Breaking News

Daily Archives: ಜನವರಿ 10, 2022

ಕೆಎಂಎಫ್ ವಾರ್ಷಿಕವಾಗಿ 17 ಸಾವಿರ ಕೋಟಿ ರೂ ಗಳ, ವ್ಯವಹಾರ ನಡೆಸುತ್ತಿರುವ ರಾಜ್ಯದ ನಂ1 ಸಹಕಾರಿ ಸಂಸ್ಥೆ 

  ಮೂಡಲಗಿ: ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳಿಂದ ಕೂಡಿರುವ ಕೆ.ಎಂ.ಎಫ್ ವಾರ್ಷಿಕವಾಗಿ ಸುಮಾರು 17 ಸಾವಿರ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿರುವ ರಾಜ್ಯದ ಅಗ್ರಗಣ್ಯ ಸಹಕಾರಿ ಸಂಸ್ಥೆಯಾಗಿದೆ. ಈ ಮೂಲಕ ಹೈನೋದÀ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ರೈತರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸೋಮವಾರದಂದು ತಾಲೂಕಿನ ನಾಗನೂರು ಹಾಲು ಉತ್ಪಾದಕರ ಸಹಕಾರಿ ಸಂಘದ …

Read More »

ಸುಟ್ಟು ಭಸ್ಮವಾಯ್ತು 4 ಎಕರೆ ಕಬ್ಬು: ಸಂಕಷ್ಟದಲ್ಲಿ ಅನ್ನದಾತ

ಶಾರ್ಟ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿ ಸುಮಾರು 4 ಎಕರೆ ಹೊಲದಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಕರಕಲಾಗಿರುವ ಘಟನೆ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಹೌದು ಸುಮಾರು 11 ತಿಂಗಳು ಕಷ್ಟ ಪಟ್ಟು ಬೆಳೆದಿದ್ದ ಕಬ್ಬು ಎದೆ ಎತ್ತರಕ್ಕೆ ಬಂದು ನಿಂತಿತ್ತು. ಇನ್ನೇನು ಕಬ್ಬು ಕಡಿಸಿ, ಫ್ಯಾಕ್ಟರಿಗೆ ಕಳಿಸಿದ್ರೆ ಒಳ್ಳೆಯ ಆದಾಯ ಬರುತ್ತದೆ ಎಂದು ನಿರೀಕ್ಷೆಯಲ್ಲಿದ್ದ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ರವಿವಾರ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು 4 ಎಕರೆ …

Read More »

ಕಲಿಯುತ್ತಿರುವ ಚಾಲಕ ಅಜಾಗರೂಕತೆಯಿಂದ ಕಾರಿನ ವೆಗ ಹೆಚ್ಚಿ ಬುಲೆಟ್‍ಗೆ ಕಾರು ಡಿಕ್ಕಿ

ಕಲಿಯುತ್ತಿರುವ ಚಾಲಕ ಅಜಾಗರೂಕತೆಯಿಂದ ಕಾರಿನ ವೆಗ ಹೆಚ್ಚಿಸಿದ್ದರಿಂದ ಕಾರು ಯೂನಿಯನ್ ಜಿಮ್ಖಾನಾದ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದಿದೆ. ಕಾರು ಚಾಲನೆ ಕಲಿಯುತ್ತಿದ್ದ ಚಾಲಕನ ಅಜಾಗರೂಕತೆಯಿಂದಾಗಿ ಕಾರಿನ ವೇಗ ಹೆಚ್ಚಿ ಯೂನಿಯನ್ ಜಿಮ್‍ಖಾನಾ ಕಂಪೌಂಡ್‍ಗೆ ಕಾರು ಡಿಕ್ಕಿಹೊಡೆದಿದೆ. ಮರಾಠಿ ವಿದ್ಯಾನಿಕೇತನ ಮಾರ್ಗದ ಪೆÇಲೀಸ್ ಕಾಲೋನಿ ಬಳಿ ಈ ಘಟನೆ ನಡೆದಿದೆ. ಕಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೆÇಲೀಸ್ ಕಾಲೋನಿ ಮತ್ತು ಮರಾಠಿ …

Read More »

ಸಿನಿಮಾ ನಟಿಯ ಲಿಪ್​ ಕಿಸ್​ ಪುರಾಣ; ಸಖತ್ ಟ್ರೋಲ್​ ಆಗುತ್ತಿರುವ ಅನುಪಮಾ

ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran)​ ಅವರು ಇಡೀ ದಕ್ಷಿಣ ಭಾರತದಲ್ಲಿ ಫೇಮಸ್​ ಆಗಿದ್ದಾರೆ. ಮಲಯಾಳಂ ಚಿತ್ರರಂಗದವರಾದ ಅವರು ತೆಲುಗು ಮತ್ತು ತಮಿಳಿನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ಜೊತೆ ‘ನಟ ಸಾರ್ವಭೌಮ’ (Nata Sarvabhouma) ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡದ ಸಿನಿಪ್ರಿಯರಿಗೂ ಅವರು ಪರಿಚಿತರಾದರು. ಅವರನ್ನು ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಈಗ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ …

Read More »

ಹುಬ್ಬಳ್ಳಿಯಲ್ಲಿ ಪತಿ ನಡೆಸುತ್ತಿದ್ದ ಲಾಡ್ಜ್​ನಲ್ಲೇ ಮಹಿಳಾ ಪರಿಸರ ಅಭಿಯಂತರ ಅಧಿಕಾರಿ ಆತ್ಮಹತ್ಯೆ!

ಹುಬ್ಬಳ್ಳಿ: ಸರ್ಕಾರಿ ಅಧಿಕಾರಿಯೊಬ್ಬಳು ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಮೈಸೂರು ಮೂಲದ ಶಾಂತಲಾ ಸುಪ್ರೀತ ಬೆಳಗಾವಿ ಮೃತರು. ಶಾಂತಲಾ ನೆಲಮಂಗಲದ ಪರಿಸರ ಅಭಿಯಂತರರಾಗಿದ್ದರು. ಇವರು ಭಾನುವಾರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್​ನಲ್ಲಿ ಏನಿದೆ ಎಂಬುದು ತಿಳಿದುಬಂದಿಲ್ಲ. ಮೃತ ಅಧಿಕಾರಿ ತೀವ್ರವಾದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗ್ತಿದೆ. ಅಲ್ಲದೇ, ಅಕ್ಟೋಬರ್​ನಲ್ಲಿ ಇವರ ಮಗಳು ಸಹ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಶಾಂತಲಾ ಕೂಡಾ …

Read More »

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಹಿನ್ನಲೆ: ಸಚಿವ ಗೋವಿಂದ ಕಾರಜೋಳರಿಂದ ಮತ್ತೊಂದು ದಾಖಲೆ ಬಿಡುಗಡೆ

ಬಾಗಲಕೋಟೆ: ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವ ಕುರಿತು 2013 ರಿಂದ 2018 ರವರೆಗೆ ಅಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪಶುಸಂಗೋಪನಾ ಮತ್ತು ಮುಜರಾಯಿ ಸಚಿವರಾಗಿದ್ದ, ಟಿ.ಬಿ.ಜಯಚಂದ್ರ ರವರು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದ ಸಕರಾತ್ಮಕ ಟಿಪ್ಪಣಿ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅನುಮೋದನೆಯ ನಂತರವೂ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಯಾವುದೇ ಕ್ರಮ ಕೈಗೊಳ್ಳದೇ ನಿಷ್ಕ್ರಿಯರಾಗಿದ್ದರು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ಕಟುವಾಗಿ ಟೀಕಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮ …

Read More »

ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಹೊತ್ತಿ ಉರಿದ ಕಾರು: ವಿಡಿಯೋ

ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಿಲ್ಲಿಸಿದ ಕಾರೊಂದು ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದೆ. ಶನಿವಾರ ರಾತ್ರಿ ಮೈದಾನದಲ್ಲಿ ಕಾರು ನಿಲ್ಲಿಸಲಾಗಿತ್ತು. ಇಂದು ಬೆಳಗ್ಗೆ ಬಂದು ನೋಡುವಷ್ಟರಲ್ಲಿ ಕಾರು ಬೆಂಕಿಗೆ ಆಹುತಿಯಾಗಿದೆ. ಈ‌ ಕಾರು ನಗರದ ಗಿರಣಿಚಾಳ ನಿವಾಸಿ ಶ್ರೀಕಾಂತ್ ಬಾರಕೇರ್ ಎನ್ನುವವರಿಗೆ ಸೇರಿದ್ದಾಗಿದೆ. ಬೇರೆ ಕೆಲಸ ಕಾರಣದಿಂದ ಕಾರನ್ನು ಮೈದಾನದಲ್ಲಿ ‌ನಿಲ್ಲಿಸಿ ಹೋಗಿದ್ದರು. ಆದರೆ ಇಂದು ಬೆಳಗ್ಗೆ ದಿಢೀರನೇ ಕಾರು ಹೊತ್ತಿ ಉರಿದಿದ್ದು, ಯಾರೋ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ.‌ ಕಾರಿಗೆ …

Read More »

ಕೋವಿಡ್ ವೀಕೆಂಡ್ ಕರ್ಫ್ಯೂ: ನಗರ ಪೊಲೀಸರಿಂದ 944 ವಾಹನಗಳು ಜಪ್ತಿ

ಬೆಂಗಳೂರು: ವೀಕೆಂಡ್ ಕರ್ಫ್ಯೂ ವೇಳೆ ನಗರದಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ 864 ದ್ವಿಚಕ್ರ ವಾಹನ, 26 ಆಟೋ, 54 ಕಾರು ಸೇರಿದಂತೆ ಒಟ್ಟು 944 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಪಶ್ಚಿಮ ವಿಭಾಗದಲ್ಲಿ ಅತಿ ಹೆಚ್ಚು- 414, ದಕ್ಷಿಣ ವಿಭಾಗದಲ್ಲಿ – 171, ಉತ್ತರ ವಿಭಾಗದಲ್ಲಿ- 147 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 2021 ಡಿಸೆಂಬರ್ 28ರಿಂದ ಜನವರಿ 9 ರ ವರೆಗೆ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳ …

Read More »

‘ಹಾಡಿದ್ದೇ ಹಾಡೋ ಕಿಸಬಾಯಿದಾಸ ಅಂತಾರಲ್ಲ ಹಾಗೆ ಸಿದ್ದರಾಮಯ್ಯ ಹೇಳಿದ್ದೇ ಹೇಳುತ್ತಾರೆ.

ಧಾರವಾಡ: ಹಾಡಿದ್ದೇ ಹಾಡೋ ಕಿಸಬಾಯಿದಾಸ ಅಂತಾರಲ್ಲ ಹಾಗೆ ಸಿದ್ದರಾಮಯ್ಯ ಹೇಳಿದ್ದೇ ಹೇಳುತ್ತಾರೆ. ಅದೇ ಟಿಪ್ಪು ಸುಲ್ತಾನ್ ವರ್ಣನೆ ಮಾಡುತ್ತಾರೆ. ಅದು ಬಿಟ್ಟರೆ ಬೇರೆ ಗೊತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ನಿರ್ಲಕ್ಷ್ಯ ವಿಚಾರ ಚರ್ಚಿಸಲು ಕೊನೆಗೆ ಎರಡು ದಿನ ಕೊಟ್ಟರು. ಮುಂದಿನ ಅಧಿವೇಶನದಲ್ಲಿ ಮೊದಲೇ ನಾಲ್ಕು ದಿನ ಕೊಡಬೇಕು. ಈ ಕುರಿತ ಚರ್ಚೆಗೆ ಮೊದಲೇ ಸಮಯ ಕೊಡುವಂತೆ ಸಭಾಪತಿ ಬಳಿ ಕೇಳಿದ್ದೇನೆ …

Read More »

ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ ಸೇರಿ 31 ಮಂದಿ ವಿರುದ್ಧ ಎಫ್​ಐಆರ್​ ದಾಖಲು

ರಾಮನಗರ : ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ ವೇಳೆ ವಾರಾಂತ್ಯದ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ 31 ಮಂದಿ‌ ವಿರುದ್ದ ಎಫ್‌ಐಆರ್ ದಾಖಲು ಮಾಡಲಾಗಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಪೊಲೀಸ್​​ ಠಾಣೆಯಲ್ಲಿ‌ ಎಫ್‌ಐಆರ್ ದಾಖಲಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಿನ್ನೆ ಮೇಕೆದಾಟುನಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿಪತ್ತು ನಿರ್ವಹಣಾ ಕಾಯಿದೆ 2005ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »