Breaking News

ಒಂದೇ ಹಗ್ಗದಲ್ಲಿ ನೇಣಿಗೆ ಶರಣಾದ ಯುವಕ-ಯವತಿ

Spread the love

ವಿಜಯನಗರ(ಹೊಸಪೇಟೆ): ಯುವಕ ಹಾಗೂ ಯುವತಿ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಹೂವಿನಹಡಗಲಿ‌ ತಾಲೂಕಿನ ಮೈಲಾರದಲ್ಲಿ ಅ.11ರ ಶುಕ್ರವಾರ ನಡೆದಿದೆ.

ಮೈಲಾರ ಗ್ರಾಮದ ನದಿ ತೀರದ ಮರವೊಂದಕ್ಕೆ ಒಂದೇ ಹಗ್ಗದಲ್ಲಿ‌ ಕೊರಳಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಅವರಿಬ್ಬರೂ ಅ.10ರ ಗುರುವಾರ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿಟಿ ನೀಡಿ ದೇವರ ದರ್ಶನ ಪಡೆದಿದ್ದರು.

Vijayanagara: ಒಂದೇ ಹಗ್ಗದಲ್ಲಿ ನೇಣಿಗೆ ಶರಣಾದ ಯುವಕ-ಯವತಿ

ಯುವಕನ ಶರ್ಟ್ ಜೇಬಿನಲ್ಲಿ ದೇವರ‌ ದರ್ಶನದ ಸಾಮಾನ್ಯ ಚೀಟಿ ಸಿಕ್ಕಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಗ್ರಾಮ ಹಾಗೂ ನದಿ ತೀರದಲ್ಲಿ ಓಡಾಡಿದ್ದಾರೆ‌ ಎನ್ನಲಾಗಿದೆ. ಇವರಿಬ್ಬರು ಯಾವ ಊರಿನವರು ಎಂಬುದು ತಿಳಿದು ಬಂದಿಲ್ಲ.

ಇಬ್ಬರು ಕಪ್ಪು ಪ್ಯಾಂಟ್ ಧರಿಸಿದ್ದು, ಯುವಕ ಕಪ್ಪು ಶರ್ಟ್ ಧರಿಸಿದರೆ, ಯುವತಿ ಕಪ್ಪು ನೀಲಿ ಟಿ ಶರ್ಟ್ ಧರಿಸಿದ್ದಾಳೆ. ಸದ್ಯ ಯುವಕನ ಮೊಬೈಲ್ ಪತ್ತೆಯಾಗಿದ್ದು, ಸ್ವಿಚ್ ಆಫ್ ಆಗಿದೆ.

ಹೊಳಲು ಉಪ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.


Spread the love

About Laxminews 24x7

Check Also

ಅಭಿವೃದ್ಧಿಯ ಹರಿಕಾರರು ಶೋಷಿತ ವರ್ಗಗಳ ಆಶಾಕಿರಣ ಬಡವರ ಬಂಧು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಜನ್ಮದಿನಾಚರಣೆ ಸಂಭ್ರಮ

Spread the loveದೇವನಹಳ್ಳಿ:  ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ