Breaking News

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

Spread the love

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ಬದಲು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಪತ್ರ ಬರೆದಿದ್ದಾರೆ.

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

ತಾವು ಬರೆದ ಪತ್ರದ ಪ್ರತಿಯನ್ನು “ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿರುವ ಯತ್ನಾಳ್‌, ಎಲ್ಲ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ತನ್ನ ಪ್ರಭಾವದ ಮೂಲಕ ಮುಚ್ಚಿ ಹಾಕುವುದು ರಾಜ್ಯ ಸರ್ಕಾರಕ್ಕೆ ಹವ್ಯಾಸವಾಗಿ ಬಿಟ್ಟಿದೆ. ಈ ಪ್ರಕರಣದಲ್ಲಿ ಸಂಪುಟದ ಪ್ರಭಾವಿ ಸಚಿವ ನಾಗೇಂದ್ರ ಭಾಗಿಯಾಗಿರುವುದರಿಂದ ಸಾಕ್ಷಿ ನಾಶಕ್ಕೆ ಆಸ್ಪದವಿದೆ. ಇದರಿಂದ ಸತ್ಯಾಂಶ ಹೊರಬರುವುದಕ್ಕೆ ಸಾಧ್ಯವಿಲ್ಲ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಪರಿಷ್ಕರಣೆ ಹೆಸರಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ: ಸರ್ಕಾರದ ವಿರುದ್ಧ ಶ್ರೀರಾಮುಲು ಕಿಡಿ

Spread the loveಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ಮಾಡ್ತಿದೆ ಅಂತ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ