Breaking News

Monthly Archives: ಮಾರ್ಚ್ 2025

ಪತ್ನಿ ಕೊಂದು ಸೂಟ್​​ಕೇಸ್‌ನಲ್ಲಿ ತುಂಬಿಟ್ಟ ಪತಿ

ಬೆಂಗಳೂರು: ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದ್ದ ಹತ್ಯೆ‌ ಪ್ರಕರಣ ಮಾಸುವ‌ ಮುನ್ನವೇ‌ ಅದೇ ಮಾದರಿಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಲೆ ಮಾಡಿ, ಬಳಿಕ ಆಕೆಯ ದೇಹವನ್ನು ತುಂಡರಿಸಿ ಸೂಟ್​​ಕೇಸ್‌ನಲ್ಲಿ ತುಂಬಿಟ್ಟಿರುವ ಭಯಾನಕ‌ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತ್ನಿಯ ಪೋಷಕರಿಗೆ ಕರೆ ಮಾಡಿದ ಆರೋಪಿ: ಹುಳಿಮಾವು ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯ ಮನೆಯೊಂದರಲ್ಲಿ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ರಾಕೇಶ್​ ಎಂಬಾತ ತನ್ನ ಪತ್ನಿ ಗೌರಿ ಸಾಂಬೆಕರ್ (32) ಎಂಬವಳನ್ನು ಕೊಲೆಗೈದು, ಬಳಿಕ ಮೃತದೇಹವನ್ನು ತುಂಡು ತುಂಡು …

Read More »

ಲಂಚ ಪಡೆಯುತ್ತಿದ್ದ ಆರ್‌ಟಿಐ ಆಯುಕ್ತ ಲೋಕಾಯುಕ್ತ ಬಲೆಗೆ –

ಕಲಬುರಗಿ: ಆರ್‌ಟಿಐ ಕಾರ್ಯಕರ್ತನ ಹೆಸರನ್ನು ಬ್ಲ್ಯಾಕ್​ಲಿಸ್ಟ್​ನಿಂದ ತೆಗೆಯಲು ಎರಡು ಲಕ್ಷ ರೂ. ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರೊಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕರ್ನಾಟಕದಲ್ಲಿ ಆರ್‌ಟಿಐ ಆಯುಕ್ತರೊಬ್ಬರು ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಮೊದಲ ಪ್ರಕರಣ ಇದಾಗಿದೆ. ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ಕಲಬುರಗಿ ಪೀಠದ ಆರ್‌ಟಿಐ ಆಯುಕ್ತ ರವೀಂದ್ರ ಗುರುನಾಥ್ ಡಕಪ್ಪ ಅವರು ಆರ್‌ಟಿಐ ಕಾರ್ಯಕರ್ತ ಸಾಯಿಬಣ್ಣ ಸಸಿ ಬೆನಕನಹಳ್ಳಿ ಅವರ ಹೆಸರನ್ನು ಕಪ್ಪುಪಟ್ಟಿಯಿಂದ ತೆಗೆಯಲು 3 …

Read More »

100 ರೈತರಿಗೆ ಉಚಿತ ರೊಬೊಟಿಕ್ ಮೊಣಕಾಲು ಕೀಲು ಕಸಿ ಶಸ್ತ್ರಚಿಕಿತ್ಸೆ

ಬೆಂಗಳೂರು: ಬೆಂಗಳೂರಿನ ʻಕಾವೇರಿ ಹಾಸ್ಪಿಟಲ್ಸ್‌ʼ ಕರ್ನಾಟಕದ 100 ರೈತರಿಗೆ ಉಚಿತ ರೊಬೊಟಿಕ್‌ ಮೊಣಕಾಲು ಕೀಲು ಕಸಿ ಶಸ್ತ್ರಚಿಕಿತ್ಸೆ ಒದಗಿಸುವ ಗುರಿಯೊಂದಿಗೆ ತನ್ನ ಮಹತ್ವಾಕಾಂಕ್ಷೆಯ ಉಪಕ್ರಮ ‘ಕಾವೇರಿ ಸಂಕಲ್ಪ’ ಪ್ರಾರಂಭಿಸುವುದಾಗಿ ಗುರುವಾರ ಪ್ರಕಟಿಸಿದೆ. ಕಾವೇರಿ ಹಾಸ್ಪಿಟಲ್ಸ್‌ನ ಬೆಂಗಳೂರು ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ವಿಜಯಭಾಸ್ಕರನ್ ಹಾಗೂ ಹಾಸ್ಪಿಟಲ್ಸ್‌ ಎಲೆಕ್ಟ್ರಾನಿಕ್ ಸಿಟಿ ಮತ್ತು ಮಾರತ್ತಹಳ್ಳಿ ಘಟಕಗಳ ಹಿರಿಯ ಮುಖಂಡರ ಉಪಸ್ಥಿತಿಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉಪಕ್ರಮಕ್ಕೆ ಔಪಚಾರಿಕ ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವರು, “ಖಾಸಗಿ …

Read More »

ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ವಿದ್ಯುತ್‌ ದರ ಹೆಚ್ಚಳ

ಬೆಂಗಳೂರು, (ಮಾರ್ಚ್​ 27): ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಇಂದು(ಮಾರ್ಚ್ 27) ನಡೆದ ಸಚಿವ ಸಂಪುಟದಲ್ಲಿ ನಂದಿನಿ ಹಾಲು (Nandini Milk) ಹಾಗೂ ಮೊಸರು ದರ ಏರಿಕೆಗೆ ಗ್ರೀನ್ ಸಿಗ್ನಲ್​ ನೀಡಿದೆ. ಹೀಗಾಗಿ ನಂದಿನಿ ಹಾಲು ಮತ್ತು ಮೊಸರು ಪ್ರತಿ ಲೀಟರ್​​ಗೆ ಬರೋಬ್ಬರಿ 4 ರೂಪಾಯಿ ಏರಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇಂದೇ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಜನರಿಗೆ ವಿದ್ಯುತ್ ಶಾಕ್ ಕೊಟ್ಟಿದೆ. ಹೌದು…ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ …

Read More »

33 ದ್ವಿಚಕ್ರ ವಾಹನಗಳನ್ನ ಕದ್ದು ಮಾರಿದ ಕಳ್ಳನನ್ನ ಬಂಧಿಸಿರುವ ಪೊಲೀಸರು

ಹಾಸನ : ಒಂದಲ್ಲ, ಎರಡಲ್ಲ, ಮೂರಲ್ಲ ಬರೋಬ್ಬರಿ 33 ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿ ಮಾರಿದ ಖತರ್ನಾಕ್ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಲೂರು ತಾಲೂಕಿನ ವಳಗದ್ದವಳ್ಳಿ ಗ್ರಾಮದ ಗಗನ್ (35) ಬಂಧಿತ ಆರೋಪಿ. ಬಸ್ ಸ್ಟಾಂಡ್, ರೈಲ್ವೇ ಸ್ಟೇಷನ್, ಸಾರ್ವಜನಿಕ ಸ್ಥಳಗಳೇ ಇವನ ಟಾರ್ಗೆಟ್​ ಆಗಿದ್ದವು. ಬೈಕ್ ನಿಲ್ಲಿಸಿ ತುರ್ತು ಕೆಲಸಕ್ಕೆ ಹೋಗುವ ಅಥವಾ ಬಸ್ ನಿಲ್ದಾಣದ ಸಮೀಪ ಅಥವಾ ಇತರೆ ಪಾರ್ಕಿಂಗ್ ಅಲ್ಲದ ಸ್ಥಳದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರ ವಾಹನಗಳನ್ನು …

Read More »

ರಾಷ್ಟ್ರೀಯ ಹೆದ್ದಾರಿಗಳ ಟೋಲ್​ ದರ ರಾಜ್ಯದಲ್ಲಿ ಏಪ್ರಿಲ್​ 1ರಿಂದ ಹೆಚ್ಚಲಿದೆ.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯಲ್ಲಿ ಏಪ್ರಿಲ್​ 1ರಿಂದ ಸಾಗುವ ಪ್ರಯಾಣಿಕರಿಗೆ ಟೋಲ್​ ದರದ ಬಿಸಿ ಮುಟ್ಟಲಿದೆ. ಏಪ್ರಿಲ್​ 1ರಿಂದ ಪರಿಷ್ಕೃತ ಟೋಲ್​ ದರ ಜಾರಿ ಮಾಡುವ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಣೆ ಮಾಡಿದ್ದು, ಏಕಮುಖ ಸಂಚಾರದ ದರ ಕಾರಿಗೆ 115ರಿಂದ 120 ರೂ ಆಗಲಿದೆ. ದ್ವಿಮುಖ ಸಂಚಾರ ದರ 170ರಿಂದ 180 ಆಗಲಿದೆ. ಹಣದುಬ್ಬರದ ಹಿನ್ನೆಲೆಯಲ್ಲಿ ವಾರ್ಷಿಕವಾಗಿ ನಡೆಸುವ ದರ ಹೆಚ್ಚಳದ ಅನುಸಾರವಾಗಿ …

Read More »

ತಂದೆಯ ಸಾವಿನ ದಿನವೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಶಬಾನಾಗೆ ಜಿಲ್ಲಾಡಳಿತದಿಂದ ಶಹಭಾಷ್​ಗಿರಿ

ಧಾರವಾಡ: ಮಿಷನ್ ವಿದ್ಯಾಕಾಶಿ ಯೋಜನೆಯ ಯಶಸ್ವಿಗೆ ಶ್ರಮಿಸುತ್ತಿರುವ ಜಿಲ್ಲಾಡಳಿತಕ್ಕೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಸಾಥ್ ನೀಡುತ್ತಿದ್ದಾರೆ. ಇದಕ್ಕೆ ಪ್ರೇರಣೆ ಎನ್ನುವಂತೆ ತಂದೆ ತೀರಿಸಿಕೊಂಡ ನೋವಿನ ಮಧ್ಯೆಯೂ ಪರೀಕ್ಷೆ ಬರೆದು ಬಂದು ವಿದ್ಯಾರ್ಥಿನಿ ನವಲಗುಂದ ವಿದ್ಯಾರ್ಥಿನಿಯೊಬ್ಬಳ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಜಿಲ್ಲಾಡಳಿತವೇ ಆ ವಿದ್ಯಾರ್ಥಿನಿಯ ಮನೆಗೆ ತೆರಳಿ ಸಾಂತ್ವನದೊಂದಿಗೆ ಆಸರೆಯ ಭರವಸೆ ನೀಡಿದೆ. ಮಾ.21ರ ಮೊದಲ ದಿನದ ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ 4 ಗಂಟೆಗೂ ಮುನ್ನ ನವಲಗುಂದದ ಶಬಾನಾ ಅವರ ತಂದೆ …

Read More »

ಯತ್ನಾಳ್​ ಉಚ್ಛಾಟನೆ ಬಳಿಕ ಅವರ ಬಣದಲ್ಲಿ ಗುರುತಿಸಿಕೊಂಡಿರುವ ರಮೇಶ್​ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ

ಬೆಳಗಾವಿ: ಬಸನಗೌಡ ಪಾಟೀಲ ಯತ್ನಾಳ್​ ವಿರುದ್ಧ ಕ್ರಮದ ನಿರೀಕ್ಷೆ ಮೊದಲೇ ಇತ್ತು. ವಿರೋಧಿ ಬಣಕ್ಕೂ ಎಚ್ಚರಿಕೆ ನೀಡಲಾಗಿದೆ. ಯತ್ನಾಳ್​ ‌ಮರಳಿ ಬಿಜೆಪಿಗೆ ಸೇರುತ್ತಾರೆಂಬ ವಿಶ್ವಾಸ ನನಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯತ್ನಾಳ್​ ಉಚ್ಚಾಟನೆ ವಿಚಾರ ಇದು ಮೊದಲೇ ಸುದ್ದಿ ಇತ್ತು. ಹೈಕಮಾಂಡ್ ಉತ್ತರ ನೀಡಿದಾಗಲೇ ವಾಸನೆ ಬಡಿದಿತ್ತು. ರಾಜ್ಯದ ಜನರ ಭಾವನೆ ತಿಳಿದು ಮಾತಾಡಬೇಕು …

Read More »

ಪಾಲಿಕೆ ಮೇಯರ್ ಸೀಲ್ ನಲ್ಲಿ ಇರುವ ಬೆಳಗಾಂ, ಬೆಳಗಾವಿ ಆಗಲಿ-ಕನ್ನಡ ಹೋರಾಟಗಾರ ಪ್ರೇಮ ಚೌಗುಲಾ ಆಗ್ರಹ

ಪಾಲಿಕೆ ಮೇಯರ್ ಸೀಲ್ ನಲ್ಲಿ ಇರುವ ಬೆಳಗಾಂ, ಬೆಳಗಾವಿ ಆಗಲಿ-ಕನ್ನಡ ಹೋರಾಟಗಾರ ಪ್ರೇಮ ಚೌಗುಲಾ ಆಗ್ರಹ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಸೀಲ್ ನಲ್ಲಿ ಬೆಳಗಾವಿ ಎಂದಿದ್ದರೆ ಮೇಯರ್ ಸೀಲ್ ನಲ್ಲಿ ಬೆಳಗಾಂ ಎಂದು ಬರುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಕನ್ನಡ ಹೋರಾಟಗಾರ ಪ್ರೇಮ ಚೌಗುಲಾ ಆರೋಪಿಸಿದರು. ಈ ಕುರಿತು ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಎರಡ್ಮೂರು ವರ್ಷಗಳಿಂದ ಮೇಯರ್ ಕಚೇರಿಯಿಂದ ಬೆಳಗಾಂ ಎಂದು ಸೀಲ್ ಹಾಕಿಕೊಡುತ್ತಿದ್ದಾರೆ. ಇದು …

Read More »

ಬಾಣಂತಿ ಪತ್ನಿ ಹಾಗೂ ಮಗುವನ್ನು ಮನೆಗೆ ಕಳುಹಿಸಿ ಕೊಡಿ…

ಬಾಣಂತಿ ಪತ್ನಿ ಹಾಗೂ ಮಗುವನ್ನು ಮನೆಗೆ ಕಳುಹಿಸಿ ಕೊಡಿ… ಬೆಳಗಾವಿಯಲ್ಲಿ ಅತ್ತೆಯ ಮೈಮೇಲಿನ ಬಟ್ಟೆ ಹರಿದು ಸಾರ್ವಜನಿಕವಾಗಿ ಹಲ್ಲೆ ಆರೋಪ!!! ಹೆರಿಗೆಯಾಗಿ 11ನೇ ದಿನಕ್ಕೆ ಪತ್ನಿಯನ್ನು ಕಳುಹಿಸಿ ಕೊಡಬೇಕೆಂದು ಅತ್ತೆಯ ಮೈಮೇಲಿನ ಬಟ್ಟೆ ಹರಿದು ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಆರೋಪ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಲಕ್ಷ್ಮೀ ಗಲ್ಲಿಯ ಪ್ರತೀಕ್ಷಾ (22) ಎಂಬ ಯುವತಿಯೊಂದಿಗೆ 1 ವರ್ಷದ ಹಿಂದೆ ಹೊನಗಾ ಗ್ರಾಮದ ಭೈರು …

Read More »