ಬೆಳಗಾವಿ, ಡಿಸೆಂಬರ್ 09: ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಆಗಬೇಕೆಂಬ ಆದಿತ್ಯ ಠಾಕ್ರೆ ಹೇಳಿಕೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ಆದಿತ್ಯ ಠಾಕ್ರೆ ಬಾಲಿಶತನದ ಹೇಳಿಕೆ ನೀಡಿದ್ದಾರೆ. ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡೋಕಾಗುತ್ತಾ? ಮಹಾಜನ್ ವರದಿಯನ್ನ ಒಪ್ಪಿಕೊಳ್ಳಬೇಕು.
ಎಂಇಎಸ್ ಹೋರಾಟ ವಿಚಾರವಾಗಿ ಮಾತನಾಡಿದ್ದು, ಎಂಇಎಸ್ ಹೋರಾಟ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.