Breaking News

Monthly Archives: ಮಾರ್ಚ್ 2026

ಕಣ್ಣಿಗೆ ಲೆನ್ಸ್ ಹಾಕಲು 6 ಸಾವಿರ ಲಂಚ ಕೇಳಿದ ವೈದ್ಯೆ – ಲೋಕಾ ಬಲೆಗೆ ಬಿದ್ದ ತುಮಕೂರು ಜಿಲ್ಲಾಸ್ಪತ್ರೆ ನೇತ್ರ ತಜ್ಞೆ..!!!

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನೇತ್ರಾ ಚಿಕಿತ್ಸಕಿಯಾಗಿರುವ ಡಾ. ಸವಿತಾ 6 ಸಾವಿರ ಹಣ ಲಂಚ ಪಡೆಯುವಾಗ ರೇಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಹಣ ಪಡೆಯುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ತುಮಕೂರಿನ ಉಪ್ಪಾರಹಳ್ಳಿ ನಿವಾಸಿ ಅವಿನಾಶ್ ಎಂಬುವವರ ತಾಯಿ ಕಣ್ಣಿಗೆ ಲೆನ್ಸ್ ಹಾಕಲು 6 ಸಾವಿರಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಈ ಸಂಬಂಧ ಲೋಕಾಯಕ್ತಕ್ಕೆ ಅವಿನಾಶ್ ದೂರು ನೀಡಿದ್ದರು. ಇಂದು ಮಧ್ಯಾಹ್ನ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಮನೋಜ್ ಎಂಬಾತನ ಮೂಲಕ …

Read More »

ಸಿಎಂ ಆಪ್ತನಿಗೆ ಡೀಲ್ ಮಾಸ್ಟರ್ ಪಟ್ಟ

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹೊತ್ತಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನ ವಿರುದ್ಧ ದಿನದಿಂದ ದಿನಕ್ಕೆ ಅಸಮಾಧಾನ ಹೆಚ್ಚುತ್ತಿದೆ. ಇದುವರೆಗೂ ದಿ. ಶಾಸಕ ಎಚ್.ವೈ.‌ಮೇಟಿ ಅವರ ಪುತ್ರಿ ಮಹಾದೇವಿ ಮೇಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಇದೀಗ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸಿದ್ದರಾಮಯ್ಯ ಆಪ್ತನ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಲ್ಲದೆ ಡೀಲ್ ಮಾಸ್ಟರ್ ಪಟ್ಟಗಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೊರಗಿನವರ ಹಸ್ತಕ್ಷೇಪ ಬೇಡ: …

Read More »

ಡಿಸಿ, ಎಡಿಸಿ ಸಹಿ ದುರುಪಯೋಗ ಮಾಡಿ 15 ಲಕ್ಷದ ನಕಲಿ ಬಿಲ್ ಸೃಷ್ಟಿ – ಐವರು ಅರೆಸ್ಟ್

ಚಿತ್ರದುರ್ಗ: ಜಿಲ್ಲಾಧಿಕಾರಿ ಹಾಗೂ ಎಡಿಸಿಯವರ ಡಿಜಿಟಲ್ ಸಹಿ ದುರುಪಯೋಗಪಡಿಸಿಕೊಂಡು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸೃಷ್ಟಿಸಿದ್ದ ಐವರು ನೌಕರರನ್ನು ಬಂಧಿಸಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ವಿಭಾಗದಲ್ಲಿ ಹೊರಗುತ್ತಿಗೆ ನೌಕರ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮಹೆಬೂಬ್ ಭಾಷಾ ಹಾಗೂ ವೆಂಕಟೇಶ್ ಎಂಬ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಎ1 ಆರೋಪಿ ಸೈಯದ್ ಪರಾರಿಯಾಗಿದ್ದು, ಇನ್ನುಳಿದ ಐವರನ್ನು …

Read More »

ತಾರತಮ್ಯ ಧೋರಣೆ ಅನುಸರಿಸಿದ ಶಾಸಕ ಲಕ್ಷ್ಮಣ ಸವದಿ

ಜನಪ್ರಿಯ ಮಾಜಿ ಉಪಮುಖ್ಯಮಂತ್ರಿಗಳು, ಹಾಲಿ ಅಥಣಿ ವಿಧಾನಸಭಾ ಮತಕ್ಷೇತ್ರದ ಶಾಸಕರು ಶ್ರೀ ಮ್ಯಾನ ಲಕ್ಷ್ಮಣ ಸವದಿ ಸಾಹೇಬರು ಇಡೀ ಅಥಣಿ ತಾಲೂಕಿನಲ್ಲಿ ಬರುವ 98 ಪ್ರೌಡಶಾಲೆಗಳ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯವ ಎಲ್ಲಾ ವಿದ್ಯಾರ್ಥಿಗಳಿಗೆ ಎಕ್ಸಾಮ್ ಪ್ಯಾಡ್ ವಿತರಣೆ ಮಾಡಿರುವುದು ಮಾದರಿ ಹಾಗೂ ಸಂತೋಷದ ವಿಚಾರ, ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿಗಳು ಸಮವಸ್ತ್ರ ಪಾಲನೆ ಮಾಡುವುದರ ಹಿಂದಿನ ಮಹತ್ತರವಾದ ಉದ್ದೇಶ ವಿದ್ಯಾರ್ಥಿಗಳಲ್ಲಿ ಮೇಲು ಕೀಳು,ಬಡವ ಶ್ರೀಮಂತ ಎನ್ನುವ ಭೇದ ಬಾವ ಮೂಡಬಾರದು ಅನ್ನುವ …

Read More »

ಪೊದೆಯಲ್ಲಿ ಮಲಗಲು ಸಹಕರಿಸದ ಮಹಿಳೆಯ ಕೊಲೆ, ಜೀವಾವಧಿ ಶಿಕ್ಷೆ

ರಾಯಚೂರ: ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಲಿಂಗಸುಗೂರು ಪೀಠ ಆದೇಶ ಹೊರಡಿಸಿದೆ. ಮೃತ ಮಹಿಳೆ ವಿಜಯಲಕ್ಷ್ಮಿ ಜೊತೆ ಯರಡೋಣ ಗ್ರಾಮದ ಆರೋಪಿ ದೇವರಾಜ ಅಕ್ರಮ ಸಂಬಂಧ ಹೊಂದಿದ್ದ. ಇದೀಗ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯ ಆರೋಪಿ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಮೃತ ಮಹಿಳೆ ಪತಿ ಮರಣ …

Read More »

ಶ್ರೀಶೈಲದಿಂದ‌ ವಾಪಸ್ ಬರುವಾಗ ಕ್ರೂಸರ್ ಅಪಘಾತ ; ಬೆಳಗಾವಿ ಮೂಲದ ಮೂವರು ಸಾವು

ಬೆಳಗಾವಿ : ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದುಕೊಂಡು ಮರಳಿ ಬರುವ ವೇಳೆ ಕ್ರೂಸರ್ ವಾಹನ‌ ಹಾಗೂ ಲಾರಿ‌ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಚಿಕ್ಕೋಡಿ ಮೂಲದ ಮೂವರು ಮೃತಪಟ್ಟ ಘಟನೆ ಆಂದ್ರಪ್ರದೇಶದ ಮಾರ್ಕಪುರಂ ಜಿಲ್ಲೆಯ ತಿಪ್ಪಾಯಪಾಲೆಂ ಬಳಿ ಸೋಮವಾರ ಸಂಭವಿಸಿದೆ. ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದ ಅಜಿತ್ ಸಾತವಾರ ( 28), ಗೌರವ್ (40) ಹಾಗೂ ಅಲಕಾ ಶಿಂಧೆ (60) ಮೃತಪಟ್ಟ ದುರ್ದೈವಿಗಳು. ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ …

Read More »

ಟ್ರಾಫಿಕ್ ರೂಲ್ಸ್ ಬ್ರೇಕ್ – ಬೋರ್ಡ್ ಹಿಡಿದು ಇಡೀ ದಿನ ರಸ್ತೆ ಮಧ್ಯೆ ನಿಲ್ಲುವ ಶಿಕ್ಷೆ!

ಚಿಕ್ಕಮಗಳೂರು: ಹೆಲ್ಮೆಟ್ ಧರಿಸದೇ, ಒನ್ ವೇ ರೈಡಿಂಗ್ ಹಾಗೂ ಡ್ರಿಂಕ್ & ಡ್ರೈವ್ ಮಾಡಿದ  ಆರೋಪಿಗೆ ಚಿಕ್ಕಮಗಳೂರು  ನ್ಯಾಯಾಲಯ ಬೋರ್ಡ್ ಹಿಡಿದು ಇಡೀ ದಿನ ರಸ್ತೆ ಮಧ್ಯೆ ನಿಲ್ಲುವ ಕಮ್ಯೂನಿಟಿ ಶಿಕ್ಷೆ ನೀಡಿದೆ. ಕಡೂರು  ಪಟ್ಟಣದ ಬಿಸಿಲೇಹಳ್ಳಿ ಗ್ರಾಮದ ರಂಜಿತ್‌ ಎಂಬವನು ಸಾಕಷ್ಟು ಸಲ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ. ಪೊಲೀಸರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಕರೆದೊಯ್ದಿದ್ದರು. ಈ ವೇಳೆ ನ್ಯಾಯಾಲಯದಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಕೋರ್ಟ್ ಈ ರೀತಿಯ …

Read More »

ಬೆಳಗಾವಿಯ ನಾಗಸುಧಾ ಸಂಗೀತ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

ಬೆಳಗಾವಿ: ಸಂಗೀತ ಮನಃಶಾಂತಿ ನೀಡುವ ಜಗತ್ತಿನ ಏಕೈಕ ಶಾಶ್ವತ ಕಲಾ ಮಾಧ್ಯಮವಾಗಿದೆ. ಇದಕ್ಕೆ ಎಂದಿಗೂ ಸಾವಿಲ್ಲ. ಆದರೆ ಇಂದು ಎಐ ಪ್ರವೇಶದಿಂದ ಈ ಕ್ಷೇತ್ರಕ್ಕೂ ಭಯ ಆವರಿಸಿಕೊಂಡಿದ್ದು, ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ ಎಂದು ಲೇಖಕಿ ಆಶಾ ಯಮಕನಮರಡಿ ಹೇಳಿದರು. ಟಿಳಕವಾಡಿಯ ನಾದಸುಧಾ ಸುಗಮ ಸಂಗೀತ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೇಶಭಕ್ತಿ ಗೀತೆ, ಭಕ್ತಿ ಗೀತೆ, ಭಾವಗೀತೆ ಮುಂತಾದ ಎಲ್ಲಾ ಪ್ರಕಾರದ ಗೀತೆಗಳನ್ನು …

Read More »

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಶುಭಹಾರೈಸಿದ ಜಿ.ಪಂ ಸಿಇಒ

ಬೆಳಗಾವಿ: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಅಂಕಗಳನ್ನು ಗಳಿಸುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಶುಭಹಾರೈಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ವರ್ಷಾನುಪೂರ್ತಿ ಎಲ್ಲ ವಿಷಯಗಳನ್ನು ತರಗತಿಗಳಲ್ಲಿ ಕಲಿತು, ಸಾಕಷ್ಟು ಅಧ್ಯಯನ ಮಾಡಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದೀರಿ. ಹೀಗಾಗಿ, ಯಾವುದೇ ಭಯ ಹಾಗೂ ಒತ್ತಡಕ್ಕೆ ಒಳಗಾಗದೇ ಧೈರ್ಯವಾಗಿ ಪರೀಕ್ಷೆ ಎದುರಿಸಿ. ಶಾಂತ …

Read More »

ಅಂತರರಾಜ್ಯ ಕಳ್ಳರನ್ನು ಬಂಧಿಸಿ 6.11 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ

ಬೆಳಗಾವಿ: ಹಾರೂಗೇರಿ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದ್ದ ಕಳ್ಳತನ ಪ್ರಕರಣದ ತನಿಖೆಯಲ್ಲಿ ಮಹಾರಾಷ್ಟ್ರ ಮೂಲಕ 7 ಅಂತರರಾಜ್ಯ ಕಳ್ಳರನ್ನು ಬಂಧಿಸಿ, 29 ಲಕ್ಷ ರೂ. ಮೌಲ್ಯದ 267ಗ್ರಾಂ. ಚಿನ್ನಾಭರಣ ಸೇರಿದಂತೆ  ಒಟ್ಟು 36.11 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಡಲಾಗಿದೆ ಎಂದು ಎಸ್ಪಿ ಕೆ.ರಾಮರಾಜನ್ ತಿಳಿಸಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಫೆ.7ರಂದು ರಾಯಬಾಗ ತಾಲೂಕಿನ ಹಾರೂಗೇರಿಯ ಅಭಿಷೇಕ ಪಾಂಡೆ ಎಂಬುವವರು …

Read More »