Breaking News

Monthly Archives: ಮೇ 2021

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

ಕಲಬುರಗಿ: ರಾಜ್ಯಸಬೆಯ ಮಾಜಿ ಸದಸ್ಯ, ಮಾಜಿ ಸಚಿವ, ಹಿರಿಯ ನಾಯಕ ಕೆ.ಬಿ ಶಾಣಪ್ಪ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ಸೋಂಕು ದೃಢವಾಗಿದ್ದ ಅವರನ್ನು ಮೂರು ದಿನಗಳ ಹಿಂದೆ ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಇಂದು ಕೊನೆಯುಸಿರೆಳೆದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಆರಂಭದಲ್ಲಿ ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡ ಶಾಣಪ್ಪ ಅವರು ಎರಡು ಸಲ ಶಹಾಬಾದ ಮೀಸಲು ಕ್ಷೇತ್ರದಿಂದ ಕಮ್ಯುನಿಸ್ಟ್ ಪಕ್ಷದಿಂದ ಶಾಸಕರಾಗಿದ್ದರು. ಅದರಲ್ಲೂ ಒಂದು …

Read More »

ಕೊಡಗು: ಲಾಕ್​ಡೌನ್​ನಿಂದ ಊಟವಿಲ್ಲದೆ ಉಪವಾಸವನ್ನೇ ರೂಢಿಸಿಕೊಂಡ ಕುಟುಂಬ!

ಕೊಡಗು : ದೇಶದಲ್ಲಿ ಕೋವಿಡ್ ಮಹಾಮಾರಿ ವ್ಯಾಪಿಸುತ್ತಿದ್ದಂತೆ ಇನ್ನಷ್ಟು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ 2020 ರಲ್ಲಿ ಇಡೀ ದೇಶವನ್ನೇ ಸಂಪೂರ್ಣ ಲಾಕ್​ಡೌನ್ ಮಾಡಿತ್ತು. ಆ ಸಂದರ್ಭ ಎಷ್ಟೋ ಲಕ್ಷಾಂತರ ಕುಟುಂಬಗಳು ಅನುಭವಿಸಿದ ನೋವು, ಸಂಕಷ್ಟ ಅಷ್ಟಿಷ್ಟಲ್ಲಾ. ಇದರಿಂದ ಕೊಡಗು ಜಿಲ್ಲೆ ಏನು ಹೊರತ್ತಾಗಿರಲಿಲ್ಲ. ಅದೇ ರೀತಿಯಲ್ಲಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದ ಪವಿತ್ರನ್ ಎಂಬುವರ ಕುಟುಂಬ ಒಂದೊತ್ತಿನ ಊಟಕ್ಕೂ ಪರದಾಡಿತ್ತು. ದುಡಿದು ದಿನ್ನೋದಕ್ಕೂ ಅವಕಾಶ ಇಲ್ಲದಿದ್ದರಿಂದ …

Read More »

‘ಹಿಂದೂಸ್ತಾನಿ ಭಾವು’ ಎಂದೂ ಕರೆಯಲ್ಪಡುವ ಹಿಂದಿ ಬಿಗ್​ ಬಾಸ್​ 3 ಖ್ಯಾತಿಯ ವಿಕಾಸ್​ ಫಾಟಕ್​ ಹೊಸದೊಂದು ವಿವಾದ

ಮುಂಬೈ : ‘ಹಿಂದೂಸ್ತಾನಿ ಭಾವು’ ಎಂದೂ ಕರೆಯಲ್ಪಡುವ ಹಿಂದಿ ಬಿಗ್​ ಬಾಸ್​ 3 ಖ್ಯಾತಿಯ ವಿಕಾಸ್​ ಫಾಟಕ್​ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಮುಂಬೈ ನಗರದಲ್ಲಿ ಆಂಬುಲೆನ್ಸ್ ಬಳಸಿಕೊಂಡು ಶಿವಾಜಿ ಪಾರ್ಕ್​ ತಲುಪಿ, ಪ್ರತಿಭಟನೆ ಕೈಗೊಂಡ ಫಾಟಕ್​​ರನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ವಿವಾದಾತ್ಮಕ ವಿಡಿಯೋಗಳಿಗೆ ಹೆಸರಾಗಿರುವ ಗಾಯಕ ಫಾಟಕ್​, 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದರು. ನಗರದಲ್ಲಿ ಓಡಾಟದ ಮೇಲೆ ನಿರ್ಬಂಧ ಇರುವ …

Read More »

ಬೈಕ್ ನಿಂದ ಕೆಳಕ್ಕೆ ಬಿದ್ದ ಮಹಿಳೆಗೆ ಆರೈಕೆ ಮಾಡಿದ ಮಸ್ಕಿ ಶಾಸಕ ತುರವಿಹಾಳ

ಮಸ್ಕಿ (ರಾಯಚೂರು): ಬಿಸಿಲಿನ ತಾಪ ತಾಳದೆ ಬೈಕ್ ನಿಂದ ಕೆಳಗೆ ಬಿದ್ದ ಮಹಿಳೆಯನ್ನು ಶಾಸಕ ಆರ್. ಬಸನಗೌಡ ತುರವಿಹಾಳ ಆರೈಕೆ ಮಾಡಿದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆಯಿತು. ಬೈಕ್ ಸವಾರನ ಹಿಂಬದಿ ಕುಳಿತಿದ್ದ ಮಹಿಳೆ ಬಿಸಿಲಿನ ತಾಪ ತಾಳಲಾರದೆ ಕೆಳಗೆ ಬಿದ್ದರು. ಬೈಕ್ ಹಿಂದಿಯೇ ತನ್ನ ಇನ್ನೊವಾ ಕಾರಿನಲ್ಲಿ ಹೊರಟಿದ್ದ ಶಾಸಕ ಬಸನಗೌಡ ತುರವಿಹಾಳ ಕೂಡಲೇ ತನ್ನ ವಾಹನದಿಂದ ಕೆಳಗೆ ಇಳಿದು ರಸ್ತೆ ಬದಿ ಬಿದ್ದಿದ್ದ ಮಹಿಳೆಗೆ ನೀರು ಕುಡಿಸಿ …

Read More »

ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಾನು ಮತ್ತು ನನ್ನ ತಂದೆ ಮೇಲೆ ದರ್ಪ ಮೆರೆದಿದ್ದಾರೆ ಎಂದು ಆರೋಪಿ

ನಂಜನಗೂಡು: ತಂದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್‌ ಕರೆದುಕೊಂಡು ಬರುತ್ತಿದ್ದಾಗ, ಕೋವಿಡ್‌ ನಿಯಮದ ಹೆಸರಿನಲ್ಲಿ ವ್ಯಕ್ತಿಯೊಂದಿಗೆ ಪೊಲೀಸರು ಅಟ್ಟಹಾಸ ಮೆರೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಚಂದ್ರಶೇಖರಯ್ಯ ಎಂಬವರು ಪೊಲೀಸರಿಂದ ನಿಂದನೆಗೆ ಒಳಗಾದ ವ್ಯಕ್ತಿ. ಬಿಪಿ, ಶುಗರ್‌ ರೋಗಿ ತಂದೆಯನ್ನು ಎಂದಿನಂತೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಹುಲ್ಲಹಳ್ಳಿ ರಸ್ತೆ ಬಳಿ ಆದರ್ಶ ಶಾಲೆ ಬಳಿ ಚಂದ್ರಶೇಖರಯ್ಯ ವಾಪಸ್‌ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಪೊಲೀಸರು ಬೈಕ್‌ ತಡೆದು ತಪಾಸಣೆ ನಡೆಸಿದ್ದಾರೆ. …

Read More »

ಮೂರನೆ ಬಾರಿ ದೆಹಲಿಯಲ್ಲಿ ಲಾಕ್ ಡೌನ್ ವಿಸ್ತರಣೆ, ಒಂದು ವಾರ ಮತ್ತೆ ಬಂದ್ ಆಗಲಿದೆ ದೆಹಲಿ

ನವದೆಹಲಿ : ಮಾರಕ ಕೊರೋನಾ ನಿಯಂತ್ರಿಸುವ ಸಂಬಂಧ ರಾಜಧಾನಿ ದೆಹಲಿಯಲ್ಲಿ ಹೇರಲಾಗಿರುವ ಲಾಕ್ ಡೌನ್ ಮತ್ತೆ ವಿಸ್ತರಿಸಲಾಗಿದೆ . ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಈ ಮಾಹಿತಿ ನೀಡಿದ್ದಾರೆ . ಒಂದು ವಾರ ಲಾಕ್ ಡೌನ್ ವಿಸ್ತರಿಸಲಾಗಿದೆ . ಮೇ 17 ರ ತನಕ ಲಾಕ್ ಡೌನ್ ಮುಂದುವರಿಯಲಿದ್ದು,ಲಾಕ್ ಡೌನ್ ಅವಧಿಯಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಅರವಿಂದ ಕೇಜ್ರವಾಲ್ ಸ್ಪಷ್ಟಪಡಿಸಿದ್ದಾರೆ . ಇದೀಗ ಮೂರನೆ ಬಾರಿ ದೆಹಲಿಯಲ್ಲಿ ಲಾಕ್ …

Read More »

ಅಚ್ಛೇದಿನ್? ನಳೀನ್ ಕುಮಾರ ಕಟೀಲು ಎಲ್ಲಿ ಅಡಗಿಕೊಂಡಿದ್ದಾರೆ?: ಲಕ್ಷ್ಮಿ ಹೆಬ್ಬಾಳಕರ್

ಕೊರೋನಾ ನಿಯಂತ್ರಣ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಸಂಪೂರ್ಣ ವಿಫಲವಾಗಿವೆ. ಇಡೀ ದೇಶದಲ್ಲಿ ಬೀದಿ ಬೀದಿಯಲ್ಲಿ ಹೆಣ ಸುಡುವಂತಾಗಿದೆ. ಎಲ್ಲಿ ಹೋಯಿತು ನಿಮ್ಮ ಅಚ್ಛೇ ದಿನ್? ನಮಗೆ ಅಚ್ಛೇ ದಿನ್ ಬೇಡ. 2013ರಲ್ಲಿದ್ದಂತಹ ದಿನಗಳೇ ಇದ್ದರೆ ಸಾಕು ಎಂದು ರಾಷ್ಟ್ರದ ಜನರು ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ …

Read More »

ನೀವು ‘ಕೊರೋನಾ ಸೋಂಕಿತ’ರಾಗಿದ್ದೀರಾ.? ಹಾಗಿದ್ದರೇ ಭಯಬೇಡ.! ‘ಆನ್ ಲೈನ್’ನಲ್ಲೇ ‘ತಜ್ಞ ವೈದ್ಯ’ರಿಂದ ಸಲಹೆ ಪಡೆಯಿರಿ.!

ರಾಜ್ಯಾಧ್ಯಂತ ಕೊರೋನಾ ಸೋಂಕಿನ ಆರ್ಭಟ ಮುಂದುವರೆದಿದೆ. ದಿನವೊಂದಕ್ಕೆ 40 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಹೊಸದಾಗಿ ಪರೀಕ್ಷೆಯಿಂದ ದೃಢಪಡುತ್ತಿದೆ. ಈ ಸಮಯದಲ್ಲಿ ಬೇಕಿರೋದು ಸೋಂಕಿತರಾದವರಿಗೆ ಧೈರ್ಯ. ಜೊತೆಗೆ ತಜ್ಞ ವೈದ್ಯರ ಸಲಹೆ. ಹಾಗಿದ್ದರೇ ನೀವು ಕೊರೋನಾ ಸೋಂಕಿತರಾಗಿದ್ದೀರಾ.? ಆಸ್ಪತ್ರೆಗೆ ಅನವಶ್ಯಕ ಭೇಟಿ ಕಡಿಮೆ ಮಾಡಿ, ತಜ್ಞ ವೈದ್ಯರಿಂದ ಆನ್ ಲೈನ್ ನಲ್ಲೇ ಹೇಗೆ ಚಿಕಿತ್ಸೆಯ ಸಲಹೆ ಪಡೆಯಬಹುದು ಎನ್ನುವ ಬಗ್ಗೆ ಮುಂದೆ ಓದಿ.. ಕೊರೋನಾ ಸೋಂಕಿನ ವೈರಸ್ ಅಬ್ಬದ …

Read More »

ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.

ಅಮ್ಮ ಎಂಬ ಪದ ಮಗು ತನ್ನ ಮೊದಲ ತೊದಲು ನುಡಿಯಲ್ಲೇ ಹೇಳುವ ಪದ. ಏನು ಅರಿಯದ ಸಮಯದಲ್ಲಿ ಒಡಲೊಳಗೆ ಬೆಚ್ಚಗೆ ಇರಿಸಿ ಕಾಪಾಡಿದ ಅಮ್ಮ ಇನ್ನು ಪ್ರಪಂಚಕ್ಕೆ ಲಗ್ಗೆಯಿಟ್ಟ ಮೇಲೆ ಪ್ರತಿ ಹೆಜ್ಜೆಯ ಜೊತೆಯಾದಳು ಅಮ್ಮ. ನಾವು ನಮ್ಮನ್ನು ಅರಿತುಕೊಳ್ಳುವ ಮೊದಲೇ ಅಮ್ಮನನ್ನು ಅವಲಂಬಿಸಿ ಪ್ರತಿ ಅಮ್ಮನ ಭಾವನೆಗಳಿಗೆ ಸ್ಪಂದಿಸಿರುತ್ತೇವೆ. ಜಗತ್ತಲ್ಲಿ ಅಮ್ಮನ ಪ್ರೀತಿ, ತ್ಯಾಗ ಮತ್ತು ವಾತ್ಸಲ್ಯಕ್ಕೆ ಮಿಗಿಲಾದವು ಯಾವುದು ಇಲ್ಲ. ಅವಳ ನಿಷ್ಕಲ್ಮಶದ ಪ್ರೀತಿಗೆ ನಾವು ಪ್ರತಿಯಾಗಿ …

Read More »

ಲಾರಿ ಚಾಲನೆ ವೇಳೆ ನಿದ್ರೆ: ಅಪಘಾತದಲ್ಲಿ ಚಾಲಕ ಚಿರನಿದ್ರೆಗೆ

ಪಾಂಡವಪುರ: ಮರಕ್ಕೆ ಲಾರಿ ಡಿಕ್ಕಿ ಹೊಡೆದು ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೆನ್ನಾಳು ಗ್ರಾಮದ ಗೇಟ್ ಬಳಿ ನಡೆದಿದೆ. ತಮಿಳುನಾಡು ರಾಜ್ಯದ ನಿವಾಸಿ, ಲಾರಿ ಚಾಲಕ ಕರಪಸ್ವಾಮಿ (26) ಮೃತ ವ್ಯಕ್ತಿ. ಕಳೆದ ರಾತ್ರಿ 12 ಗಂಟೆ ಸಮಯದಲ್ಲಿ ನಾಗಮಂಗಲ ಮಾರ್ಗದಿಂದ ತಮಿಳುನಾಡು ರಾಜ್ಯಕ್ಕೆ ಲಾರಿಯಲ್ಲಿ ತೆಂಗಿನ ಚಗರೆಯನ್ನು ತುಂಬಿಕೊಂಡು ತೆರಳುತ್ತಿದ್ದಾಗ ತಾಲ್ಲೂಕಿನ ಕೆನ್ನಾಳು ಗೇಟ್ ಬಳಿ ಚಾಲಕ ಕರಪಸ್ವಾಮಿ ನಿದ್ರೆಗೆ ಜಾರಿದಾಗ ಲಾರಿ ಮರಕ್ಕೆ ಡಿಕ್ಕಿ …

Read More »