Breaking News

ಬೆಂಗಳೂರು ಅಪರಾಧ ಸುದ್ದಿ; ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ತಾತ, ಕೇಸ್‌ ಬೀಳುತ್ತಿದ್ದಂತೆ ಪರಾರಿ,

Spread the love

ಬೆಂಗಳೂರು: ಕಾಮಾತುರಣಂ ನ ಭಯ ನ ಲಜ್ಜಾ ಎಂಬ ನಾಣ್ಣುಡಿ ಪದೇ ಪದೇ ನಿಜವಾಗುವೌಂತಹ ಘಟನೆಗಳು ಸಂಭವಿಸುತ್ತಿದ್ದು, ಕಸಿವಿಸಿಯನ್ನುಂಟು ಮಾಡುತ್ತಿವೆ. ಬೆಂಗಲೂರಿನ ಹುಳಿಮಾವು ಪ್ರದೇಶದಲ್ಲಿ ತಾತನೇ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿರುವ ಹೀನಕೃತ್ಯ ನಡೆದಿದೆ.

ಹೆತ್ತ ತಾಯಿ ಕೆಲಸಕ್ಕೆ ಹೋಗಿದ್ದಗ ತಾತ ತನ್ನ 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಅಜ್ಜ ಈ ಕೃತ್ಯ ಗೊತ್ತಾಗುತ್ತಿದ್ದಂತೆ ಅಜ್ಜ ಮೊಮ್ಮಗಳ ಪೋಷಕರಿಗೆ ಮನೆಯನ್ನು ನಿಮ್ಮ ಹೆಸರಿಗೆ ಮನೆ ಬರೆದುಕೊಡುತ್ತೇನೆ.

ಪೊಲೀಸರಿಗೆ ದೂರು ನೀಡಬೇಡಿ ಎಂದು ಪುಸಲಾಯಿಸಿದ್ದಾನೆ. ಪೋಷಕರು ಮನೆಯಿಂದ ಆಚೆ ಬರದಂತೆ ತಡೆದಿದ್ದಾನೆ. ಮಗುವಿನ ತಾಯಿ ಕೆಲಸಕ್ಕೆ ಹೋಗುವ ನೆಪದಲ್ಲಿ ಮನೆಯಿಂದಾಚೆಗೆ ಬಂದು ನೆರೆಹೊರೆಯವರ ನೆರವು ಪಡೆದು ಆಸ್ಪತ್ರೆಗೆ ಸೇರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಹುಳಿಮಾವು ಪೊಲೀಸರು ಪೋಕ್ಸೋ ಕಾಯಿದೆಯಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


Spread the love

About Laxminews 24x7

Check Also

ಶಾಸಕ ಬಸವರಾಜ್ ಶಿವಗಂಗಾ ಪಿಎ ಆತ್ಮಹತ್ಯೆ

Spread the loveಬೆಂಗಳೂರು: ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ  ಪಿಎ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಉಪ್ಪಾರಪೇಟೆ ಬಳಿಯ ಲಾಡ್ಜ್‌ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ