ಕೊಟ್ಟಾಯಂ (ಕೇರಳ): ತನ್ನನ್ನು ಪ್ರೀತಿಸಿಲ್ಲ ಎನ್ನುವ ಕಾರಣಕ್ಕೆ ಯುವತಿಯನ್ನು ಕಾಲೇಜಿನ ಆವರಣದಲ್ಲಿಯೇ ತಲೆ ಕಡಿದು ವಿದ್ಯಾರ್ಥಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ವೈಕಾಂನ ತಲಯೋಳಪ್ಪರಂಬು ನಿವಾಸಿಯಾದ 22 ವರ್ಷದ ವಿದ್ಯಾರ್ಥಿನಿ ನಿಥಿನಾ ಮೋಲ್ ಕೊಲೆಯಾಗಿದ್ದಾಳೆ. ಕೂತಟ್ಟುಕುಲಂನ ಉಪ್ಪಾಣಿ ನಿವಾಸಿಯಾದ ಅಭಿಷೇಕ್ ಬೈಜು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ನಿಥಿನಾ ಕೊಟ್ಟಾಯಂನ ಸೇಂಟ್ ಥಾಮಸ್ ಕಾಲೇಜು ಕ್ಯಾಂಪಸ್ನಲ್ಲಿ ಮೂರನೇ ವರ್ಷದ ‘ಬ್ಯಾಚುಲರ್ ಆಫ್ ವೋಕೇಷನ್’ ವ್ಯಾಸಂಗ ಮಾಡುತ್ತಿದ್ದಳು. ತನ್ನನ್ನು ಪ್ರೀತಿಸುವಂತೆ ಅಭಿಷೇಕ್ ಪದೇ …
Read More »Daily Archives: ಅಕ್ಟೋಬರ್ 1, 2021
ಟಾಟಾ ಕಂಪನಿ ತೆಕ್ಕೆಗೆ ಏರ್ ಇಂಡಿಯಾ
ನವದೆಹಲಿ: ಏರ್ ಇಂಡಿಯಾ ಏರ್ ಲೈನ್ಸ್ ಮತ್ತೆ ಟಾಟಾ ಗ್ರೂಪ್ ಪಾಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ 20 ಸಾವಿರ ಕೋಟಿಗೆ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿಯಿದ್ದು, ಈ ಮೂಲಕ ಏರ್ ಇಂದಿಯಾವನ್ನು ಟಾಟಾ ಗ್ರೂಪ್ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಟಾಟಾ ಗ್ರೂಪ್ ಇಂಡಿಯನ್ ಏರ್ ಲೈನ್ಸ್ ಆರಂಭಿಸಿತ್ತು. ಇದೀಗ ಏರ್ ಇಂಡಿಯಾವನ್ನು ಮತ್ತೆ ಖರೀದಿಸುವ ಮೂಲಕ ಮತ್ತೆ …
Read More »ವರ್ಷಕ್ಕೆ ₹2.5ಕೋಟಿ ನಿರ್ವಹಣೆಗೆ ಬಿಡುಗಡೆ; ಆದರೂ ಕಪ್ಪು ಬಣ್ಣಕ್ಕೆ ತಿರುಗಿದ ಹೆಮ್ಮೆಯ ಸುವರ್ಣಸೌಧ..!
ಬೆಳಗಾವಿ: ಅಂದಾಜು 500 ಕೋಟಿ ರೂಪಾಯಿ ವೆಚ್ಚದಲ್ಲಿ ಕುಂದಾನಗರಿಯಲ್ಲಿ ನಿರ್ಮಾಣವಾಗಿರುವ ಸುವರ್ಣಸೌಧ ಸೂಕ್ತ ನಿರ್ವಹಣೆಯ ಕೊರತೆ ಎದುರಿಸುತ್ತಿದ್ದು, ಬಿಳಿ ಆನೆಯಂತಿದ್ದ ಸೌಧ ಸೂಕ್ತ ನಿರ್ವಹಣೆಯಿಲ್ಲದೆ ಪಾಚಿಗಟ್ಟಿ ಕಪ್ಪುಬಣ್ಣಕ್ಕೆ ತಿರುಗಿದೆ. ಹೌದು.. ಈ ಬಾರಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಸೌಂದರ್ಯ ಕಳೆದುಕೊಂಡ ಸುವರ್ಣಸೌಧ, ಸರಿಯಾಗಿ ನಿರ್ವಹಣೆ ಇಲ್ಲದೇ ಪಾಚಿಗಟ್ಟಿ ಹಸಿರು, ಕಪ್ಪು ಬಣ್ಣಕ್ಕೆ ತಿರುಗಿದೆ. ಪರಿಣಾಮ ಹಳೆ ಕಟ್ಟಡವಾಗಿ ಮಾರ್ಪಾಡಾಗಿದೆ. ಪ್ರತಿ ವರ್ಷ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಣೆಗಾಗಿಯೇ 2.5ಕೋಟಿ ರೂಪಾಯಿಗಳನ್ನು ಖರ್ಚು …
Read More »2ಎ ನೀಡಿದರೆ ಸನ್ಮಾನ, ಇಲ್ಲದಿದ್ದರೆ ಸತ್ಯಾಗ್ರಹ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ: ‘ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಗುವುದು. ಇಲ್ಲದೇ ಇದ್ದರೆ ಸತ್ಯಾಗ್ರಹ ಮುಂದುವರಿಸಲಾಗುವುದು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು. ನಗರದ ತ್ರಿಶೂಲ್ ಕಲಾ ಭವನದಲ್ಲಿ ಗುರುವಾರ ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಕೊನೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪಂಚಮಸಾಲಿ ಸಮಾಜ ಎಲ್ಲರನ್ನೂ ನಂಬುವ ಸಮಾಜ. ಹಿಂದೆ ಬಿ.ಎಸ್. ಯಡಿಯೂರಪ್ಪ ಅವರನ್ನು ನಂಬಿತ್ತು. ಅವರು ಕೈಕೊಟ್ಟರು. …
Read More »ನನಗೆ ಅಭಿವೃದ್ಧಿಯ ರಾಜಕಾರಣ ಮಾತ್ರ ಗೊತ್ತಿದೆ.:ಪಾಟೀಲಗೆ ಲಕ್ಷ್ಮಿ ತಿರುಗೇಟು
ಬೆಳಗಾವಿ: ‘ನನಗೆ ಅಭಿವೃದ್ಧಿಯ ರಾಜಕಾರಣ ಮಾತ್ರ ಗೊತ್ತಿದೆ. ಸಂಜಯ ಪಾಟೀಲ ಅವರು ಹೇಳಿರುವಂತೆ ಇತರ ರಾಜಕಾರಣ ನನಗೆ ಗೊತ್ತಿಲ್ಲ’ ಎಂದು ಇಲ್ಲಿನ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿರುಗೇಟು ನೀಡಿದರು. ‘ರಾತ್ರಿ ರಾಜಕೀಯದಿಂದ ಶಾಸಕಿಯಾದ ಲಕ್ಷ್ಮಿ ಹೆಬ್ಬಾಳಕರ’ ಎಂಬ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ‘ಹೆಣ್ಣನ್ನು ಪೂಜಿಸುವ ಸಮಾಜ ನಮ್ಮದು. ಒಬ್ಬ ಶಾಸಕಿ ಬಗ್ಗೆ ಹಗುರವಾಗಿ ಮಾತನಾಡುವುದು …
Read More »ಹಾನಗಲ್ ಟಿಕೆಟ್: ಸಿದ್ದರಾಮಯ್ಯ ಸಂಧಾನ ಸಭೆಯಲ್ಲಿ ನಾಯಕರ ಮಾತಿಗೆ ಸೈ ಎಂದ ಮನೋಹರ್
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಹಾನಗಲ್ ವಿಚಾರದ ಸಂಧಾನ ಸಭೆ ಸಕ್ಸಸ್ ಆಗಿದ್ದು ನಿನ್ನೆ ಶ್ರೀನಿವಾಸ್ ಮಾನೆಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡಲ್ಲ ಅಂದಿದ್ದ ಮನೋಹರ್ ತಹಶಿಲ್ದಾರ್ ಇದೀಗ ಯೂಟರ್ನ್ ಹೊಡೆದಿದ್ದಾರೆ. ಶ್ರೀನಿವಾಸ್ ಮಾನೆ ಅಭ್ಯರ್ಥಿಯಾದರೂ ಕೆಲಸ ಮಾಡುವೆ ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡ್ತೀನಿ ಎಂದಿದ್ದಾರೆ. ನಿನ್ನೆ ಯಾವುದೇ ಕಾರಣಕ್ಕೂ ಮಾನೆಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡಲ್ಲ ಅಂತ ಮನೋಹರ್ ಹೇಳಿದ್ದರು. ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯ ನಂತರ …
Read More »ಮಂಡ್ಯದಲ್ಲಿ ಮಹಾಮಳೆ; ಸಂಪೂರ್ಣ ಜಲಾವೃತವಾದ ಕೆ.ಆರ್.ಪೇಟೆ ಬಸ್ಸ್ಟ್ಯಾಂಡ್
ಮಂಡ್ಯ: ಮಂಡ್ಯ ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದ್ದು ಕೆ. ಆರ್. ಪೇಟೆಯ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಬಸ್ ಗಾಗಿ ಕಾದುಕುಳಿತಿದ್ದ ಪ್ರಾಮಾಣಿಕರು ಪರದಾಡಿದ್ದಾರೆ. ಬಸ್ ನಿಲ್ದಾಣದಲ್ಲಿದ್ದ ಮಕ್ಕಳು, ಗರ್ಭಿಣಿಯರು ಸೇರಿದಂತೆ ನೂರಾರು ಪ್ರಯಾಣಿಕರು ಸಿಲುಕಿದ್ದರು. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ಬಸ್ ನಿಲ್ದಾಣ ಇಳಿಜಾರಿನಲ್ಲಿದೆ. ಹೀಗಾಗಿ ಸತತ ಒಂದೂವರೆ ಗಂಟೆಯಿಂದ ಸುರಿದ ಭರ್ಜರಿ ಮಳೆಗೆ ಬಸ್ ನಿಲ್ದಾಣ ಜಲಾವೃತವಾಗಿದೆ. ಸ್ಥಳಕ್ಕೆ ತಹಶೀಲ್ದಾರ್ …
Read More »ಉ. ಕರ್ನಾಟಕಕ್ಕೆ 5kg ಗೋಧಿ, ದ. ಕರ್ನಾಟಕಕ್ಕೆ 5kg ಅಕ್ಕಿ ವಿತರಣೆಗೆ ಚಿಂತನೆ- ಉಮೇಶ್ ಕತ್ತಿ
ಮೈಸೂರು: ಸಚಿವ ಉಮೇಶ್ ಕತ್ತಿ ಮಾತನಾಡಿ.. ಯಾವುದೇ ಕಾರಣಕ್ಕೂ ಪಡಿತರ ಅಕ್ಕಿ ಕಡಿತ ಮಾಡಲ್ಲ. ಆಹಾರ ಭದ್ರತಾ ಕಾಯ್ದೆ ಅಡಿ 5kg ಅಕ್ಕಿ ನೀಡಲಾಗುತ್ತೆ. ಉತ್ತರ ಕರ್ನಾಟಕಕ್ಕೆ 5kg ಗೋಧಿ, ದಕ್ಷಿಣ ಕರ್ನಾಟಕಕ್ಕೆ 5kg ಅಕ್ಕಿ ವಿತರಣೆಗೆ ಚಿಂತನೆ ನಡೆದಿದೆ ಎಂದಿದ್ದಾರೆ. ಮುಂದುವರೆದು ರಮೇಶ್ ಜಾರಕಿಹೊಳಿ ವಿಚಾರವಾಗಿ ಮಾತನಾಡಿ.. ರಮೇಶ್ ಜಾರಕಿಹೋಳಿ ಕೇಸ್ ಇತ್ಯರ್ಥ ಆಗ್ತಿದ್ದಂತೆ ಸಂಪುಟ ಸೇರ್ತಾರೆ. ನನಗೆ ವಿಶ್ವಾಸ ಇದೆ ಅವರು ನೂರಕ್ಕೆ ನೂರರಷ್ಟು ಸಚಿವರಾಗ್ತಾರೆ. ಈ …
Read More »ನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡುವ ರೌಡಿಗಳಿದ್ದಾರೆ : ಅರಗ ಜ್ಞಾನೇಂದ್ರ
ಬೆಂಗಳೂರು: ನಗರದಲ್ಲಿ ರೌಡಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂಬಂಧಿಸಿದವರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಇಂಥ ಸಮಾಜಘಾತುಕರನ್ನು ಬಳಸಿಕೊಂಡು ಬೆದರಿಸುವ ಕಾರ್ಯಗಳು ನಡೆಯುತ್ತಿವೆ. ಇಂಥವುಗಳು ಕೂಡಲೇ ಬಂದ್ ಆಗಬೇಕು. ಬೆಂಗಳೂರನ್ನು ರೌಡಿಮುಕ್ತ ನಗರವನ್ನಾಗಿಸಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಂದು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ …
Read More »ರೌಡಿ ರಫೀ ವಿರುದ್ಧ ಗೂಂಡಾ ಕಾಯ್ದೆ: ಸಿಸಿಬಿ ಪೊಲೀಸರಿಂದ ಬಂಧನ
ಬೆಂಗಳೂರಿನಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿರುವ ರೌಡಿಗಳ ವಿರುದ್ಧ ನಿರಂತರವಾಗಿ ಸಿಸಿಬಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದು,ಇದೀಗ ರೌಡಿ ರಫೀ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಇನ್ನು ಬಸವೇಶ್ವರನಗರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿರುವ ರಫೀ, 2013ರಿಂದ ತಾವರೆಕೆರೆ, ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಿರಂತರವಾಗಿ ರೌಡಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಒಟ್ಟು 8 ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಅದಲ್ಲದೆ ರೌಡಿ ರಫೀ ಕಳೆದ ಒಂದೂವರೆ ತಿಂಗಳ ಹಿಂದೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ …
Read More »