Breaking News

ಜಾತ್ರೆಯಲ್ಲಿ ಅನ್ನ ಪ್ರಸಾದ ಸೇವಿಸಿದ 44 ಮಂದಿ ಭಕ್ತರು ತೀವ್ರ ಅಸ್ವಸ್ಥ

Spread the love

ಚಿಕ್ಕೋಡಿ: ಜಾತ್ರೆಯಲ್ಲಿ ವಿಷಾಹಾರ ಸೇವಿಸಿ 44 ಮಂದಿ ಅಸ್ವಸ್ಥವಾಗಿರುವ ಘಟನೆ ಕೇರೂರ ಗ್ರಾಮದಲ್ಲಿ ನಡೆದಿದೆ.

ಕೇರೂರ ಗ್ರಾಮದ ಬೇಕ್ಕೆರಿ ತೋಟದಲ್ಲಿ ಇರುವ ಶ್ರೀ ಬಾಳು ಮಾಮಾ ದೇವಸ್ಥಾನದಲ್ಲಿ ಬುಧವಾರ ಜಾತ್ರೆಯನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಮಧ್ಯಾಹ್ನ ಅನೇಕ ಭಕ್ತರು ಮಹಾಪ್ರಸಾದ ಸೇವಿಸಿದ್ದರು.

Chikkodi; ಜಾತ್ರೆಯಲ್ಲಿ ಅನ್ನ ಪ್ರಸಾದ ಸೇವಿಸಿದ 44 ಮಂದಿ ಭಕ್ತರು ತೀವ್ರ ಅಸ್ವಸ್ಥ

ಮಧ್ಯಾಹ್ನ ಉಳಿದಿದ್ದ ಅನ್ನವನ್ನೇ ರಾತ್ರಿ ಸೇವಿಸಿದ್ದ ಭಕ್ತರು ವಾಂತಿ,ಭೇದಿಯಿಂದ ಬಳಲುತ್ತಿದ್ದರು.

ಮುಂಜಾನೆಯಿಂದ ಅಸ್ವಸ್ಥವಾಗಿರುವುದರಿಂದ ಚಿಕ್ಕೊಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ 31 ಜನ,ಕೇರೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ಜನ,ಯಕ್ಸಂಬಾ ಸಾರ್ವಜನಿಕ ಆಸ್ಪತ್ರೆಯಲ್ಲಿ 8 ಮಂದಿಯನ್ನು ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ವಯೋವೃದ್ದರು,ಪುರುಷರು,ಮಹಿಳೆಯರು, ಚಿಕ್ಕಮಕ್ಕಳು ಸಹ ಅಸ್ವಸ್ಥರಾಗಿದ್ದಾರೆ.ಆಸ್ಪತ್ರೆಗೆ ಎಡಿಎಚ್‌ಓ ಎಸ್.ಎಸ್.ಗಡೇದ,ತಾಲೂಕು ಆರೋಗ್ಯಧಿಕಾರಿ ಸುಕಮಾರ ಭಾಗಾಯಿ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ.


Spread the love

About Laxminews 24x7

Check Also

ಪರಿಷ್ಕರಣೆ ಹೆಸರಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ: ಸರ್ಕಾರದ ವಿರುದ್ಧ ಶ್ರೀರಾಮುಲು ಕಿಡಿ

Spread the loveಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ಮಾಡ್ತಿದೆ ಅಂತ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ