ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ, ಪ್ರಸ್ತುತ ರೈಲ್ವೆ ಇಲಾಖೆ ಎಡಿಜಿಪಿಯಾಗಿರುವ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅವಕಾಶ ಕೋರಿದ್ದಾರೆ. ಈ ಮೂಲಕ ಪೊಲೀಸ್ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಪಡೆದು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಎಂಬ ಚರ್ಚೆ ಆರಂಭವಾಗಿದೆ. ಭಾಸ್ಕರ್ ರಾವ್ ಅವರ ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದರೆ ಈಗಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಸ್ವಯಂ ನಿವೃತ್ತಿಗಾಗಿ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು …
Read More »Monthly Archives: ಸೆಪ್ಟೆಂಬರ್ 2021
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಪೋಸ್ಟರ್ ಆನ್ ಲೈನಲ್ಲಿ ಲೀಕ್
ಬೆಂಗಳೂರು: ಈ ಹಿಂದೆ ಸಂದರ್ಶನದಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರು ಶೀಘ್ರದಲ್ಲಿ ತಮ್ಮ ನಿರ್ದೇಶನದ ಸಿನಿಮಾ ಬಗ್ಗೆ ಘೋಷಿಸುವುದಾಗಿ ಹೇಳಿದ್ದರು. ಉಪೇಂದ್ರ ಅವರು ತಮ್ಮ ಜನ್ಮದಿನವಾದ ಸೆ.18ರಂದು ತಮ್ಮ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರವನ್ನು ಘೋಷಣೆ ಮಾಡಲಿದ್ದಾರೆ ಎಂದೇ ಹೇಳಲಾಗಿತ್ತು. ಅಷ್ಟರೊಳಗೆ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಪೋಸ್ಟರ್ ಆನ್ ಲೈನಿನಲ್ಲಿ ಲೀಕ್ ಆಗಿರುವ ಸುದ್ದಿ ಹೊರಬಿದ್ದಿದೆ. ಇದೀಗ ಈ ಪೋಸ್ಟರ್ ವೈರಲ್ ಆಗಿದ್ದು ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ. …
Read More »ಚಿತ್ರರಂಗದಲ್ಲಿ ಕಷ್ಟಪಡುತ್ತಿದ್ದ ಯುವತಿಯರೇ ರಾಜ್ ಕುಂದ್ರಾ ಮತ್ತು ಇತರ ಆರೋಪಿಗಳ ದಂಧೆಗೆ ಟಾರ್ಗೆಟ್
ಉದ್ಯಮಿ ರಾಜ್ ಕುಂದ್ರಾ ವಿರುದ್ಧ ದಾಖಲಾಗಿರುವ ಅಶ್ಲೀಲ ಸಿನಿಮಾ ತಯಾರಿಕೆ ಮತ್ತು ಹಂಚಿಕೆ ಪ್ರಕರಣ ಕುಂದ್ರಾ ಪಾಲಿಗೆ ಮತ್ತಷ್ಟು ಉರುಳಾಗಿದೆ. ದಂಧೆಯಿಂದ ಕೋಟಿಗಟ್ಟಲೆ ಹಣವನ್ನು ರಾಜ್ ಸಂಪಾದಿಸಿದ್ದಾರೆ ಎಂದು ಪೊಲೀಸರು ಚಾರ್ಜ್ಶೀಟಿನಲ್ಲಿ ಆರೋಪಿಸಿದ್ಧಾರೆ. ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಭಾಗಿಯಾಗಿರುವ ‘ಪೋರ್ನ್ ಫಿಲ್ಮ್ ಕೇಸ್’ಗೆ ಸಂಬಂಧಪಟ್ಟಂತೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 1,500 ಪುಟಗಳ ಈ ಚಾರ್ಜ್ ಶೀಟ್ನಲ್ಲಿ ರಾಜ್ ಕುಂದ್ರಾರನ್ನು …
Read More »ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ
ಬೆಂಗಳೂರು: ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಕೇಸ್ನಲ್ಲಿ ಅತೀದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ ಡ್ರಗ್ಸ್ ಪೆಡ್ಲರ್ಗಳನ್ನ ಮತ್ತು ಡೀಲರ್ಗಳನ್ನ ಮಾತ್ರ ಬಂಧಿಸುತ್ತಿದ್ದ ಪೊಲೀಸ್ ಅಧಿಕಾರಿಗಳು, ಇದೀಗ ಇದೇ ಮೊದಲ ಬಾರಿಗೆ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿಯನ್ನ ಪತ್ತೆ ಮಾಡಿದ್ದಾರೆ. ವಿದೇಶಗಳಿಗೂ ಮಾರಾಟ..! ನಂಬಲು ಸಾಧ್ಯವಾಗದಿದ್ದರೂ ಇದು ಸತ್ಯವಾಗಿದೆ. ಇದುವರೆಗೆ ವಿದೇಶದಲ್ಲಿ ತಯಾರಾಗ್ತಿದ್ದ ಡ್ರಗ್ಸ್ ಬೆಂಗಳೂರಿನಲ್ಲೇ ತಯಾರಾಗುತ್ತಿದೆ ಅನ್ನೋದು ಬಯಲಾಗಿದೆ. ನಗರದ ಮನೆಯೊಂದರಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರು …
Read More »ನಮ್ಮಲ್ಲಿ ಚಿರತೆಯನ್ನೇ ಕೊಂದು ಒಬ್ಬರು ಹೀರೋ ಆಗಿದ್ದಾರೆ -ಸರ್ಕಾರದ ವಿರುದ್ಧ ಶಿವಲಿಂಗೇಗೌಡ ಲೇವಡಿ
ಬೆಂಗಳೂರು: ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, ರಾಜ್ಯ ಸರ್ಕಾರವನ್ನ ಲೇವಡಿ ಮಾಡಿದರು. ನಮ್ಮಲ್ಲಿ ಚಿರತೆಯನ್ನೇ ಕೊಂದು ಒಬ್ಬ ಹೀರೋ ಆಗಿದ್ದಾರೆ. ಕಾಡು ಪ್ರಾಣಿಗಳನ್ನ ನೀವು ಸರಿಯಾಗಿ ಸಾಕ್ತಿಲ್ಲ. ಅದಕ್ಕೆ ಅವುಗಳು ಊರಿಗೆ ಬರ್ತಿವೆ. ಇದರಿಂದ ಸಾಕು ಪ್ರಾಣಿಗಳು ಉಳಿಯಲ್ಲ. ಕಾಡು ಪ್ರಾಣಿಗಳಿಗೆ, ಆಹಾರ, ನೀರು ಒದಗಿಸಿ ಎಂದು ಆಗ್ರಹಿಸಿದರು. ಶಿವಲಿಂಗೇಗೌಡರ ಪ್ರಶ್ನೆಗೆ ಅರಣ್ಯ ಸಚಿವ ಉಮೇಶ್ ಕತ್ತಿ ಉತ್ತರಿಸಿ, ಹಾಸನ …
Read More »ಮೈಸೂರು ಅರಮನೆ ಪ್ರವೇಶಿಸಿದ ಗಜಪಡೆಗೆ ಪೂರ್ಣಕುಂಭ ಸ್ವಾಗತ
ವಿಶ್ವವಿಖ್ಯಾತ ದಸರಾ ಮಹೋತ್ಸವದ ಗಜಪಡೆ ಗುರುವಾರ ಅರಣ್ಯಭವನದಿಂದ ಅರಮನೆ ಪ್ರವೇಶಿಸಿದ್ದು, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಅರಣ್ಯಭವನದಲ್ಲಿ ಅಭಿಮನ್ಯು, ಧನಂಜಯ, ಕಾವೇರಿ, ಚೈತ್ರಾ, ಅಶ್ವತ್ಥಾಮ, ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ವಿಕ್ರಂ ಆನೆಗಳನ್ನು ಸಿಂಗರಿಸಿ ಗಜಪಡೆಗೆ ಪೂಜಾ ಕಾರ್ಯ ನೆರವೇರಿಸಲಾಯಿತು. ನಂತರ ವಾದ್ಯ ಮೇಳದೊಂದಿಗೆ ಗಜಪಡೆ ಅರಮನೆಯತ್ತ ಹೆಜ್ಜೆ ಹಾಕಿದವು. ಅರಮನೆಯ ಜಯಮಾರ್ತಂಡ ದ್ವಾರದಲ್ಲಿ ಗಜಪಡೆಗೆ ಹೂಮಳೆಗರೆಯಲಾಯಿತು. ಸಚಿವ ಎಸ್.ಟಿ.ಸೋಮಶೇಖರ್ ಅವರು ಪೂಜೆ ನೆರವೇರಿಸಿ ಸ್ವಾಗತ ಕೋರಿದರು. ಇದೇ ವೇಳೆ ಕಬ್ಬು, ಬೆಲ್ಲ, …
Read More »ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ: ಜೊಲ್ಲೆ
ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಖಾಲಿ ಇರುವ ಅರ್ಚಕ, ಸಹಾಯಕ ಅರ್ಚಕ, ಸ್ಥಾನಿಕ, ಪಾಚಕ, ಪರಿಚಾರಕ, ವೇದ ಪಾರಾಯಣ, ಪ್ರಬಂಧ ಪಾರಾಯಣ ಮಾಡುವವರ ಮುತಾಂದ ಹುದ್ದೆಗಳನ್ನು ಆದಷ್ಟು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ. ಬುಧವಾರ ಚಾಮರಾಜಪೇಟೆಯ ಹಿಂದೂ ದೇವಾಲಯಗಳ ಅಖಿಲ ಕರ್ನಾಟಕ ಅರ್ಚಕ, ಆಗಮಿಕ, ಉಪಾದೀವಂತರ ಒಕ್ಕೂಟದ ಸದಸ್ಯರು ವಿಕಾಸಸೌಧದಲ್ಲಿ ಸಚಿವ ಡಾ. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ, ಅವರ ಕಚೇರಿಯಲ್ಲಿ …
Read More »ಶೇ.15 ರಷ್ಟು ಶಾಲಾ ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶ: ಸರ್ಕಾರದ ಆದೇಶ ರದ್ದು
ಬೆಂಗಳೂರು: 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶೇ.15 ರಷ್ಟು ಶಾಲಾ ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಶೇ.70ರಷ್ಟು ಮಾತ್ರ ಶುಲ್ಕ ಸ್ವೀಕರಿಸಬೇಕು, ಶೇ.30ರಷ್ಟು ರಿಯಾಯಿತಿ ನೀಡಬೇಕೆಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಕರ್ನಾಟಕದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್ ) ಸೇರಿ ಹಲವು ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ.ಆರ್.ದೇವದಾಸ್ ಅವರಿದ್ದ ಏಕಸದಸ್ಯ …
Read More »6ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಕಾಮುಕ ಆತ್ಮಹತ್ಯೆಗೆ ಶರಣು: ರೈಲ್ವೆ ಹಳಿ ಮೇಲೆ ಶವ ಪತ್ತೆ
ಹೈದರಾಬಾದ್: ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಗುರುವಾರ ವರದಿಯಾಗಿದೆ. ಆರೋಪಿಯ ಮೃತದೇಹವು ಘಣಪುರ್ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದ್ದು, ಪೊಲೀಸರು ಈ ಬಗ್ಗೆ ಮಾಹಿತಿಯನ್ನು ಖಚಿತಪಡಿಸಬೇಕಿದೆ. ಆರೋಪಿಯನ್ನು ಪಲ್ಲಕೊಂಡ ರಾಜು (30) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 9ರಂದು 6 ವರ್ಷದ ಬಾಲಕಿ ಸೈದಾಬಾದ್ನ ಸಿಂಗ್ರೌಣಿ ಕಾಲನಿಯಲ್ಲಿರುವ ತನ್ನ ನಿವಾಸದಿಂದ ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಮೃತದೇಹವು ಬೆಡ್ಶೀಟ್ನಲ್ಲಿ ಸುತ್ತಿಟ್ಟಿದ್ದ ಸ್ಥಿತಿಯಲ್ಲಿ …
Read More »‘ಮೂವರು ಹೆಂಡಿರು, ಸೊಸೆಯಂದಿರನ್ನಿಟ್ಟುಕೊಂಡಿರೋ ರಾಜು ತಾಳಿಕೋಟಿಗೆ ನನ್ನ ಬಗ್ಗೆ ಮಾತನಾಡೋ ನೈತಿಕ ಹಕ್ಕಿಲ್ಲ’
ವಿಜಯಪುರ: ಮೂವರು ಹೆಂಡಿರು, ಮೂರು ಮೂರು ಸೊಸೆಯಂದಿರನ್ನಿಟ್ಟುಕೊಂಡಿರುವ ರಾಜು ತಾಳಿಕೋಟಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ, ಅವನೊಬ್ಬ ಬಕೆಟ್ ಕಲಾವಿದ, ಕಲಿಯುಗದ ಕುಡುಕ ಸ್ಕ್ರಿಪ್ಟ್ ಸಹ ಕದ್ದು ಕ್ಯಾಸೆಟ್ ಮಾಡಿದವ ಎಂದು ಅವನ ಅಳಿಯ ಶೇಕ್‌ಹುಸೇನ ಮೋದಿ ಆರೋಪಿಸಿದ್ದಾರೆ. ಕಲಿಯುಗದ ಕುಡುಕ ಸ್ಕ್ರಿಪ್ಟ್ ರಾಜು ತಾಳಿಕೋಟಿ ಬರೆದಿದ್ದು ಅಲ್ಲ. ಪಾಪ ಅದನ್ನು ಯಾರೋ ಬರೆದದ್ದು, ಅದನ್ನಿಟ್ಟುಕೊಂಡು ಈತ ಕ್ಯಾಸೆಟ್ ಮಾಡಿದ. ಇದೀಗ ನನಗೆ ದೊಡ್ಡ ದೊಡ್ಡ ನಿರ್ಮಾಪಕರು …
Read More »