ಮೈಸೂರು, ಸೆ.13- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದ್ದು ಈ ನಡುವೆ ಇಂದು ಗಜ ಪಯಣಕ್ಕೆ ಚಾಲನೆ ದೊರೆತಿದೆ. ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಸರಳ ಗಜಪಯಣಕ್ಕೆ ಚಾಲನೆ ದೊರೆತಿದ್ದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿವೆ. ದಸರಾ ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆ ಭಾಗಿಯಾಗಲಿವೆ. ಕೊರೊನಾ ನಡುವೆ ಸಾಂಪ್ರದಾಯಿಕ ದಸರಾ ಆಚರಣೆಗೆ ಇಂದು ಚಾಲನೆ ದೊರೆತಿದ್ದು, ಜಂಬೂಸವಾರಿ …
Read More »Monthly Archives: ಸೆಪ್ಟೆಂಬರ್ 2021
ಸದನದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಮುಖ್ಯ ಸಚೇತಕರ ಪಕ್ಕದ ಆಸನ: ಸಿಎಂ ಬೊಮ್ಮಾಯಿ ಆಡಳಿತಕ್ಕೆ ಬಹುಪರಾಕ್!
ಬೆಂಗಳೂರು: ಕರ್ನಾಟಕದ 15ನೇ ವಿಧಾನಸಭೆಯ 10ನೇ ಅಧಿವೇಶನವು ಸೋಮವಾರದಿಂದ ಸೆಪ್ಟೆಂಬರ್ 24 ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಹಿಂದಿನ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸದನದಲ್ಲಿ ಎಲ್ಲಿ ಕುಳಿತುಕೊಳ್ಳುತ್ತಾರೆ, ಅವರಿಗೆ ಯಾವ ಸ್ಥಾನ ನೀಡಲಾಗುತ್ತದೆ, ಶಾಸಕ ಸೀಟಿನಲ್ಲಿ ಅವರು ಕೂರಬೇಕಾಗುತ್ತದೆ ಎಂಬಿತ್ಯಾದಿ ಹಲವು ಚರ್ಚೆಗಳು ಕೇಳಿಬಂದಿದ್ದವು. ಈ ಬಗ್ಗೆ ಇಂದು ವಿಧಾನಸೌಧಕ್ಕೆ ಕಲಾಪಕ್ಕೆ ಆಗಮಿಸಿದ ಯಡಿಯೂರಪ್ಪನವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ, ಅವರಿಗೆ …
Read More »ವಿಧಾನಸಭೆ ಅಧಿವೇಶನ : ಹಲವು ವಿಶೇಷತೆಗಳಿಗೆ ಕಾರಣವಾದ ಸದನ
ಬೆಂಗಳೂರು, ಸೆ.13- ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಇಂದು ಹೊಸ ಸಚಿವರ ಸಂಭ್ರಮ ಸೇರಿದಂತೆ ಹಲವು ವಿಶೇಷತೆಗಳಿಗೆ ಸದನ ಸಾಕ್ಷಿಯಾಯಿತು.ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಪಾಲ್ಗೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ಇಂದು ಮಾಜಿ ಮುಖ್ಯಮಂತ್ರಿಯಾಗಿ ಮುಖ್ಯ ಸಚೇತಕರ ಪಕ್ಕದ ಆಸನದಲ್ಲಿ ಕುಳಿತಿದ್ದರು. ಕಳೆದ ಅಧಿವೇಶನದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಸುರೇಶ್‍ಕುಮಾರ್ ಅವರು ಈ ಅಧಿವೇಶನದಲ್ಲಿ ಹಿಂದಿನ ಸಾಲಿಗೆ ಸ್ಥಳಾಂತರಗೊಂಡಿದ್ದದ್ದು ಕಂಡು ಬಂದಿತು.ನೂತನ ಸಚಿವರಾದ ಮುನಿರತ್ನ ಹಾಗೂ ಶಂಕರಪಾಟೀಲ್ ಮುನೇನ ಕೊಪ್ಪ ಸದನದಲ್ಲಿ ಪರಸ್ಪರ …
Read More »ಗುಡಿಸಲು ಕಟ್ಟಲು ವೇಸ್ಟ್ ಬ್ಯಾನರ್ ಕೊಡಿ ಎಂದ ಅಜ್ಜ-ಅಜ್ಜಿಗೆ 2 ಲಕ್ಷದ ಮನೆಯನ್ನೇ ನಿರ್ಮಿಸಿಕೊಟ್ಟ ಕಾರ್ಪೊರೇಟರ್
ದಾವಣಗೆರೆ: ನಗರದ ಶೇಖರಪ್ಪ ಬಡಾವಣೆ ವಾರ್ಡ್ ನಂ 19 ರಲ್ಲಿ ಪಾಲಿಕೆ ಸದಸ್ಯರೋರ್ವರು ವಯಸ್ಸಾದ ಅಜ್ಜ ಅಜ್ಜಿಗೆ ಮನೆಯನ್ನ ಗಿಫ್ಟ್ ನೀಡಿದ ಮಾನವೀಯ ಘಟನೆ ನಡೆದಿದೆ. ಕಳೆದ 15 ವರ್ಷಗಳಿಂದ ಅಜ್ಜ ಅಜ್ಜಿ ಮನೆಯಿಲ್ಲದೇ ಪರದಾಡುತ್ತಿದ್ದರು. ಇದ್ದ ಮಕ್ಕಳು ತೀರಿಹೋದ ನಂತರ ಸೊಸೆಯಂದಿರು ಅಜ್ಜ ಅಜ್ಜಿಯನ್ನ ಮನೆಯಿಂದ ಹೊರಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಕಾರ್ಪೊರೇಟರ್ ಬಳಿ ಗುಡಿಸಲು ನಿರ್ಮಿಸಲು ವೇಸ್ಟ್ ಬ್ಯಾನರ್ ಕೊಡಿ ಎಂದು ಅಜ್ಜಿ ಕೇಳಿದ್ದರಂತೆ. ಈ ವೇಳೆ ಅಜ್ಜಿ …
Read More »ಬೆದರಿದ ಎತ್ತುಗಳು..ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು
ಬೆಂಗಳೂರು, ಸೆ.13- ಇಂಧನ, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸೌಧಕ್ಕೆ ಎತ್ತಿನ ಗಾಡಿಗಳಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದ ವೇಳೆ ಎತ್ತುಗಳು ಬೆದರಿಕೊಂಡು ಓಡಾಡಿದ್ದರಿಂದ ಗಾಡಿಯಲ್ಲಿದ್ದ ಶಾಸಕರು ಕೆಳಗೆ ಬಿದ್ಧ ಘಟನೆ ನಡೆದಿದೆ. ಶಾಸಕ ವೆಂಕಟರಮಣಯ್ಯ ಮತ್ತು ಸಂಗಮೇಶ್ ಇದ್ದ ಎತ್ತಿನ ಗಾಡಿಯ ಎತ್ತುಗಳು ಹೆದರಿಕೊಂಡು ಅಡ್ಡಾದಿಡ್ಡಿ ಒಡಾಡಿದ್ದರಿಂದ ಆಯಾತಪ್ಪಿ ಅವರು ಕೆಳಗೆ ಬಿದ್ದಿದ್ದಾರೆ. ಇಂದು ಬೆಳಗ್ಗೆ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಗಳಲ್ಲಿ …
Read More »ಹುಬ್ಬಳ್ಳಿ: ಪಬ್ ನಲ್ಲಿ ರೇಡಿಯೋ ಜಾಕಿಯ ಸ್ನೇಹಿತರಿಂದ ಗಲಾಟೆ
ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ರೇಡಿಯೋ ಜಾಕಿಯ ಸ್ನೇಹಿತರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಗೋಕುಲ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ ನಲ್ಲಿ ನಡೆದಿದೆ. ಆರ್ಜೆ ಮೇಘಾ ಮತ್ತು ಆಕೆಯ ಸ್ನೇಹಿತರಾದ ಪ್ರವೀಣ, ಕೃತಿಕಾ, ಹರ್ಷ, ಶ್ರೀನಿವಾಸ, ಶರಣ್ಯ, ಶೈಲೇಶ್ ಎಂಬುವವರು ಭಾನುವಾರ ರಾತ್ರಿ ಐಸ್ ಕ್ಯೂ ಪಬ್ಗೆ ತೆರಳಿದ್ದರು. ಈ ವೇಳೆ ಪ್ಲೇಟ್ನಲ್ಲಿ ಸಾಸ್ ಹಾಕಿದ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಶುರುವಾಗಿದೆ. ಜಗಳ ತಾರಕ್ಕೇರಿದ್ದು ಕುಡಿದ ನಶೆಯಲ್ಲಿ ಬಾಟಲಿ …
Read More »ಹೇಯ ಕೃತ್ಯ; ಮಹಿಳೆಯನ್ನು ಸಂಪೂರ್ಣ ಬೆತ್ತಲಾಗಿಸಿ ವಿಡಿಯೋ ಮಾಡಿ ಕಾಮುಕರು ವಿಕೃತಿ
ಯಾದಗಿರಿ: ರಾಜ್ಯದಲ್ಲೊಂದು ಬಿಹಾರ್ ಮಾದರಿಯಲ್ಲಿ ಹೇಯ ಕೃತ್ಯವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರನ್ನು ಸಂಪೂರ್ಣ ಬೆತ್ತಲಾಗಿಸಿದ ಕಿಡಿಗೇಡಿಗಳ ಗುಂಪೊಂದು ವಿಡಿಯೋ ಮಾಡಿ ವಿಕೃತಿ ಮೆರೆದಿದೆ. ನಿಮ್ಮ ಕಾಲು ಮುಗಿತೀನಿ ಬಿಡಿ ಎಂದರೂ ಕ್ಯಾರೇ ಎನ್ನದೆ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಂಗಾಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಯಾವುದೋ ಮಾರ್ಗ ಮಧ್ಯೆ ಖಾಲಿ ಜಮೀನೊಂದರಲ್ಲಿ ಕಗ್ಗತ್ತಲಲ್ಲಿ ಮಹಿಳೆಯನ್ನು ಥಳಿಸಿ ವಿಡಿಯೋ ಮಾಡಲಾಗಿದೆ. ಹಲ್ಲೆಕೋರರ ಗುಂಪೇ …
Read More »ವಿಧಾನಸೌಧದ ರೂಮ್ ನಂಬರ್ 208ರ ಪಕ್ಕದಲ್ಲಿ ಮಧ್ಯದ ಬಾಟಲಿಗಳು
ಬೆಂಗಳೂರು: ವಿಧಾನಸೌಧದ ರೂಮ್ ನಂಬರ್ 208ರ ಪಕ್ಕದಲ್ಲಿ ಮಧ್ಯದ ಬಾಟಲಿಗಳು ಕಂಡು ಬಂದಿವೆ. ಹೀಗಾಗಿ ವಿಧಾನಸೌಧದಲ್ಲಿ ಎಣ್ಣೆ ಪಾರ್ಟಿ ನಡಿತಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ. ಅಧಿವೇಶನದ ಹೊತ್ತಲ್ಲಿ, ಅಷ್ಟೊಂದು ಬಿಗಿ ಭದ್ರೆತಯ ನಡವೆಯೂ ಬಿಯರ್ ಬಾಟಲಿಗಳು ವಿಧಾನಸೌಧ ಪ್ರವೇಶಿಸಿದ್ದು ಹೇಗೆ ಎಂಬ ಕೂತೂಹಲ ಎಲ್ಲರಲ್ಲಿ ಮೂಡಿದೆ. ರಾತ್ರಿಯಾಗಿ ಬೆಳಗಾಗುವ ಹೊತ್ತಿಗೆ 208 ರೂಂ ಪಕ್ಕದ ವಾಟರ್ ಟ್ಯಾಂಕ್ ಬಳಿ 2 ಬಿಯರ್ ಬಾಟಲ್ ಗಳು ಪತ್ತೆಯಾಗಿದೆ. ಸದ್ಯ ವಿಧಾನಸೌಧದಲ್ಲಿ ಬಿಯರ್ …
Read More »ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆಹಿಡಿದ ಸ್ಥಳೀಯರು
ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ದಲ್ಲಿ ಬೆಂಗಳೂರು ಕಲಾಸಿಪಾಳ್ಯದ ಆರೀಫ್ ಪಾಷಾ(30) ಎಂಬಾತನನ್ನು ಇಲ್ಲಿನ ಕಲ್ಕಟ್ಟದಲ್ಲಿ ಭಾನುವಾರ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಫೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಬಂಧಿತನು ಕೂಲಿ ಕಾರ್ಮಿಕ ನಾಗಿದ್ದು, ತಿನಿಸು ನೀಡುವುದಾಗಿ ಹೇಳಿ ಪರಿಚಿತ ವ್ಯಕ್ತಿಯೊಬ್ಬರ ಮಗಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದನು. ಆತನ ಕೃತ್ಯಕ್ಕೆ ಹೆದರಿ ಬಾಲಕಿ ಓಡಿ ಬಂದಿದ್ದು, ಅದೇ ದಾರಿಯಲ್ಲಿ ಬರುತ್ತಿದ್ದ ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶು ಪಕಳ …
Read More »‘RSS ಮೂಲಕ ಬಿಜೆಪಿ ಸಂಘಟನೆ ಮಾಡ್ತಿದೆ.. ದೇಶ ಸಂಪೂರ್ಣ ನಾಶವಾಗುವ ದಿನಗಳು ದೂರವಿಲ್ಲ’- ಹೆಚ್ಡಿಕೆ
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ ಪಕ್ಷವನ್ನು ಉಳಿಸಿಕೊಳ್ಳಲು ಈ ಹಿಂದೆ ಬಿಜೆಪಿ ಜೊತೆ ಅನಿವಾರ್ಯವಾಗಿ ಹೋಗಬೇಕಾಯಿತು ಎಂದಿದ್ದಾರೆ. ಕಳೆದ 2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಹಲವಾರು ರೀತಿಯ ಒತ್ತಡಗಳನ್ನು ಹಾಕಿದ್ರೂ ಬಿಜೆಪಿ ಜೊತೆ ಹೋಗಿರಲಿಲ್ಲ. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಬೇರ್ಪಡಿಸುವ ಕುತಂತ್ರಗಳನ್ನು ಕಾಂಗ್ರೆಸ್ ಮಾಡಿತು. ಹಾಗಾಗಿ ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿ ಜೊತೆ ಅನಿವಾರ್ಯವಾಗಿ ಹೋಗಬೇಕಾಯಿತು. …
Read More »