Breaking News

ಕಾಲುವೆಯಲ್ಲಿ ಬಿದ್ದ ಕುರಿಮರಿ ರಕ್ಷಿಸಲು ಹೋಗಿದ್ದ ಯುವಕ ನೀರುಪಾಲು

Spread the love

ಮುದ್ದೇಬಿಹಾಳ: ಕಾಲುವೆಯಲ್ಲಿ ಬಿದ್ದ ಕುರಿ ಮರಿ ರಕ್ಷಿಸಲು ಹೋಗಿದ್ದ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಗಡಿ ಭಾಗದಲ್ಲಿರುವ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ನೀರು ಪಾಲಾದವನನ್ನು ಕಾಲುವೆ ಸಮೀಪ ಇರುವ ನಾಗಬೇನಾಳ ಗ್ರಾಮದ ಮಂಜುನಾಥ ಮಾದರ (28) ಎಂದು ಗುರುತಿಸಲಾಗಿದೆ.

Muddebihal ಕಾಲುವೆಯಲ್ಲಿ ಬಿದ್ದ ಕುರಿಮರಿ ರಕ್ಷಿಸಲು ಹೋಗಿದ್ದ ಯುವಕ ನೀರುಪಾಲು

ನಾರಾಯಣಪುರ ಚೆಕ್ ಪೋಸ್ಟ್ ಹತ್ತಿರ ಇರುವ ಈ ಕಾಲುವೆ ಬಳಿ ಕುರಿಗಳನ್ನು ಮೇಯಿಸಲು ಮಂಜುನಾಥ ಹೋಗಿದ್ದ. ಒಂದು ಕುರಿ ಮರಿ ಕಾಲುವೆಯಲ್ಲಿ ನೀರು ಕುಡಿಯಲು ಇಳಿದು ನೀರಿನ ರಭಸಕ್ಕೆ ಕಾಲುವೆಯಲ್ಲಿ ಹರಿದು ಹೋಗತೊಡಗಿತ್ತು. ಇದನ್ನು ರಕ್ಷಿಸಲು ಕಾಲುವೆಗೆ ಜಿಗಿದಿದ್ದಾನೆ. ಈ ವೇಳೆ ಕುರಿಮರಿ ರಕ್ಷಣೆ ಮಾಡಿದ್ದರೂ ತಾನು ಮೇಲೆ ಬರಲಾಗದೆ ಕಾಲುವೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ ಎಂದು ಮೂಲಗಳು ತಿಳಿಸಿದೆ.


Spread the love

About Laxminews 24x7

Check Also

ಬಸವೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ : ಶೇ.88.10%

Spread the loveಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ