ಖಾನಾಪೂರ ತಾಲೂಕಿನ ಘೋಟಗಾಳಿ-ರಂಜನಕುಡಿ ರಸ್ತೆಯಲ್ಲಿ ಆನೆ
ಘೋಟಗಾಳಿ-ರಂಜನಕುಡಿ ಮಾರ್ಗದಲ್ಲಿ ಆನೆಗಳ ದರ್ಶನ್ ಆನೆಯನ್ನು ಮತ್ತೆ ಕಾಡಿಗೆ ಥಳಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು!
ಆಂಕರ್ ಖಾನಾಪೂರ ತಾಲೂಕಿನ ಘೋಟಗಾಳಿ-ರಂಜನಕುಡಿ ರಸ್ತೆಯಲ್ಲಿ ಆನೆಯನ್ನು ಆಕಸ್ಮಿಕ ದರ್ಶನ ಪಡೆದು ಭಯ ಭೀತಗೊಂಡ ನಾಗರಿಕರು, ಸ್ವಲ್ಪ ಹೊತ್ತಿನಲ್ಲೇ ಆನೆ ರಸ್ತೆ ದಾಟಿ ರಸ್ತೆ ಪಕ್ಕದ ಜಾಧವ್ ಅವರ ಜಮೀನಿಗೆ ನುಗ್ಗಿತ್ತು. ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯ ಪ್ರಗತಿಯಲ್ಲಿತು. ಆನೆಯನ್ನು ಕಂಡು ರಸ್ತೆಯಲ್ಲಿ ಹೊಲಗಳಲ್ಲಿ ಕೆಲಸ ಮಾಡುವ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಕೂಡಲೇ ನಾಗರಿಕರು ಘೋಟಗಾಳಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು ಮಾಹಿತಿ ತಿಳಿದ ತಕ್ಷಣ ಘೋಟಗಾಳಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉಪಸ್ಥಿತರಿಂದ ನಾಗರಿಕರ ನೆರವಿನಿಂದ ಕಾರ್ಯಾಚರಣೆ ನಡೆಸಿ ಆನೆಯನ್ನು ಮತ್ತೆ ಕಾಡಿನತ್ತ ಥಳಿಸಲಾಗಿದೆ. ಆದರೆ ಈ ಭಾಗದ ರೈತರಲ್ಲಿ ಆನೆಗಳು ಮತ್ತೆ ಹೊಲಗಳಿಗೆ ಬಂದು ಬೆಳೆ ಹಾನಿ ಮಾಡುವ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಅದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗ್ರಾಮದ ಜನರು ಒತ್ತಾಯಿಸಿದ್ದರು