Breaking News

ಹುಟ್ಟೂರಿನಲ್ಲಿ ನಕ್ಸಲ್ ನಾಯಕ ‘ವಿಕ್ರಂಗೌಡ’ನ ಅಂತ್ಯಸಂಸ್ಕಾರ, ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಸಹೋದರ.!

Spread the love

ಹೆಬ್ರಿ : ಎನ್ ಕೌಂಟರ್ ನಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂಗೌಡನ ಮೃತದೇಹದ ಅಂತ್ಯಸಂಸ್ಕಾರ ಹುಟ್ಟೂರಿನಲ್ಲಿ ಇಂದು ನೆರವೇರಿದೆ.

ಹೆಬ್ರಿಯ ಕೂಡ್ಲು ಗ್ರಾಮದ ಮನೆ ಆವರಣದಲ್ಲಿ ವಿಕ್ರಂಗೌಡನ ಅಂತ್ಯಸಂಸ್ಕಾರ ನೆರವೇರಿದ್ದು, ಚಿತೆಗೆ ತಮ್ಮ ಸುರೇಶ್ ಗೌಡ ಅಗ್ನಿ ಸ್ಪರ್ಶ ಮಾಡಿದರು.

ಈ ವೇಳೆ ಗ್ರಾಮದ ಜನರು, ಪೊಲೀಸರು ಹಾಜರಿದ್ದರು.BREAKING : ಹುಟ್ಟೂರಿನಲ್ಲಿ ನಕ್ಸಲ್ ನಾಯಕ 'ವಿಕ್ರಂಗೌಡ'ನ ಅಂತ್ಯಸಂಸ್ಕಾರ, ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಸಹೋದರ.!

ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹದಳ(ANF) ನಡೆಸಿದ ಎನ್ಕೌಂಟರ್ ನಲ್ಲಿ ಕಬ್ಬಿನಾಲೆ ಮೂಲದ ನಕ್ಸಲ್ ನಾಯಕ ವಿಕ್ರಂ ಗೌಡ ಸಾವನ್ನಪ್ಪಿದ್ದರು.ಅರಣ್ಯ ಪ್ರದೇಶದಲ್ಲಿ ಎಎನ್‌ಎಫ್ ಮತ್ತು ನಕ್ಸಲರ ತಂಡಗಳು ಮುಖಾಮುಖಿಯಾಗಿದ್ದು, ಈ ವೇಳೆ ನೇತ್ರಾವತಿ ದಳದ ನಕ್ಸಲ್ ನಾಯಕ ವಿಕ್ರಂ ಗೌಡರ ಎನ್ ಕೌಂಟರ್ ಮಾಡಲಾಗಿದೆ. ಹೆಬ್ರಿ ತಾಲೂಕಿನಲ್ಲಿ ನಕ್ಸಲ್ ಚಟುವಟಿಕೆ ಹಿನ್ನಲೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದ ಎಎನ್‌ಎಫ್ ತಂಡಕ್ಕೆ ನಕ್ಸಲರ ತಂಡ ಮುಖಾಮುಖಿಯಾಗಿದೆ. ಈ ವೇಳೆ ನಕ್ಸಲ್ ಮುಖಂಡನ ಮೇಲೆ ಎಎನ್‌ಎಫ್ ಪೊಲೀಸರು ಫೈರಿಂಗ್ ಮಾಡಿದ್ದು, ಉಳಿದ ಮೂವರು ಪರಾರಿಯಾಗಿದ್ದಾರೆ. ಫೈರಿಂಗ್ ನಲ್ಲಿ ಕಬ್ಬಿನಾಲೆ ಮೂಲದ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಹತ್ಯೆ ಮಾಡಲಾಗಿದೆ.

ವಿಕ್ರಂ ಗೌಡ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನಾಗಿದ್ದು, ಈತನ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಈತ ಬೇಕಾಗಿದ್ದ. ವಿಕ್ರಂ ಗೌಡನ ನಕ್ಸಲ್ ಚಟುವಟಿಕೆ ಸಂಬಂಧ ಹಲವು ಕೆಲಸಗಳು ದಾಖಲಾಗಿದ್ದವು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ