ಕೊಡಗು: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸುವಂತ ಘಟನೆಯೊಂದು ನಡೆದಿದೆ. ಡ್ರಾಫ್ ನೀಡುವ ನೆಪದಲ್ಲಿ ಬಾಲಕಿಯೊಬ್ಬಳ ಮೇಲೆ ಕೀಚಕರ ಕೃತ್ಯವನ್ನು ದುರುಳರು ಮೆರೆದಿದ್ದಾರೆ. ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರೇ, ಮತ್ತೋರ್ವ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ನಡೆಸಲಾಗಿದೆ.

ಕೊಡಗು ಜಿಲ್ಲೆಯ ಪೊನ್ನಂ ಪೇಟೆ ತಾಲೂಕಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ಐವರು ಬಾಲಕಿಯರನ್ನು, ಮಾರುತಿ 800 ಅಪರಿಚಿತ ಕಾರಿನಲ್ಲಿ ಡ್ರಾಫ್ ಕೊಡುವುದಾಗಿ ಕರೆದೊಯ್ದಿದ್ದಾರೆ. ನಾಗರಹೊಳೆಗೆ ಡ್ರಾಫ್ ಕೊಡ್ತಾರೆ ಅಂತ ಕಾರು ಹತ್ತಿದಂತ ಬಾಲಕಿಯರನ್ನು ದಾರಿ ಮಧ್ಯೆ ಕಾಫಿ ತೋಟಕ್ಕೆ ಕರೆದೊಯ್ದು ಓರ್ವ ಬಾಲಕಿಯ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಮತ್ತೋರ್ವ ಬಾಲಕಿಯ ಮೇಲೆ ಮೂವರಿಂದ ಅತ್ಯಾಚಾರ ಯತ್ನ ನಡೆಸಲಾಗಿದೆ. ಆದ್ರೇ ತಪ್ಪಿಸಿಕೊಂಡು ಹೋಗಿ, ಸಮೀಪದಲ್ಲಿದ್ದಂತ ಸ್ಥಳೀಯರನ್ನು ರಕ್ಷಣೆಗೆ ಕೋರಿದಾಗ, ಕೀಚಕರು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಘಟನೆಯಿಂದ ಆಘಾತಕ್ಕೊಳಗಾದಂತ ಅವರು, ಕುಟ್ಟ ಪೊಲೀಸ್ ಠಾಣೆಗೆ ತೆರಳಿದಂತ ಸಂತ್ರಸ್ತ ಬಾಲಕಿಯರು ದೂರು ನೀಡಿದ್ದಾರೆ. ಬಾಲಕಿಯರ ದೂರಿನ ಅನ್ವಯ ಐವರ ವಿರುದ್ಧ ದೂರು ದಾಖಲಿಸಿಕೊಂಡು, ಆ ಬಳಿಕ ಐವರು ಕೀಚಕರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್.9ರಂದು ನಡೆದಿದ್ದ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ವಿಷಯ ತಿಳಿದು ಸ್ಥಳಕ್ಕೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ.
Laxmi News 24×7