Breaking News

ಕುಷ್ಟಗಿ: ಹರಾಜು ಹಣ ಪಾವತಿಸದಿದ್ದರೂ ಕರ ವಸೂಲಿ

Spread the love

ಕುಷ್ಟಗಿ: ಪುರಸಭೆ ವ್ಯಾಪ್ತಿಯ ದಿನದ ಸಂತೆಯಲ್ಲಿ ವ್ಯಾಪಾರಿಗಳಿಂದ ವರ್ಷದ ಅವಧಿಗೆ ಶುಲ್ಕ ವಸೂಲಿ ಮಾಡುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಮುಂಚಿತವಾಗಿ ಸಂಪೂರ್ಣ ಹಣ ಪಾವತಿಸದಿದ್ದರೂ ಸಂತೆಯಲ್ಲಿ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ದೂರು ಕೇಳಿ ಬಂದಿದೆ.

 

ತರಕಾರಿ, ಮಾಂಸದ ಅಂಗಡಿಗಳು, ಹಣ್ಣು, ಮಾರಾಟದ ಬಂಡಿ, ಫಾಸ್ಟ್‌ಫುಡ್, ಹೋಟೆಲ್‌ ಸೇರಿ ವಾರದ, ದೈನಂದಿನ ಸಂತೆ ಹಾಗೂ ಜಾನುವಾರು ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸುವವರಿಂದ ನಿಗದಿಪಡಿಸಿದ ಶುಲ್ಕ ವಸೂಲಿ ಮಾಡುವ ಹಕ್ಕನ್ನು ನೀಡಲು ಪುರಸಭೆ ಪ್ರತಿವರ್ಷ ಹೊರಗಿನ ವ್ಯಕ್ತಿಗಳಿಗೆ ಗುತ್ತಿಗೆ ನೀಡುವ ಪದ್ಧತಿ ಅನುಸರಿಸುತ್ತಿದೆ. ಬಹಿರಂಗ ಹರಾಜು ನಡೆಸಿ ಅತಿಹೆಚ್ಚು ಹಣ ನೀಡುವವರಿಗೆ ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆ ಪಡೆದವರು ಪುರಸಭೆಯ ನಿಯಮಗಳ ಪ್ರಕಾರ ಶುಲ್ಕ ವಸೂಲಿ ಮಾಡುವುದು, ಗುತ್ತಿಗೆ ಪಡೆದವರು ನಿಯಮ ಉಲ್ಲಂಘಿಸಿದರೆ ನೀಡಿದ ಗುತ್ತಿಗೆ ರದ್ದುಪಡಿಸುವ ಅವಕಾಶ ಪುರಸಭೆ ಷರತ್ತುಗಳಲ್ಲಿದೆ.

ಆಗಿದ್ದೇನು: 2024-25ನೇ ವರ್ಷಕ್ಕೆ ಈ ಮೂರೂ ಸಂತೆಗಳಲ್ಲಿ ಶುಲ್ಕ ವಸೂಲಿ ಮಾಡುವ ಸಂಬಂಧ ಕಳೆದ ಫೆ.13 ರಂದು ಬಹಿರಂಗ ಹರಾಜು ನಡೆಸಲಾಗಿತ್ತು. ದಿನದ ಮತ್ತು ವಾರದ ಸಂತೆ ಹರಾಜಿನಲ್ಲಿ ಭಾಗಹಿಸುವವರು ತಲಾ ₹ 3.50 ಲಕ್ಷ, ಜಾನುವಾರು ಸಂತೆಯಾಗಿದ್ದರೆ ₹ 50 ಸಾವಿರ ಠೇವಣಿ ಮೊತ್ತದ ಡ್ರಾಫ್ಟ್‌ ಅನ್ನು ಹರಾಜಿಗೆ ಒಂದು ದಿನ ಮೊದಲೇ ಪುರಸಭೆಗೆ ಪಾವತಿಸಬೇಕು. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಮೀರಸಾಬ್ ಬುಡನ್‌ಸಾಬ್‌ ದಿನದ ಸಂತೆಯ ಗುತ್ತಿಗೆಯನ್ನು ₹ 7.90 ಲಕ್ಷಕ್ಕೆ, ವಾರದ ಸಂತೆಯ ಗುತ್ತಿಗೆಯನ್ನು ಹುಸೇನಪ್ಪ ಹಕ್ಕಲ ಎಂಬುವವರು ₹ 3.53 ಲಕ್ಷಕ್ಕೆ ಹಾಗೂ ಜಾನುವಾರು ಸಂತೆಯ ಗುತ್ತಿಗೆಯನ್ನು ಶರಣಪ್ಪ ಪೂಜಾರ ಎಂಬುವವರು ₹ 22 ಸಾವಿರಕ್ಕೆ ಪಡೆದುಕೊಂಡಿದ್ದಾರೆ.


Spread the love

About Laxminews 24x7

Check Also

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂ ಗಳ ಸೇರ್ಪಡೆ ವಿವಾದ – ನಿರ್ಧಾರ ಕೈಬಿಡುವಂತೆ ಸಿಎಂಗೆ ಹೆಚ್‌ಡಿಕೆ ಪತ್ರ

Spread the loveಮಂಡ್ಯ: ಜಿಲ್ಲೆಯ ಮದ್ದೂರು  ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನ ಸ್ಥಳೀಯರ ಆಶಯಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ