Breaking News

Monthly Archives: ಫೆಬ್ರವರಿ 2021

ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಸಂಪ್ಲಿಮೆಂಟರಿ ಚಾರ್ಜಶೀಟ್ ನಲ್ಲಿ ಕೊಲೆಗೆ ಸಂಬಂಧಿಸಿದಂತೆ ಇಂಚಿಂಚು ಮಾಹಿತಿ

ಧಾರವಾಡ(ಫೆ. 10):  ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಸಿಬಿಐ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಈಗಾಗಲೇ ನ್ಯಾಯಾಲಯಕ್ಕೆ ಸಂಪ್ಲಿಮೆಂಟರಿ ಚಾರ್ಜಶೀಟ್ ಸಲ್ಲಿಸಿದ್ದಾರೆ. ಚಾರ್ಜಶೀಟ್ ನಲ್ಲಿರು ಏನಿದೆ ಎಂಬುದರ  ಪ್ರತಿ‌ ಇದೀಗ ಲಭ್ಯವಾಗಿದೆ‌‌. ಸಿಬಿಐ ತನಿಖೆ ಕೈಗೆತ್ತಿಕೊಂಡ ಬಳಿಕ‌ ನಡೆದ‌ ಎಲ್ಲ ಮಾಹಿತಿಯನ್ನು ಕಲೆಹಾಕಿದ್ದಾರೆ. ಯೋಗೇಶಗೌಡ ಕೊಲೆಗೆ ಸಂಬಂಧಿಸಿದಂತೆ ಹಲವರನ್ನು ಕರೆಸಿ ತನಿಖೆ ಆರಂಭ ಮಾಡಿದ್ದರು. ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಸಂಪ್ಲಿಮೆಂಟರಿ ಚಾರ್ಜಶೀಟ್ ನಲ್ಲಿ  ಕೊಲೆಗೆ ಸಂಬಂಧಿಸಿದಂತೆ …

Read More »

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ರ ಮನಗೆದ್ದ ಕಬ್ಬಿನ ಗದ್ದೆ ಡ್ಯಾನ್ಸ್‌

ಹಳೇ ಹಾಡುಗಳ ಮರುಸೃಷ್ಟಿ ಸಿನೆಮಾದಲ್ಲಿ ಹೊಸತಲ್ಲ. ಆದರೆ, ಹಳೇ ಸಿನೆಮಾದ ಜನಪ್ರಿಯ ಹಾಡನ್ನು ಇಲ್ಲೊಬ್ಬಳು ಹುಡುಗಿ ಕಬ್ಬಿನ ಗದ್ದೆ ನಡುವೆ ಅಭಿನಯಿಸಿ, ತೋರಿಸಿ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ರ ಮನಸ್ಸು ಗೆದ್ದಿದ್ದಾಳೆ. 1957ರ ‘ಮದರ್‌ ಇಂಡಿಯಾ’ ಚಿತ್ರದಲ್ಲಿ ನಟಿ ನರ್ಗೀಸ್‌ ಗದ್ದೆಗಳ ಮಧ್ಯದಲ್ಲಿ ‘ಘೂಂಘಾಟ್‌ ನಹೀಂ ಖೂಲೂನ್‌ ಸೈಯಾ ಟೊರೆ ಆಗೆ…’ ಎಂಬ ಹಾಡಿಗೆ ನರ್ತಿಸಿದ್ದರು. ಲತಾ ಮಂಗೇಶ್ಕರ್‌ ಕಂಠದಿಂದ ಹೊಮ್ಮಿದ್ದ ಈ ಹಾಡಿನ ಜನಪ್ರಿಯತೆ ಮನಗಂಡ ಉತ್ತರಪ್ರದೇಶದ ಅಮೊಹಾ …

Read More »

ಬಾಲಕಿಯನ್ನು ಬೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೋಳಂತೂರು ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಅದರೊಂದಿಗೆ ವಿಷಯ ಎಲ್ಲಾದರೂ ಬಾಯ್ಬಿಟ್ಟರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತಾದ ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಅಬೂಬಕ್ಕರ್ ಸಿದ್ದಿಕಿ ಹಾಗೂ ಚಪ್ಪಿ …

Read More »

ಕೃಷಿ ಕಾಯ್ದೆ ಜಾರಿಯಿಂದ ರೈತರ ಯಾವ ಹಕ್ಕನ್ನೂ ಕಸಿದುಕೊಳ್ಳಲಾಗಿಲ್ಲ.: ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಭಾಷಣ ದೇಶದ 130 ಕೋಟಿ ಜನರ ಸಂಕಲ್ಪ.ಇಂಥ ಸಂಕಷ್ಟದ ಸಂದರ್ಭದಲ್ಲಿ ರಾಷ್ಟ್ರಪತಿ ಭಾಷಣ ದೈರ್ಯ ತುಂಬಿದೆ ಎಂದು ಹೇಳಿದರು. ಕೊನೆಯ ಬ್ರಿಟೀಷ್ ಕಮಾಂಡರ್ ಒಂದು ಮಾತು ಹೇಳಿದ್ದರು. ಭಾರತ ಅನೇಕ ದೇಶಗಳ ಮಾಹಾದ್ವೀಪ ಎಂದು. ಭಾರತ ಒಂದು ಪವಾಡದ ಪ್ರಜಾಪ್ರಭುತ್ವ ರಾಷ್ಟ್ರ. ವಿವಿಧತೆಯಿಂದ ತುಂಬಿರುವ ದೇಶ. ಆದರೂ ಭಾರತ ಒಂದು ಗುರಿಯತ್ತ ಮುನ್ನುಗ್ಗುತ್ತಿದೆ. ಸ್ವಾತಂತ್ರ್ಯದ 75 …

Read More »

ಬೆಳಗಾವಿಯಲ್ಲಿ ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿ 13 ಜನರನ್ನು ಬಂಧಿಸಿದ್ದಾರೆ.

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಪೊಲೀಸರು ಹಳೆ ಬಾಜಿ ಮಾರ್ಕೆಟ್ ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿದ್ದು, 13 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 17,020 ರೂಪಾಯಿ ಹಣ, 15 ಮೊಬೈಲ್ ಹಾಗೂ 6 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ ಕಮಿಷನರೇಟಿನ ವ್ಯಾಪ್ತಿಯಲ್ಲಿ ತಡರಾತ್ರಿ ಹಳೆ ಬಾಜಿ ಮಾರ್ಕೆಟ್ ಮೇಲೆ ಮಟಕಾ ದಾಳಿ;ಒಟ್ಟು 13 ಜನ ಆರೋಪಿಗಳ ದಸ್ತಗೀರ್;ರೂ.17,020 /- ಹಣ,15 ಮೊಬೈಲ್ ಹಾಗೂ 6 ಬೈಕ್ ಜಪ್ತಿ ಮಾಡಲಾಗಿದ್ದು, ಪ್ರಕರಣ …

Read More »

ದಿಂಗಾಲೇಶ್ವರ ಶ್ರೀಗಳು ಯಾರೂ ಎಂಬುದೇ ಗೊತ್ತಿಲ್ಲ ಜಾಗವನ್ನು ಯಾವುದೇ ಕಾರಣಕ್ಕೂ ಮರಳಿ ಕೊಡುವುದಿಲ್ಲ: ಪ್ರಭಾಕರ ಕೋರೆ

ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ಆಗುವ ವಿಷಯದಲ್ಲಿ ಗೊಂದಲವಾಗುತ್ತಲೇ ಬಂದಿದ್ದು, ಈಗ ಕೆಎಲ್ಇ ಸಂಸ್ಥೆಯ ಹೆಸರನ್ನ ಮುಂದೆಲೆಯಾಗಿ ತೆಗೆದುಕೊಂಡು ಹೆಸರು ಕೆಡಿಸಲಾಗುತ್ತಿದೆ ಎಂದು ಕೆಎಲ್ಇ ಸಂಸ್ಥೆಯ ಚೇರಮನ್ ಪ್ರಭಾಕರ ಕೋರೆ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಭಾಕರ ಕೋರೆ, ಗದಗ ತೊಂಟದಾರ್ಯ ಸ್ವಾಮಿಗಳ ಬಳಿ ಹೋದಾಗ, ಅವರು ಮೂರುಸಾವಿರ ಮಠದವರಿಗೆ ತಿಳಿಸಿ, ಅಲ್ಲಿ ವೈದ್ಯಕೀಯ ಕಾಲೇಜ್ ಮಾಡೋಕೆ ಮುಂದಾಗ್ಲಿ ಎಂದ್ರು. ಹಾಗಾಗಿಯೇ ನಾವೂ ಮೂರುಸಾವಿರ ಮಠದ ಹಿರಿಯ ಸ್ವಾಮೀಜಿಗಳನ್ನ ಭೇಟಿಯಾಗಿದ್ವಿ. ಆಗ …

Read More »

ಪಿಯುಸಿ ತರಗತಿ ದಾಖಲಾತಿ ಅವಧಿ ವಿಸ್ತರಣೆ

ಬೆಂಗಳೂರು, ಫೆ.10- ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾತಿ ಹಾಗೂ ಕಾಲೇಜು ಬದಲಾವಣೆಗೆ ಫೆಬ್ರವರಿ 20ರ ವರೆಗೂ ಕಾಲಾವಕಾಶ ನೀಡಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ದಾಖಲಾತಿ ಹಾಗೂ ಕಾಲೇಜು ಬದಲಾವಣೆ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಪದವಿ ಪೂರ್ವ ಕಾಲೇಜುಗಳ ದಾಖಲಾತಿ ದಿನಾಂಕವನ್ನು ವಿಸ್ತರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿ …

Read More »

50 ದೇಶಗಳಲ್ಲಿ ವಿಕ್ರಾಂತ್ ರೋಣ ರಿಲೀಸ್; 3ಡಿ ರೂಪದಲ್ಲಿರಲಿದೆ: ಸುದೀಪ್

ಕಿಚ್ಚ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಟೀಸರ್‌ ಹಾಗೂ ಕಟೌಟ್‌ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ಮೇಲೆ ರಾರಾಜಿಸಿ ವಿಶ್ವದ ಗಮನಸೆಳೆದಿತ್ತು. ಇದರ ಬೆನ್ನಲ್ಲೇ ಹಲವು ಭಾಷೆಗಳಲ್ಲಿ ತೆರೆಯ ಮೇಲೆ ಬರಲಿರುವ ಈ ಚಿತ್ರವು 3ಡಿ ರೂಪದಲ್ಲಿ ಇರಲಿದೆ ಎಂದು ಸುದೀಪ್‌ ತಿಳಿಸಿದ್ದಾರೆ. ಚಂದನವನದಲ್ಲಿ ಸುದೀಪ್‌ 25 ವಸಂತಗಳನ್ನು ಪೂರೈಸಿದ ಅಂಗವಾಗಿ ವಿಕ್ರಾಂತ್‌ ರೋಣ ಚಿತ್ರತಂಡವು ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸುದೀಪ್‌ ಈ ಕುರಿತು …

Read More »

ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸುಳ್ಳು ಅಫಿಡವಿಡ್ ಸಲ್ಲಿಸಿ ಸಿಕ್ಕಿಹಾಕಿಕೊಂಡಿದ್ದಾರೆ ನಟ ಸಲ್ಮಾನ್ ಖಾನ್.

ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸುಳ್ಳು ಅಫಿಡವಿಡ್ ಸಲ್ಲಿಸಿ ಸಿಕ್ಕಿಹಾಕಿಕೊಂಡಿದ್ದಾರೆ ನಟ ಸಲ್ಮಾನ್ ಖಾನ್. 1998 ರಲ್ಲಿ ಜೋಧಪುರದಲ್ಲಿ ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 2003 ರಲ್ಲಿ ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ಆದರೆ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ದಾಖಲಿಸಲಾಗಿತ್ತು. ಬಂದೂಕಿನ ಲೈಸೆನ್ಸ್ ಅನ್ನು ಸಲ್ಲಿಸುವಂತೆ ಸಲ್ಮಾನ್ ಖಾನ್ ಗೆ ಜೋಧ್‌ಪುರ ನ್ಯಾಯಾಲಯವು ಸೂಚಿಸಿತ್ತು. ಆದರೆ ಲೈಸೆನ್ಸ್ ಕಳೆದುಹೋಗಿದೆ ಎಂದು ಅಫಿಡವಿಟ್ ಸಲ್ಲಿಸಿದ್ದ ಸಲ್ಮಾನ್ ಖಾನ್, ಬಂದೂಕು ಕಳೆದು …

Read More »

ನೇಪಾಳ, ಶ್ರೀಲಂಕಾದಲ್ಲಿ ಪೆಟ್ರೋಲ್ ಅಗ್ಗ, ಭಾರತದಲ್ಲಿ ಏಕೆ ದುಬಾರಿ ಎಂಬ ಪ್ರಶ್ನೆಗೆ ಸಚಿವರ ಉತ್ತರ ಏನು ಗೊತ್ತಾ?

ನವದೆಹಲಿ: ಇಂಧನ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ತೈಲಗಳ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಕಳೆದ 300 ದಿನಗಳ ಅವಧಿಯಲ್ಲಿ 60 ದಿನ …

Read More »