Breaking News

ಭಾರೀ ಮಳೆಗೆ ಧರೆ ಕುಸಿದು ಮನೆಗೆ ಹಾನಿ, ಮಣ್ಣಿನಡಿಯಲ್ಲಿ ಸಿಲುಕಿದ ಮಕ್ಕಳ ರಕ್ಷಣೆ

Spread the love

ಪುತ್ತೂರು: ತಾಲೂಕಿನೆಲ್ಲೆಡೆ ಭಾರಿ ಮಳೆಗೆ ಅನೇಕ ಕಡೆ ಧರೆ ಕುಸಿದ ಘಟನೆ ನಡೆಯುತ್ತಿದ್ದು, ಪುತ್ತೂರು ಬನ್ನೂರಿನ ಜೈನರಗುರಿ ಸಮೀಪ ಮಜೀದ್ ಎಂಬರ ಮನೆ ಮೇಲೆ ಧರೆ ಕುಸಿದ ಪರಿಣಾಮ ಮನೆ ಹಾನಿಗೊಂಡ ಮತ್ತು ನಿದ್ದೆಯಲ್ಲಿದ್ದ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಜೂ.27 ರ ನಸುಕಿನ ಜಾವ ನಡೆದಿದೆ.

Puttur: ಭಾರೀ ಮಳೆಗೆ ಧರೆ ಕುಸಿದು ಮನೆಗೆ ಹಾನಿ, ಮಣ್ಣಿನಡಿಯಲ್ಲಿ ಸಿಲುಕಿದ ಮಕ್ಕಳ ರಕ್ಷಣೆ

ಬನ್ನೂರು ಜೈನರಗುರಿ ಮಜೀದ್ ಎಂಬವರ ಮನೆಯ ಪಕ್ಕದ ಧರೆಯೊಂದರ ಮಣ್ಣು ಮಳೆಗೆ ಸಡಿಲಗೊಂಡು ಮನೆ ಮೇಲೆ ಕುಸಿದು ಬಿದ್ದಿದೆ. ಮಜೀದ್ ಮತ್ತು ಮನೆ ಮಂದಿ ಮಕ್ಕಳು ಮಲಗಿದ್ದ ಕೊಠಡಿಯ ಮೇಲೆ ಮಣ್ಣು ಕುಸಿದ ಪರಿಣಾಮ ಮನೆಯ ಅರ್ಧ ಭಾಗ ಕುಸಿದಿತ್ತು. ಈ ವೇಳೆ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದರು. ತಕ್ಷಣ ಮನೆಯಲ್ಲಿದ್ದ ಉಳಿದವರು ಮಕ್ಕಳನ್ನು ಮಣ್ಣಿನಡಿಯಿಂದ ಹೊರ ಎಳೆದು ಅಪಾಯವನ್ನು ತಪ್ಪಿಸಿದ್ದಾರೆ.

ಘಟನಾ ಸ್ಥಳಕ್ಕೆ ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್, ಪೌರಾಯುಕ್ತ ಮಧು ಎಸ್ ಮನೋಹರ್ ಸಹಿತ ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಗರಸಭೆ ಮತ್ತು ಸ್ಥಳೀಯರು ಮಣ್ಣು ತೆರವು ಕಾರ್ಯ ಮಾಡಿದ್ದಾರೆ


Spread the love

About Laxminews 24x7

Check Also

ಪ್ರೀತಿಸಿ ಮದುವೆ – ಲಾಡ್ಜ್‌ನಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಪರಾರಿ

Spread the loveಚಿಕ್ಕಬಳ್ಳಾಪುರ: ಪತ್ನಿಯನ್ನು ಲಾಡ್ಜ್‌ಗೆ  ಕರೆದುಕೊಂಡು ಬಂದ ಪತಿ, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ