Breaking News

ರಸ್ತೆಯಲ್ಲಿ ಉಗುಳುವುದನ್ನು ತಡೆಯಲು ಈ ಐಡಿಯಾ ಕೊಟ್ಟ ನಿತಿನ್ ಗಡ್ಕರಿ

Spread the love

ಪಾನ್ ಮಸಾಲ, ಗುಟ್ಕಾ ತಿಂದು ರಸ್ತೆಯಲ್ಲಿ ಉಗುಳುವವರನ್ನು ತಡೆಯಲು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಶಿಷ್ಟ ಉಪಾಯವೊಂದನ್ನು ನೀಡಿದ್ದಾರೆ.

ಪಾನ್, ಮಸಾಲಾ, ಗುಟ್ಕಾ ಸೇವಿಸಿ ರಸ್ತೆಯಲ್ಲಿ ಉಗುಳುವವರ ಫೋಟೋ ತೆಗೆದು ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ಅವರು ಹೇಳಿದ್ದಾರೆ.

 

ಗಾಂಧಿ ಜಯಂತಿಯಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ ಸ್ವಚ್ಛ ಭಾರತ್ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ನಮ್ಮ ದೇಶದ ಜನ ತುಂಬಾ ಬುದ್ಧಿವಂತರು, ಚಾಕಲೇಟ್ ತಿಂದು ರ್ಯಾಪರ್ ಗಳನ್ನು ರಸ್ತೆಗೆ ಎಸೆಯುತ್ತಾರೆ. ಅದೇ ವ್ಯಕ್ತಿ ವಿದೇಶಕ್ಕೆ ಹೋದಾಗ ಜೇಬಿನಲ್ಲಿ ಚಾಕಲೇಟ್ ರ್ಯಾಪರ್ ಇಟ್ಟುಕೊಂಡು ವಿದೇಶದಲ್ಲಿ ಚೆನ್ನಾಗಿದೆ ಎಂದು ವರ್ತಿಸುತ್ತಾರೆ. ಇಲ್ಲಿ ಮಾತ್ರ ರ್ಯಾಪರ್ ರಸ್ತೆಗೆ ಎಸೆಯುತ್ತಾರೆ ಎಂದು ಹೇಳಿದ್ದಾರೆ.

ನಾನು ಅದನ್ನೇ ಮಾಡುತ್ತಿದ್ದೆ. ಆದರೆ ಈಗ ಬದಲಾದೆ. ನನಗೂ ಮೊದಲು ಚಾಕೋಲೇಟ್ ತಿಂದ ನಂತರ ರ್ಯಾಪರ್ ಹೊರ ಹಾಕುವ ಅಭ್ಯಾಸ ಇತ್ತು. ಈಗ ಚಾಕೊಲೇಟ್ ತಿಂದಾಗಲೆಲ್ಲ ಮನೆ ತಲುಪಿದ ನಂತರ ರ್ಯಾಪರ್ ಬಿಸಾಡುತ್ತೇನೆ ಎಂದು ತಮ್ಮದೇ ಉದಾಹರಣೆಯನ್ನು ನೀಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ