Breaking News

ಹಿರೆಕೋಡಿ ಗ್ರಾಮದ ಜೈನ ಮುನಿ ಹತ್ಯೆ ಹಿಂದೆ ಆಯಂಟಿ ನ್ಯಾಷನಲ್​ ಟೆರರಿಸ್ಟ್ ಸಂಘಟನೆ ಕೆಲಸ ಮಾಡುತ್ತಿದೆ.

Spread the love

ಚಿಕ್ಕೋಡಿ(ಬೆಳಗಾವಿ): ಹಿರೆಕೋಡಿ ಗ್ರಾಮದ ಜೈನ ಮುನಿ ಹತ್ಯೆ ಹಿಂದೆ ಆಯಂಟಿ ನ್ಯಾಷನಲ್​ ಟೆರರಿಸ್ಟ್ ಸಂಘಟನೆ ಕೆಲಸ ಮಾಡುತ್ತಿದೆ.

ಈ ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕು ಎಂದರೆ ಸಿಬಿಐ ತನಿಖೆ ಆಗಲೇಬೇಕು ಎಂದು ಅಖಿಲ ಭಾರತ ಸಂತ ಸಮಿತಿ ಅಧ್ಯಕ್ಷ ಹಾಗೂ ಮಂಗಳೂರಿನ ಓಂ ಶ್ರೀ ಮಠದ ಸ್ವಾಮೀಜಿಯಾದ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಆಗ್ರಹಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಜಿನ್ಯಕ್ಯ ಕಾಮಕುಮಾರ ನಂದಿ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಸನಾತನ ಧರ್ಮದಲ್ಲಿ ಗುರುತಿಸಿಕೊಂಡಿರುವ ಸ್ವಾಮೀಜಿಗಳನ್ನು ಹತ್ಯೆ ಮಾಡಲು ಆಯಂಟಿ ನ್ಯಾಷನಲ್​ ಟೆರರಿಸ್ಟ್ ಸಂಘಟನೆ ಸಂಚು ರೂಪಿಸುತ್ತಿದೆ. ಜೈನ ಮುನಿ ಹತ್ಯೆ ಪ್ರಕರಣವು ಇಡೀ ಭಾರತ ದೇಶಕ್ಕೆ ದೊಡ್ಡ ದುಃಖವಾಗಿದೆ, ಹಿಂದೂ ಸನಾತನ ಧರ್ಮಕ್ಕೆ ಇದೊಂದು ದೊಡ್ಡ ಆಘಾತವಾಗಿದೆ. ಇದು ಓರ್ವನಿಂದ ಆಗಿರುವ ಘಟನೆ ಅಲ್ಲ, ಹಿಂದೆ ದೊಡ್ಡ ಕೈವಾಡ ಇರುವ ಶಂಕೆ ಇದೆ.

ಸನಾತನ ಧರ್ಮ ಜೈನ ಮಠಗಳು ಮುಂದೆ ಬರಬಾರದು ಎನ್ನು ಉದ್ದೇಶದಿಂದ ಈ ರೀತಿ ಮಾಡಿರಬಹುದು. ನಮ್ಮ ಆತ್ಮೀಯ ದೃಷ್ಟಿಯಿಂದ ಇದು ಗೊತ್ತಾಗುತ್ತಿದೆ. ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕು ಎಂದರೆ ಸಿಬಿಐ ತನಿಖೆ ಆಗಲೇಬೇಕು. ಈಗಾಗಲೇ ಗೃಹ ಸಚಿವ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಅನಿಲ ಭಾರತ ಸಂತ ಸಮಿತಿಯಿಂದ ರಾಜ್ಯಪಾಲರನ್ನು ಭೇಟಿ ಆಗುತ್ತೇವೆ. ಈ ಹಿಂದೆ ಮಹಾರಾಷ್ಟ್ರದಲ್ಲೂ ಒಬ್ಬ ಸನ್ಯಾಸಿಯನ್ನು ಸಹ ಹೊಡೆದು ಕೊಲ್ಲಲಾಗಿದೆ. ಅಲ್ಲಿ ಅಂದು ಇದ್ದದ್ದು ಇದೆ ಸರ್ಕಾರ, ಇಂದು ಇಲ್ಲಿಯೂ ಸಹ ಇದೆ ಸರ್ಕಾರ ಇದೆ ಎಂದು ಹೆಸರು ಹೇಳದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀಗಳು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಮಾತ್ರ ಯಾಕೆ ಇಂಥ ಘಟನೆಗಳು ಆಗುತ್ತವೆ?. ಸ್ವಾಮೀಜಿ ಹತ್ಯೆ ಬಳಿಕ ನಿರಂತರವಾಗಿ 7 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾಕೆ ಇಷ್ಟೊಂದು ಹತ್ಯೆಯಾಯಿತು?. ರಾಜ್ಯದಲ್ಲಿ ಮಠಗಳಿಗೆ ರಕ್ಷಣೆ ನೀಡಬೇಕಾದ ಜವಾಬ್ಧಾರಿ ಸರ್ಕಾರಕ್ಕೆ ಇದೆ ಎಂದರು.

ಸಮಾಜದ ಗುರುಗಳಿಗೆ ರಕ್ಷಣೆ ಇಲ್ಲಾ ಅಂದರೆ ಸಂತರು ಹೇಗೆ ಮುಂದೆ ಬರಬೇಕು?. ಸಂಜೆ 6 ಗಂಟೆಯ ಬಳಿಕ ಯಾವ ಸಂತರು ಹೊರ ಬರದಂತಹ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣ ಆಗಿದೆ. ಅದಕ್ಕೆ ಪ್ರಥಮ ಬಲಿ ನಮ್ಮ ಜೈನ ಮುನಿಗಳು, ಬರಿ ಹಣದ ವಿಚಾರಕ್ಕೆ ಇಷ್ಟೊಂದು ಭೀಕರವಾಗಿ ಹತ್ಯೆಯಾಗಿದೆ ಅಂದರೆ ಅದು ನಂಬಲು ಆಗುವುದಿಲ್ಲ. ಆಗಸ್ಟ್​ 31ರೊಳಗೆ ಸಿಬಿಐ ತನಿಖೆಗೆ ಒಪ್ಪಿಸಬೇಕು. ಹತ್ಯೆಯ ಕಾರಣ ತಿಳಿಸಬೇಕು ಇಲ್ಲವಾದಲ್ಲಿ ದೊಡ್ಡ ಪ್ರಮಾಣದ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


Spread the love

About Laxminews 24x7

Check Also

ಜಾತಿ ನಿಂದನೆ ಆರೋಪದಡಿ ವಕೀಲ ಕೆ.ಎನ್​​​. ಜಗದೀಶ್​​​​ ಬಂಧನ

Spread the love ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಬಿಗ್​ಬಾಸ್​​​ ಮಾಜಿ ಸ್ಪರ್ಧಿ, ವಕೀಲ ಕೆ.ಎನ್​. ಜಗದೀಶ್​​ ಅವರನ್ನು ಕೊಡಿಗೆಹಳ್ಳಿ ಠಾಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ