ಬಳ್ಳಾರಿ, ಮಾರ್ಚ್ 08: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ (Rameshwaram Cafe) ಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಹೊಸ ಬಸ್ ನಿಲ್ದಾಣದಲ್ಲೇ ಮಾರ್ಚ 1 ರ ರಾತ್ರಿ 9 ಗಂಟೆ ಸುಮಾರಿಗೆ ಶಂಕಿತ ಓಡಾಡಿದ್ದಾನೆ. ಬಸ್ ನಿಲ್ದಾಣದಲ್ಲಿ ಕೆಲ ಕಾಲ ಓಡಾಡಿರುವ ಶಂಕಿತ ಬಳಿಕ ಆಟೋ ಹತ್ತಿ ಹೋಗಿದ್ದಾನೆ.
ಹೀಗಾಗಿ ಆಟೋ ಚಾಲಕನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿ ನಗರದ ರಾಯಲ್ ಸರ್ಕಲ್ ಮುಖಾಂತರ ಕೌಲ ಬಜಾರ್‌ಗೆ ಬಾಂಬರ್ ಹೋಗಿದ್ದಾನೆ. ಲೈಟ್ ಬ್ಲೂ ಕಲರ್ ಟಿ ಶಟ್೯, ಬ್ಲಾಕ್ ಪ್ಯಾಂಟ್, ಬ್ಲಾಕ್ ಬ್ಯಾಗ್, ಮುಖಕ್ಕೆ ಮಾಸ್ಕ, ಕೈಯಲ್ಲಿ ವಾಚ್, ನೀಲಿ ಮತ್ತು ಬಿಳಿ ಮಿಶ್ರಿತ ಶ್ಯೂವನ್ನು ಬಾಂಬರ್ ಹಾಕಿದ್ದಾನೆ.
ಬಳ್ಳಾರಿ ಮೂಲದ ಮಿನಾಜ್ ಅಲಿಯಾಸ್ ಸುಲೇಮಾನ್, ಬಳ್ಳಾರಿಯ ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಶೇಕ್ ಹಾಗೂ ದೆಹಲಿಯ ಶ್ಯಾನ್ ರೆಹಮಾನ್ ಅಲಿಯಾಸ್ ಹುಸೇನ್ ಎಂಬ ನಾಲ್ವರನ್ನು ವಶಕ್ಕೆ ಪಡೆದ ಎನ್‌ಐಎ ರಾಮೇಶ್ವರಂ ಕೆಫೆಯ ಸ್ಫೊಟದಲ್ಲಿ ಇವರ ಪಾತ್ರ ಇತ್ತಾ ಎಂಬ ವಿಚಾರಣೆ ಆರಂಭಿಸಿದೆ.ಸದ್ಯ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಬಳಸಿದ ವಸ್ತುಗಳು ಹಾಗೂ ಈ ಹಿಂದೆ ದಾಳಿ ವೇಳೆ ವಶಕ್ಕೆ ಪಡೆದಿದ್ದ ಸ್ಫೋಟಕ ವಸ್ತುಗಳ ಸಾಮ್ಯತೆ ಇದ್ದು, ಬಳ್ಳಾರಿ ಮಾಡ್ಯೂಲ್ನ ಸದಸ್ಯನೇ ಈ ಕೃತ್ಯ ಎಸಗಿದ್ದಾನಾ ಎಂಬ ಅನುಮಾನದಲ್ಲಿ ವಿಚಾರಣೆ ನಡೆಸಲಾಗುತ್ತಿದೆ
Laxmi News 24×7