Breaking News

ರಾಯಚೂರಿನಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

Spread the love

ರಾಯಚೂರು: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸೋಮವಾರ ಭಾರಿ ಮಳೆಯಾಗಿದೆ.

ಗುಡುಗು ಮಿಂಚು‌ ಸಹಿತ ಬೆಳಗಿನ ಜಾವ ಆರಂಭವಾದ ಮಳೆ ಬೆಳಿಗ್ಗೆ 6 ಗಂಟೆಯ ವರೆಗೂ ಸುರಿದಿದೆ. ಗಟಾರುಗಳು ತುಂಬಿ ರಸ್ತೆ ಮೇಲೆ ನೀರು ಹರಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ.

ತಗಡಿನ ಮನೆಗಳಲ್ಲಿ ನೀರು ಸೋರಿಕೆಯಾಗಿ ಮನೆಗಳಲ್ಲಿ ಸಾಮಗ್ರಿಗಳು ತೊಯ್ದಿವೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿದ ನೀರನ್ನು ಹೊರಗೆ ತೆಗೆಯಲು ಜನರು ಭಾರಿ ಪ್ರಯಾಸ ಪಡಬೇಕಾಯಿತು.

ರಾಯಚೂರಿನ ತರಕಾರಿ ಮಾರುಕಟ್ಟೆಯಲ್ಲಿ ನೀರು ನಿಂತ ಕಾರಣ ರೈತರು ರಸ್ತೆ ಬದಿಗೆ ಕುಳಿತು ತರಕಾರಿ ಮಾರಾಟ ಮಾಡಿದರು

ಹಾಲು, ಪತ್ರಿಕೆ ವಿತರಣೆಯಲ್ಲಿ ವ್ಯತ್ಯಯವಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ನೀರು ತುಂಬಿದೆ. ರಾತ್ರಿಯಿಡೀ ವಿದ್ಯುತ್ ಕೈಕೊಟ್ಟಿದೆ‌. ಮಳೆ ಸುರಿಯುತ್ತಿದ್ದರೂ ಧಗೆ ಕಡಿಮೆಯಾಗಿಲ್ಲ.

ಮಾನ್ವಿ, ಸಿರವಾರ ತಾಲ್ಲೂಕಿನಲ್ಲೂ ಮಳೆ ಮುಂದುವರಿದಿದೆ.


Spread the love

About Laxminews 24x7

Check Also

ಪರಿಷ್ಕರಣೆ ಹೆಸರಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ: ಸರ್ಕಾರದ ವಿರುದ್ಧ ಶ್ರೀರಾಮುಲು ಕಿಡಿ

Spread the loveಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ಮಾಡ್ತಿದೆ ಅಂತ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ