ಕೇನಾದರೂ ಅಪಾಯವಾದರೆ ಕಾಂಗ್ರೆಸ್​ ಸರ್ಕಾರವೇ ಜವಾಬ್ದಾರಿಯಾಗಿದೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ, ಸುಳ್ಳು ದೂರು ಕೊಟ್ಟು ನನ್ನನ್ನು ಕೊಲೆ ಮಾಡುವ ಸಂಚು ಮಾಡಲಾಗಿದೆ. ಈ ಬಗ್ಗೆ ನಾನು ಸಭಾಪತಿಗಳಿಗೂ ದೂರು ನೀಡಿದ್ದೇನೆ. ಠಾಣೆಗೆ ಬಂದು ಮೂರು ಮುಕ್ಕಾಲು ಗಂಟೆಯಾದರೂ ಕೂಡ ಏನು ದೂರಿದೆ, ನಮಗೇನು ಬೇಕು ಅಂತಲೂ ಕೇಳಿಲ್ಲ. ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ” ಎಂದು ಆಪಾದಿಸಿದರು.


Spread the love

About Laxminews 24x7

Check Also

ಗೃಹ ಸಚಿವರ ತವರಲ್ಲೇ ಸಕ್ರಿಯವಾಗಿದೆ ಡ್ರಗ್ಸ್ ಮಾಫಿಯಾ…!

Spread the loveಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದವರು ಅರೆಸ್ಟ್.. ತುಮಕೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ