Breaking News

ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು. ನಿರಂಜನ ಹಿರೇಮಠ

Spread the love

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಆಗಿದ್ದು ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಸಿಐಡಿ ಡಿಜಿಪಿ ಅವರಿಗೆ ಮಾಹಿತಿ ಕೊಟ್ಟಿದ್ದೇನೆ ಎಂದು ನೇಹಾ ತಂದೆ ಹಾಗೂ ಹು-ಧಾ. ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಹೇಳಿದರು.

ಸಿಐಡಿ ಡಿಜಿಪಿ ಎಂ.ಎ. ಸಲೀಂ ಅವರು ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳ ಕೊಲೆಯಲ್ಲಿಯೇ ಇದು ಅಂತ್ಯ ಆಗಬೇಕು.Hubballi: ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು. ನಿರಂಜನ ಹಿರೇಮಠ ಹೇಳಿಕೆ

ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು ಎಂದರು.

ನನ್ನ ಮಗಳ ಕೊಲೆಯಾಗಿ ಒಂದೂವರೆ ತಿಂಗಳಾಯಿತು. ಸಿಐಡಿ ತಂಡ ಹುಬ್ಬಳ್ಳಿಯಲ್ಲಿಯೇ ಬಿಡು ಬಿಟ್ಟಿದ್ದು, ಎಲ್ಲಾ ಆಯಾಮಗಳ ಮೇಲೆ ತನಿಖೆ ನಡೆಸುತ್ತಿದ್ದಾರೆ ಎಂಬ ನಂಬಿಕೆ ಇದೆ.‌ ಆದಷ್ಟು ಬೇಗ ತನಿಖಾ ವರದಿ ಕೊಡಬೇಕು. ತನಿಖಾಧಿಕಾರಿಗಳು ಚಾರ್ಜ್‌ಶಿಟ್ ಸಲ್ಲಿಸಲಿ ನೋಡೋಣ. ಅದು ತನಿಖೆ ಯಾವ ರೀತಿ ನಡೆದಿದೆ ಎಂಬ ಬಗ್ಗೆ ಆಗ ಮಾತನಾಡುವೆ. ಆದರೆ ಈಗಲೇ ಏನು ಮಾತನಾಡಲು ಆಗಲ್ಲ ಎಂದರು‌.

ಅಂಜಲಿ ಅಂಬೀಗೇರ ಕೊಲೆ ಪ್ರಕರಣದ ತನಿಖೆ ಸಹ ನಡೆಯುತ್ತಿದೆ. ಅವಳ ಸಾವಿಗೂ ಸಹ ನ್ಯಾಯ ಸಿಗಬೇಕು ಎಂದರು.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ