Breaking News

Monthly Archives: ಫೆಬ್ರವರಿ 2021

‘ಅನ್ನಭಾಗ್ಯ’ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ‘ಅಂತ್ಯೋದಯ’ ಕಾರ್ಡ್ ದಾರರಿಗೆ 35 ಕೆಜಿ ಅಕ್ಕಿ

ಯಾದಗಿರಿ: ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಯಾದಗಿರಿ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆ ಹಾಗೂ ರಾಜ್ಯ ಸರ್ಕಾರದ ಎನ್.ಎಫ್.ಎಸ್.ಎ ಯೋಜನೆಯಡಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಅಂತ್ಯೋದಯ ಅನ್ನ ಯೋಜನೆಯ 29,353 ಪಡಿತರ ಚೀಟಿಗಳಿಗೆ ಮತ್ತು ಎನ್.ಎಫ್.ಎಸ್.ಎ ಅಡಿಯಲ್ಲಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಹಾಗೂ 2,35,356 ಬಿಪಿಎಲ್ ಪಡಿತರ ಚೀಟಿಗಳ 8,49,922 ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಹಾಗೂ ಓ.ಎಮ್.ಎಸ್.ಎಸ್.(ಡಿ) ಅಡಿಯಲ್ಲಿ ಬಿ.ಪಿ.ಎಲ್. ಪಡಿತರ …

Read More »

ಸಖತ್ ವೈರಲ್ ಆದ ಈ ವೆಡ್ಡಿಂಗ್ ಮೆನು ವಿಶೇಷತೆ ಏನು ಗೊತ್ತಾ..?

ಕೋಲ್ಕತ್ತಾ: ಆಧಾರ್ ಕಾರ್ಡ್ ಪಡೆಯುವುದು ಅದರಲ್ಲಿನ ಮಾಹಿತಿ ತಿದ್ದುಪಡಿ ಮಾಡಿಸುವುದೆಂದರೆ ದೊಡ್ಡ ಸಾಹಸವೇ ಸರಿ. ಆಧಾರ್ ಕೇಂದ್ರಗಳ ಮುಂದೆ ಉದ್ದದ ಕ್ಯೂ ಇರುವುದನ್ನು ಕಾಯಂ ಕಾಣುತ್ತೇವೆ. ಆದರೆ, ಇವರ ಮದುವೆಗೆ ಬಂದವರಿಗೆಲ್ಲ ಸುಲಭವಾಗಿ ಆಧಾರ್ ಕಾರ್ಡ್ ಸಿಕ್ಕಿದೆ.!!!! ಹೌದು, ಕೊಲ್ಕತ್ತಾದ ಗೋಗೋಲ್ ಶಹಾ ಹಾಗೂ ಸುಬರ್ನಾ ದಾಸ್ ಈ ವಾರದ ಪ್ರಾರಂಭದಲ್ಲಿ ವಿವಾಹವಾದರು. ಅವರ ಮದುವೆಗೆ ಹೋದವರಿಗೆಲ್ಲ ಆಧಾರ್ ಕಾರ್ಡ್ ನೀಡಲಾಗಿತ್ತು. ಆದರೆ, ಕಾರ್ಡ್ ನಿಜವಾದುದಲ್ಲ. ಮದವೆಯ ಊಟದಲ್ಲಿದ್ದ ತಿಂಡಿಗಳ …

Read More »

ಇಂದು ‘ಪೊಗರು’ ಚಿತ್ರದ ಖರಾಬು ಹಾಡು ತಮಿಳಿನಲ್ಲಿ ರಿಲೀಸ್

ನಂದಕಿಶೋರ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷೆಯ ‘ಪೊಗರು’ ಚಿತ್ರದ ಖರಾಬು ಹಾಡು ಕನ್ನಡದಲ್ಲಿ ಈಗಾಗಲೇ 200ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ‘ಪೊಗರು’ ಸಿನಿಮಾ ತಮಿಳಿನಲ್ಲೂ ರಿಲೀಸ್ ಆಗುತ್ತಿದ್ದು, ಈ ಚಿತ್ರದ ಖರಾಬು ಹಾಡನ್ನು ತಮಿಳಿನಲ್ಲಿ ಇಂದು 12:12ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ. ‘ಪೊಗರು’ ಸಿನಿಮಾ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆ. ಬಿ ಕೆ ಗಂಗಾಧರ್ ಈ …

Read More »

ಫೆಬ್ರವರಿ 13ಕ್ಕೆ ‘ಪ್ರೇಮಂ ಪೂಜ್ಯಂ’ ಚಿತ್ರದ ಟೀಸರ್ ರಿಲೀಸ್

ಡಾ.ರಾಘವೇಂದ್ರ ಅವರ ಚೊಚ್ಚಲ ನಿರ್ದೇಶನದ ‘ಪ್ರೇಮಂ ಪೂಜ್ಯಂ’ ಸಿನಿಮಾ ಟೀಸರ್ ಅನ್ನು ಫೆಬ್ರವರಿ 13ರಂದು ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ನಾಯಕನಾಗಿ ಅಭಿನಯಿಸಿದ್ದು, ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಇದು ಅವರ 25ನೇ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಐಂದ್ರಿತಾ ರೇ ನಾಯಕಿಯಾಗಿ ನಟಿಸಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಪ್ರೋಮೋವೊಂದನ್ನು kedambadicreations ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದರು. ಇದೀಗ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

Read More »

ನಕ್ಷತ್ರ ಆಮೆ ಮಾರಾಟ ಯತ್ನ: ಇಬ್ಬರ ಸೆರೆ

ಕಲಬುರಗಿ: ನಗರದ ರೈಲು ನಿಲ್ದಾಣದ ಬಳಿ ನಕ್ಷತ್ರ ಆಮೆಯೊಂದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ವಿದ್ಯಾನಂದ ಮತ್ತು ಜಿತೇಂದ್ರ ಬಂಧಿತ ಆರೋಪಿಗಳು. ಇವರುಜೀವಂತ ನಕ್ಷತ್ರ ಆಮೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಆಮೆ ಸಂತತಿ ಆಳಿವಿನ ಅಂಚಿಗೆ ತಲುಪಿದ್ದು, ಅಪರೂಪದ್ದಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಕ್ಷತ್ರ ಆಮೆಗೆ ತುಂಬಾ ಬೇಡಿಕೆ ಇದೆ. ನಕ್ಷತ್ರ ಆಮೆ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂರಕ್ಷಣಾಧಿಕಾರಿ …

Read More »

ಹೊಸ ಪ್ರಸ್ತಾಪದೊಂದಿಗೆ ಚರ್ಚೆಗೆ ಬನ್ನಿ: ‘ಟ್ರ್ಯಾಕ್ಟರ್ ಕ್ರಾಂತಿ’ಗೆ ಕರೆ ನೀಡಿದ ರಾಕೇಶ್ ಟಿಕಾಯತ್

ಗಾಜಿಯಾಬಾದ್: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ಕೇಂದ್ರ ಸರ್ಕಾರ ಹೊಸ ಪ್ರಸ್ತಾಪದೊಂದಿಗೆ ಚರ್ಚೆಗೆ ಬಂದರೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಗಾಜಿಪುರ ಗಡಿಯಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್, ನಾವು ಸರ್ಕಾರದೊಂದಿಗೆ ಮತ್ತೆ ಚರ್ಚೆ ನಡೆಸಲು ಸಿದ್ಧರಿದ್ದೇವೆ. ಆದರೆ ಕೃಷಿ ಕಾನೂನುಗಳನ್ನು 12 ರಿಂದ 18 ತಿಂಗಳು ಅಮಾನತು ಮಾಡುವ ಸರ್ಕಾರದ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ. …

Read More »

ಭಕ್ತರ ನಂಬಿಕೆಗೆ ಧಕ್ಕೆಯಾಗದಂತೆ ಶಬರಿಮಲೆ ನಿಯಮ

ಕೊಚ್ಚಿ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಜಯ ಗಳಿಸಿದರೆ, ಶಬರಿಮಲೆಯಲ್ಲಿ ಮಹಿಳಾ ಪ್ರವೇಶಾತಿಗೆ ಸಂಬಂಧಿಸಿದಂತೆ ಭಕ್ತರ ನಂಬಿಕೆಗಳಿಗೆ ಧಕ್ಕೆಯಾಗದಂತೆ ನಿಯಮ ರೂಪಿಸಲಾಗುವುದು ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ (ಕೆಪಿಸಿಸಿ) ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿಕೆ ನೀಡಿದ್ದಾರೆ. ಕೊಚ್ಚಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ರಾಮಚಂದ್ರನ್, ಮುಂಬರುವ ಚುನಾವಣೆಯಲ್ಲಿ ಯುಡಿಎಫ್ ಪ್ರಣಾಳಿಕೆಯಲ್ಲಿ ಶಬರಿಮಲೆ ವಿಷಯ ಪ್ರಮುಖ ಅಂಶವಾಗಿರಲಿದೆ ಎಂದು ಹೇಳಿದರು. ಯುಡಿಎಫ್ ಚುನಾವಣಾ ಪ್ರಣಾಳಿಕೆಯಲ್ಲಿ ಶಬರಿಮಲೆ …

Read More »

ಕುಂದಾನಗರಿಯಲ್ಲಿ ಮಸಾಜ್ ಸೆಂಟರ್ ಹೆಸರಲ್ಲಿ ದಂಧೆ

ಬೆಳಗಾವಿ: ಕುಂದಾನಗರಿಯಲ್ಲಿ ಮಸಾಜ್ ಸೆಂಟರ್ ಹೆಸರಲ್ಲಿ ಅನೈತ ಚಟುವಟಿಕೆ ನಡೆಸುತ್ತಿದ್ದ ತಾಣದ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬರು ಅರೋಪಿಗಳನ್ನು ಬಂಧಿಸಿದ್ದು, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಟಿಳಕವಾಡಿ ಬಳಿ ನ್ಯೂ ಗೇಟ್ ವೇ ಯುನಿಸೆಕ್ಸ್ ಸ್ಪಾ ಹೆಸರಲ್ಲಿ ಮಸಾಜ್ ಸೆಂಟರ್ ತೆರೆಯಲಾಗಿದ್ದು, ಇಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಖಚಿತ ಮಾಹಿತಿ ಪಡೆದ ಪೊಲೀಸರು, ಸಿಪಿಐ ಗಡ್ಡೆಕರ್ ನೇತೃತ್ವದಲ್ಲಿ ದಾಳಿ ನಡೆಸಿ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಮಸಾಜ್ …

Read More »

ಬೇವನ್ನು ಬಿತ್ತಿ ಮಾವನ್ನು ನಿರೀಕ್ಷಿಸಬಹುದೇ..?

ಬೇವನ್ನು ಬಿತ್ತಿ ಮಾವನ್ನು ನಿರೀಕ್ಷಿಸಬಹುದೇ..? ಉಪದೇಶದ ಮಾತುಗಳು, ತಾತ್ವಿಕ ವಿಚಾರಗಳು ಅಷ್ಟಾಗಿ ನೆನಪಿನಲ್ಲಿ ಉಳಿಯುವುದಿಲ್ಲ. ಕಥೆಗಳು, ಕಥಾನಕಗಳು ಬಹಳ ಕಾಲ ಮನಸ್ಸಿನಲ್ಲಿ ಉಳಿಯುವುದಲ್ಲದೆ ಕೇಳುಗರ ಮನಸ್ಸಿನ ಮೇಲೆ ತುಂಬಾ ಪ್ರಭಾವವನ್ನು ಬೀರುತ್ತವೆ. ಭಾರತದ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣದ ಕಥೆಗಳು ಸಹಸ್ರಾರು ವರ್ಷಗಳಿಂದ ಜನಮಾನಸದಲ್ಲಿ ಉಳಿದು ಬಂದಿರುವುದು ಶಾಲಾ ಶಿಕ್ಷಣದಿಂದ ಅಲ್ಲ. ಮನೆಯಲ್ಲಿರುವ ತಾಯಂದಿರಿಂದ, ಅಜ್ಜ ಅಜ್ಜಿಗಳಿಂದ. ಹಬ್ಬ ಹರಿದಿನಗಳಂದು ಮಠಮಂದಿರಗಳಲ್ಲಿ ಏರ್ಪಡಿಸುವ ಕಥಾಶ್ರವಣಗಳಿಂದ. ಪರಂಪರಾಗತವಾಗಿ ಕೇಳಿಬಂದ ಇಂತಹ ಕಥಾನಕಗಳು ವ್ಯಕ್ತಿಯ …

Read More »

ತಲೆ ಕತ್ತರಿಸಿ ವ್ಯಕ್ತಿಯೊಬ್ಬನ ಭೀಕರ ಹತ್ಯೆ..!

ಚಿಕ್ಕಬಳ್ಳಾಪುರ,ಫೆ.7- ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಂಬಾಲಿಸಿ ಶಿರ ಕಡಿದು ಹತ್ಯೆ ಮಾಡಿರುವ ಘಟನೆ ಗುಂಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡಿಬಂಡೆ ತಾಲ್ಲೂಕಿನ ಬೋಗೇನಹಳ್ಳಿ ಗ್ರಾಮದ ನರಸಿಂಹಪ್ಪ(47) ಕೊಲೆಯಾದ ವ್ಯಕ್ತಿ.ಮೃತ ನರಸಿಂಹಪ್ಪ ತನ್ನ ದ್ವಿಚಕ್ರ ವಾಹನದಲ್ಲಿ ಬೋಗೇನಹಳ್ಳಿಯಿಂದ ವರದಯ್ಯಗಾರಹಳ್ಳಿಗೆ ತೆರಳುತ್ತಿದ್ದಾಗ ಅಪರಿಚಿತರು ಹಿಂಬದಿಯಿಂದ ಬಂದು ಮಚ್ಚಿನಿಂದ ಶಿರ ಕಡಿದು ಕೊಲೆ ಮಾಡಿದ್ದಾರೆ. ಹಾಡುಹಗಲೇ ಈ ಕೃತ್ಯ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ದುಷ್ಕರ್ಮಿಗಳ ಗುರುತು ಪತ್ತೆಯಾಗಿಲ್ಲ. ಕೊಲೆಗೆ ಕಾರಣವೇನೆಂಬುದು ಕೂಡ …

Read More »